ನವದೆಹಲಿ: ಭಾರತ ಅಣು ವಿದ್ಯುತ್ ಅನ್ನು ವೃದ್ಧಿಸುತ್ತಿದೆ ಮತ್ತು ಪಳೆಯುಳಿಕೆ ಇಂಧನವನ್ನು ರಿಪ್ಲೇಸ್ ಮಾಡುತ್ತಿದೆ. ಕಲ್ಲಿದ್ದಲು, ಅನಿಲ, ಜಲವಿದ್ಯುತ್, ಗಾಳಿ ವಿದ್ಯುತ್ ಬಳಿಕ ಪರಮಾಣು ವಿದ್ಯುತ್ ಭಾರತದ ಐದನೇ ಅತೀ ದೊಡ್ಡ ವಿದ್ಯುತ್ ಮೂಲವಾಗಿದೆ. 2018ರ ಮಾರ್ಚ್ವರೆಗೆ ಭಾರತದ 7 ಪರಮಾಣು ವಿದ್ಯುತ್ ಸ್ಥಾವರಗಳ 22 ಪರಮಾಣು ರಿಯಾಕ್ಟರ್ಗಳು ಕಾರ್ಯಾಚರಿಸಿವೆ. ಇವುಗಳ ಸಾಮರ್ಥ್ಯ 6,780 ಮೆಗಾವ್ಯಾಟ್.
2017ರಲ್ಲಿ ಒಟ್ಟು 35 TWh ಪರಮಾಣು ವಿದ್ಯುತ್ ಉತ್ಪಾದನೆ ಮಾಡಲಾಗಿದೆ ಮತ್ತು ಭಾರತೀಯ ವಿದ್ಯುತ್ತಿನ 3.22% ಪೂರೈಕೆ ಮಾಡಿದೆ. ಒಟ್ಟು 4,300 ಮೆಗಾವ್ಯಾಟ್ ಸಾಮರ್ಥ್ಯದ ಹೆಚ್ಚಿನ ರಿಯಾಕ್ಟರ್ಗಳು ನಿರ್ಮಾಣ ಹಂತದಲ್ಲಿವೆ.
ಈ ಮೇಲಿನ ಮಾಹಿತಿಯನ್ನು ಕೇಂದ್ರ ಸಚಿವ ಡಾ.ಜಿತೇಂದ್ರ ಸಿಂಗ್ ಅವರು ರಾಜ್ಯಸಭೆಗೆ ಲಿಖಿತ ಉತ್ತರದ ಮೂಲಕ ನೀಡಿದ್ದಾರೆ.
ಸರ್ಕಾರದ ಇತ್ತೀಚಿನ ಮಾಹಿತಿಯ ಪ್ರಕಾರ, ಎಲ್ಲಾ ತಂತ್ರಜ್ಞಾನದ ಪರಮಾಣು ವಿದ್ಯುತ್ ಸ್ಥಾವರಗಳ ಪೈಕಿ ಕೈಗಾದ ಯುನಿಟ್ 1 ಸುಮಾರು 962 ದಿನಗಳ ಕಾಲ ನಿರಂತರ ಕಾರ್ಯಾಚರಣೆಯನ್ನು ಮಾಡಿ ವಿಶ್ವ ದಾಖಲೆಯನ್ನು ಬರೆದಿದೆ. ಇದು ಮೂರು ವರ್ಷಗಳ ಭಾರತದ ಪರಮಾಣು ವಿದ್ಯುತ್ ಸ್ಥಾವರ ಸಾಧನೆಗಳ ಪೈಕಿ ಮಹತ್ವದ್ದಾಗಿದೆ ಎಂದು ಸಚಿವರು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.