ನವದೆಹಲಿ: ಸರ್ಕಾರದ ಪ್ರಮುಖ ಉದ್ಯೋಗ ಖಾತರಿ ಯೋಜನೆಯಡಿ ಕೆಲಸ ಮಾಡುವ ಮಹಿಳೆಯರ ಪ್ರಮಾಣ ಹೆಚ್ಚಾಗಿದೆ ಎಂಬುದನ್ನು ಇತ್ತೀಚಿನ ವರದಿ ತೋರಿಸಿದೆ. ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ಎಂಎನ್ಆರ್ಇಜಿಎಸ್) ಮಹಿಳೆಯರ ಹೆಚ್ಚಿನ ಭಾಗವಹಿಸುವಿಕೆಯಿರುವ ರಾಜ್ಯಗಳು ಈ ಯೋಜನೆಯಡಿ ಹೆಚ್ಚಿನ ಕೆಲಸವನ್ನೂ ಪಡೆದುಕೊಳ್ಳುತ್ತಿವೆ ಎಂದು ತಿಳಿದುಬಂದಿದೆ.
ಗ್ರಾಮೀಣಾಭಿವೃದ್ಧಿ ಸಚಿವಾಲಯದ ಇತ್ತೀಚಿನ ಮಾಹಿತಿಯ ಪ್ರಕಾರ, ಈ ಯೋಜನೆಯಡಿ 2019-20ರಲ್ಲಿ ಕೇರಳವು ಅತೀ ಹೆಚ್ಚು ಮಹಿಳೆಯರನ್ನು ಅಂದರೆ 89% ರಷ್ಟನ್ನು ಮಹಿಳೆಯರಿಗೆ ಕೆಲಸದಲ್ಲಿ ಪಾಲು ನೀಡಿದೆ, ನಂತರ ತಮಿಳುನಾಡು (86%) ಮಹಿಳೆಯರಿಗೆ ಕೆಲಸ ನೀಡಿದೆ.
ಉತ್ತರಪ್ರದೇಶ ಈ ಯೋಜನೆಯಡಿ ಶೇ.35ರಷ್ಟು ಮಹಿಳೆಯರಿಗೆ ಕೆಲಸ ನೀಡಿದೆ, ಮಧ್ಯಪ್ರದೇಶ ಶೇ.40ರಷ್ಟು ಮಹಿಳೆಯರಿಗೆ ಮಹಿಳೆಯರಿಗೆ ಉದ್ಯೋಗವನ್ನು ನೀಡಿದೆ.
ಈ ಯೋಜನೆಯಡಿಯಲ್ಲಿನ ನಿಯಮದ ಪ್ರಕಾರ, ಅರ್ಧದಷ್ಟು ಮಹಿಳೆಯರಿಗೆ ಉದ್ಯೋಗವನ್ನು ನೀಡುವುದು ಕಡ್ಡಾಯ. 2019-29ರಲ್ಲಿ ರಾಷ್ಟ್ರೀಯ ಸರಾಸರಿ ಶೇ.57.2ರಷ್ಟು ಮಹಿಳೆಯರು ಉದ್ಯೋಗವನ್ನು ಪಡೆದುಕೊಂಡಿದ್ದಾರೆ. 2011-12ರ ಸಾಲಿನಲ್ಲಿ ಕೆಲಸ ಪಡೆದ ಮಹಿಳೆಯರ ಪ್ರಮಾಣ ಶೇ.48ರಷ್ಟು ಮಾತ್ರ ಇತ್ತು.
ಕೇರಳದಲ್ಲಿ ಪುರುಷರು ಪಶ್ಚಿಮ ಏಷ್ಯಾ, ಆಫ್ರಿಕಾ ಮತ್ತು ಭಾರತದ ಇತರ ಭಾಗಗಳಿಗೆ ಉತ್ತಮ ಉದ್ಯೋಗಾವಕಾಶಕ್ಕಾಗಿ ಹೋಗುತ್ತಿರುವ ಕಾರಣ ಇಲ್ಲಿನ ಮಹಿಳೆಯರು ಉದ್ಯೋಗ ಖಾತ್ರಿ ಯೋಜನೆಯಡಿ ಕೆಲಸ ಮಾಡಲು ಉತ್ಸಾಹ ತೋರಿಸುತ್ತಿದ್ದಾರೆ ಎಂಬುದು ಕೆಲವರ ವಾದವಾಗಿದೆ. ಅದೇ ರೀತಿ ತಮಿಳುನಾಡಿನಲ್ಲೂ ಪುರುಷರು ಕೈಗಾರಿಕೆಗಳಲ್ಲಿ ಕೆಲಸ ಮಾಡಲು ಆದ್ಯತೆ ನೀಡುತ್ತಾರೆ, ಹೀಗಾಗಿ ಮಹಿಳೆಯರಿಗೆ ಮನರೇಗಾದಲ್ಲಿ ಕೆಲಸ ಮಾಡಲು ಹೆಚ್ಚಿನ ಅವಕಾಶವನ್ನು ಸಿಗುತ್ತಿದೆ ಎಂದು ಹೇಳಲಾಗಿದೆ. .
ಗುಜರಾತಿನಲ್ಲಿ ಈ ಯೋಜನೆಗೆ ಹೆಚ್ಚಿನ ಪ್ರತಿಕ್ರಿಯೆ ವ್ಯಕ್ತವಾಗುತ್ತಿಲ್ಲ. ಕೃಷಿ, ಉತ್ಪಾದನೆ, ಸಹಕಾರಿ ವಲಯದಲ್ಲಿ ಆ ರಾಜ್ಯ ಸಾಕಷ್ಟು ಮುಂದಿರುವುದೇ ಅದಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.