ನವದೆಹಲಿ: ಮುಂದಿನ ಶೈಕ್ಷಣಿಕ ವರ್ಷದಿಂದ ನಾಲ್ಕು ವರ್ಷಗಳ ಏಕೀಕೃತ B.Ed ಕೋರ್ಸುಗಳನ್ನು ಆರಂಭಿಸುವುದಾಗಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ಪ್ರಕಾಶ್ ಜಾವ್ಡೇಕರ್ ಘೋಷಿಸಿದ್ದಾರೆ. ಶಿಕ್ಷಕರ ಮತ್ತು ಬೋಧನೆಯ ಗುಣಮಟ್ಟವನ್ನು ಸುಧಾರಣೆಗೊಳಿಸುವ ನಿಟ್ಟಿನಲ್ಲಿ ಈ ಕ್ರಮವನ್ನು ತೆಗೆದುಕೊಳ್ಳಲಾಗಿದೆ ಎಂದು ಅವರು ಹೇಳಿದ್ದಾರೆ.
ಇದುವರೆಗೆ ಬಿಎ, ಬಿಸ್ಸಿ ಮುಗಿಸಿ ಎರಡು ವರ್ಷಗಳ ಕಾಲ B.Ed ಕೋರ್ಸುಗಳನ್ನು ಮಾಡಬೇಕಿತ್ತು. ಮುಂದಿನ ವರ್ಷದಿಂದ 12ನೇ ತರಗತಿಯಾದ ಬಳಿಕ ನಾಲ್ಕು ವರ್ಷಗಳ ಕಾಲ B.Ed ಮಾಡಬಹುದಾಗಿದೆ. ಇದರಿಂದ ವಿದ್ಯಾರ್ಥಿಗಳ ಒಂದು ವರ್ಷ ಉಳಿತಾಯವಾಗಲಿದೆ.
2018ರ ಫೆಬ್ರವರಿ 1ರಂದು ತಮ್ಮ ಬಜೆಟ್ ಭಾಷಣದಲ್ಲಿ ಸಮಗ್ರ B.Ed ಕಾರ್ಯಕ್ರಮದ ಕುರಿತು ಅಂದಿನ ವಿತ್ತ ಸಚಿವ ಅರುಣ್ ಜೇಟ್ಲಿ ಪ್ರಕಟಿಸಿದ್ದರು. ಅಂದಿನಿಂದ ಯೋಜನೆಯನ್ನು ರೂಪಿಸುವ ಕಾರ್ಯ ನಡೆಯುತ್ತಾ ಬಂದಿದೆ. ಮುಂದಿನ ವರ್ಷ ಅನುಷ್ಠಾನಗೊಳ್ಳಲಿದೆ.
“ಬೋಧನೆಯು ಆಯ್ಕೆಯ ವೃತ್ತಿಯಾಗಬೇಕೇ ಹೊರತು ವಿಧಿಯಿಲ್ಲದೆ ಆಯ್ಕೆ ಮಾಡುವ ವೃತ್ತಿಯಾಗಬಾರದು. ಅದಕ್ಕಾಗಿಯೇ ನಾವು ಮುಂಬರುವ ಶೈಕ್ಷಣಿಕ ವರ್ಷದಲ್ಲಿ 4 ವರ್ಷದ ಇಂಟಿಗ್ರೇಟೆಡ್ ಬಿ.ಎಡ್ ಕೋರ್ಸ್ ಅನ್ನು ಪರಿಚಯಿಸುತ್ತಿದ್ದೇವೆ” ಎಂದು ಜಾವ್ಡೇಕರ್ ಟ್ವೀಟ್ ಮಾಡಿದ್ದಾರೆ.
ಹೊಸ ನಾಲ್ಕು ವರ್ಷದ B.Ed ಕೋರ್ಸುಗಳ ವಿವರಗಳು:
⭕ ನಾಲ್ಕು ವರ್ಷಗಳ B.Ed ಕೋರ್ಸು ಅನ್ನು ಬಿಎ, ಬಿಕಾಂ ಮತ್ತು ಬಿಎಸ್ಸಿ ಎಂಬ ಮೂರು ಸ್ಟ್ರೀಮ್ಗಳಲ್ಲಿ ನಡೆಸಲಾಗುತ್ತದೆ.
⭕ ಆಕಾಂಕ್ಷಿಗಳು ತಮ್ಮ 12 ನೇ ತರಗತಿಯ ಬಳಿಕ ಈ ಕೋರ್ಸಿಗೆ ಸೇರಿಕೊಳ್ಳಬಹುದು. ಇದರಿಂದ ಅವರ 1 ವರ್ಷ ಉಳಿತಾಯವಾಗುತ್ತದೆ. ಪ್ರಸ್ತುತ ಪದವಿ ಮಾಡಿದ ಬಳಿಕ ಎರಡು ವರ್ಷ B.Ed ಕೋರ್ಸು ಮಾಡಬೇಕಾಗಿದೆ.
