ನವದೆಹಲಿ: ಭಾರತೀಯ ಪುರಾತತ್ವ ಇಲಾಖೆಯ ಸುಪರ್ದಿಯಲ್ಲಿರುವ ದೇಶದ 10 ಐತಿಹಾಸಿಕ ಸ್ಮಾರಕಗಳ ಭೇಟಿಗೆ ಇದ್ದ ಸಮಯದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ ಎಂದು ಕೇಂದ್ರ ಸಂಸ್ಕೃತಿ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಹೇಳಿದ್ದಾರೆ.
ಭುವನೇಶ್ವರದಲ್ಲಿರುವ ರಾಜರಾಣಿ ದೇವಾಲಯ ಆವರಣ, ಮಧ್ಯಪ್ರದೇಶದ ಚಟ್ಟರ್ಪುರದ ದುಲ್ಹಾದಿಯೋ ದೇವಸ್ಥಾನ (ಖಜುರಾವ್), ಕುರುಕ್ಷೇತ್ರದಲ್ಲಿನ ಶೇಖ್ ಚಿಲ್ಲಿ ಟೋಂಬ್, ದೆಹಲಿಯ ಸಫ್ದರ್ಜಂಗ್ ಟೋಂಬ್ ಮತ್ತು ಹುಮಾಯೂನ್ ಟೋಂಬ್, ಕರ್ನಾಟಕದ ಬಾಗಲಕೋಟೆಯಲ್ಲಿನ ಪಟ್ಟದಕಲ್ಲಿನ ಸ್ಮಾರಕಗಳು, ವಿಜಯಪುರದ ಗೋಲ್ ಗುಂಬಝ್, ಮಹಾರಾಷ್ಟ್ರದ ಗೋಡ್ಚಿರೋಲಿಯಲ್ಲಿನ ದೇಗುಲಗಳು, ಗುಜರಾತ್ನ ಪಟಾನ್ನಲ್ಲಿರುವ ರಾಣಿ ಜಿ ವಾವ್, ವಾರಣಾಸಿಯ ಮ್ಯಾನ್ ಮಹಲ್- ಈ ಐತಿಹಾಸಿಕ ಸ್ಮಾರಕಗಳಿಗೆ ಭೇಟಿ ನೀಡಲು ಇದ್ದ ಸಮಯದ ಅವಧಿಯನ್ನು ವಿಸ್ತರಣೆ ಮಾಡಲಾಗಿದೆ.
ಸುರ್ಯೋದಯದಿಂದ ಹಿಡಿದು ರಾತ್ರಿ 9 ಗಂಟೆಯವರೆಗೆ ಈ ಸ್ಮಾರಕಗಳು ಪ್ರವಾಸಿಗರಿಗೆ ತೆರೆದಿರಲಿದೆ.
ಈ ಐತಿಹಾಸಿಕ ಸ್ಮಾರಕಗಳು ಪ್ರಮುಖ ಪ್ರವಾಸಿ ಆಕರ್ಷಣೆಗಳಾಗಿವೆ. ಇವುಗಳಿಗೆ ಭೇಟಿ ನೀಡುವ ಸಮಯವನ್ನು ವಿಸ್ತರಿಸುವುದರಿಂದ ಪ್ರವಾಸಿಗರ ಸಂಖ್ಯೆಯನ್ನು ಏರಿಕೆ ಮಾಡಬಹುದಾಗಿದೆ. ಪುರಾತತ್ವ ಇಲಾಖೆಯ ಮುತುವರ್ಜಿಯಲ್ಲಿ ಹೆಚ್ಚಿನ ಸ್ಮಾರಕಗಳಿಗೆ ಪ್ರವೇಶ ಶುಲ್ಕವನ್ನು ವಿಧಿಸಲಾಗಿದ್ದು, ಇದರಿಂದ ಹೆಚ್ಚಿನ ಆದಾಯವನ್ನೂ ಗಳಿಸಬಹುದಾಗಿದೆ.
ಪುರಾತತ್ವ ಸಂಶೋಧನೆ ಮತ್ತು ದೇಶದ ಸಾವಿರಾರು ಐತಿಹಾಸಿಕ ಸ್ಮಾರಕಗಳ ನಿರ್ವಹಣೆಯನ್ನು ಪುರಾತತ್ವ ಇಲಾಖೆ ಮಾಡುತ್ತದೆ. ಮುಂದಿನ ದಿನಗಳಲ್ಲಿ, ಇನ್ನೂ ಹಲವಾರು ಸ್ಮಾರಕಗಳ ಭೇಟಿ ಸಮಯಗಳನ್ನು ವಿಸ್ತರಿಸುವ ನಿರೀಕ್ಷೆ ಇದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.