⭕ ಶಿಕ್ಷಕರ ಶಿಕ್ಷಣವನ್ನು ಸಂಘಟಿಸುವ ಜವಾಬ್ದಾರಿಯುತ ಶಾಸನಬದ್ಧ ಸಂಸ್ಥೆಯಾದ ರಾಷ್ಟ್ರೀಯ ಶಿಕ್ಷಕರ ಶಿಕ್ಷಣ ಮಂಡಳಿ (National Council for Teacher Education) B.Ed ಪಠ್ಯಕ್ರಮವನ್ನು ಪುನಃ ರಚಿಸಲಿದೆ.
⭕ ನಾಲ್ಕು ವರ್ಷಗಳ ಸಮಗ್ರ ಶಿಕ್ಷಕರ ತರಬೇತಿಯಾದ B.Ed ಕೋರ್ಸ್ ಕಾರ್ಯಕ್ರಮವನ್ನು 2 ಹಂತಗಳಲ್ಲಿ ನೀಡಲಾಗುತ್ತದೆ – Pre-Primary to Primary ಮತ್ತು Upper Primary to Secondary.
⭕ ಮುಂದಿನ ವರ್ಷದಿಂದ ಈ ಕೋರ್ಸುಗಳನ್ನು ತಮ್ಮ ಪಠ್ಯಕ್ರಮದಲ್ಲಿ ಸೇರಿಸಲು ಆಸಕ್ತಿ ಹೊಂದಿರುವ ಸಂಸ್ಥೆಗಳಿಂದ ಅರ್ಜಿಗಳನ್ನು ಕೌನ್ಸಿಲ್ ಆಹ್ವಾನಿಸಿದೆ.
⭕ ಈ ಕಾರ್ಯಕ್ರಮವನ್ನು ನಡೆಸುವ ಸಂಬಂಧಪಟ್ಟ ವಿಶ್ವವಿದ್ಯಾಲಯಗಳು ಅಥವಾ ಸಂಸ್ಥೆಗಳು ಈ ಕೋರ್ಸುಗಳನ್ನು ಸ್ಥಳೀಯ ಅಗತ್ಯಕ್ಕೆ ಅನುಗುಣವಾಗಿ ಮಾರ್ಪಡಿಸುವುದಕ್ಕೂ ಮುನ್ನ ಎನ್ಸಿಟಿಇಯ ಪೂರ್ವ ಅನುಮೋದನೆಯನ್ನು ಪಡೆದುಕೊಳ್ಳಬೇಕು.
⭕ 4 ವರ್ಷಗಳ ಇಂಟಿಗ್ರೇಟೆಡ್ B.Ed ಕೋರ್ಸ್ ಅನ್ನು 2019-2020ರ ಶೈಕ್ಷಣಿಕ ವರ್ಷದಿಂದ ಪ್ರಾರಂಭಿಸಲಾಗುತ್ತಿದೆ.
⭕ ಪ್ರಸ್ತುತ, ಸೀಮಿತ ಸಂಖ್ಯೆಯ ಕಾಲೇಜುಗಳು ನಾಲ್ಕು ವರ್ಷಗಳ B.Ed ಕೋರ್ಸ್ ಗಳನ್ನು ನೀಡಲಿವೆ.
⭕ ಈಗಾಗಲೇ ತಮ್ಮ ಸ್ನಾತಕೋತ್ತರ ಅಥವಾ ಸ್ನಾತಕೋತ್ತರ ಪದವಿಯನ್ನು ಪೂರ್ಣಗೊಳಿಸಿದ ವಿದ್ಯಾರ್ಥಿಗಳಿಗೆ ಗ್ರೇಸ್ ಅವಧಿ ಇದ್ದು, ಅದರಲ್ಲಿ ಅವರು ಎರಡು ವರ್ಷದ ಬಿಇಡಿ ಕೋರ್ಸ್ ಅಥವಾ ಮೂರು ವರ್ಷದ ಇಂಟಿಗ್ರೇಟೆಡ್ B.Ed + M.Ed ಕೋರ್ಸ್ ಮಾಡಬಹುದು. ಆದರೂ, ಈ ಗ್ರೇಸ್ ಅವಧಿ ಎಷ್ಟು ಸಮಯದವರೆಗೆ ಲಭ್ಯವಿರುತ್ತದೆ ಅಥವಾ ಯಾವ ಕಾಲೇಜುಗಳು ಪದವಿ ನೀಡುತ್ತವೆ ಎಂಬ ಮಾಹಿತಿ ಇನ್ನೂ ಸ್ಪಷ್ಟವಾಗಿಲ್ಲ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.