ಶ್ರೀನಗರ: ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ, ಸೇನೆಯ ಟೆರಿಟೋರಿಯಲ್ ಆರ್ಮಿ ಪ್ಯಾರಾಚೂಟ್ ರೆಜೆಮಿಂಟ್ನಲ್ಲಿ ಗೌರವ ಕರ್ನಲ್ ಹುದ್ದೆಯನ್ನು ಹೊಂದಿರುವ ಮಹೇಂದ್ರ ಸಿಂಗ್ ಧೋನಿ ಅವರು ತಮ್ಮ ಸೇನಾ ತರಬೇತಿಯನ್ನು ಆರಂಭಿಸಿದ್ದಾರೆ. ಪ್ಯಾಟ್ರೋಲಿಂಗ್, ಗಾರ್ಡ್ ಮತ್ತು ಪೋಸ್ಟ್ ಡ್ಯೂಟಿಗಳನ್ನು ಅವರು ತರಬೇತಿಯ ಭಾಗವಾಗಿ ನೆರವೇರಿಸಲಿದ್ದಾರೆ.
106 ಟೆರಿಟೋರಿಯಲ್ ಆರ್ಮಿ ಬೆಟಾಲಿಯನ್ (ಪ್ಯಾರಾ)ದಲ್ಲಿ ತರಬೇತಿಯನ್ನು ಆರಂಭಿಸಿರುವ ಅವರು, ಜುಲೈ 31 ರಿಂದ ಆಗಸ್ಟ್ 15 ರ ವರೆಗೆ ಕಾಶ್ಮೀರ ಕಣಿವೆಯಲ್ಲಿ ವಿಕ್ಟರ್ ಫೋರ್ಸ್ ಭಾಗವಾಗಿ ನೆಲಸಲಿದ್ದಾರೆ.
ಎರಡು ತಿಂಗಳುಗಳ ಕಾಲ ಟೆರಿಟೋರಿಯಲ್ ಆರ್ಮಿಯಲ್ಲಿ ತರಬೇತಿಯನ್ನು ಪಡೆದುಕೊಳ್ಳಲು ದೋನಿಯವರಿಗೆ ಸೇನಾ ಮುಖ್ಯಸ್ಥ ಜನರಲ್ ಬಿಪಿನ್ ರಾವತ್ ಅವರು ಅನುಮತಿಯನ್ನು ನೀಡಿದ್ದರು. ಈ ಹಿನ್ನಲೆಯಲ್ಲಿ ದೋನಿ, ಆಗಸ್ಟ್ 3 ರಿಂದ ವೆಸ್ಟ್ ಇಂಡೀಸ್ ವಿರುದ್ಧ ನಡೆಯಲಿರುವ ಪಂದ್ಯಕ್ಕೆ ಲಭ್ಯವಿರುವುದಿಲ್ಲ ಎಂದು ಬಿಸಿಸಿಐಗೆ ತಿಳಿಸಿದ್ದರು.
38 ರ ವರ್ಷದ ಧೋನಿಗೆ 2011 ರಲ್ಲಿ ಭಾರತೀಯ ಸೇನೆಯು ಪ್ಯಾರಾಚೂಟ್ ರೆಜಿಮೆಂಟ್ನ (106 ಪ್ಯಾರಾ ಟಿಎ ಬೆಟಾಲಿಯನ್) ಪ್ರಾದೇಶಿಕ ಸೈನ್ಯ ಘಟಕದಲ್ಲಿ ಲೆಫ್ಟಿನೆಂಟ್ ಕರ್ನಲ್ ಗೌರವ ಸ್ಥಾನವನ್ನು ನೀಡಿದೆ. ಧೋನಿ ಅವರ ಜೊತೆ ಶೂಟರ್ ಅಭಿನವ್ ಬಿಂದ್ರಾ ಮತ್ತು ವಿಜ್ಞಾನಿ ದೀಪಕ್ ರಾವ್ ಅವರಿಗೂ ಸೇನೆ ಈ ಗೌರವವನ್ನು ನೀಡಿದೆ.
2015ರಲ್ಲಿ ಆಗ್ರಾದಲ್ಲಿ ನಡೆದ ವಾಯುಸೇನಾ ತರಬೇತಿ ಶಿಬಿರದಲ್ಲಿ ಪಾಲ್ಗೊಂಡಿದ್ದ ದೋನಿ, ಭಾರತೀಯ ಸೇನೆಯ ವಿಮಾನದಿಂದ ಪ್ಯಾರಾಚೂಟ್ ಮೂಲಕ ಜಿಗಿದು ತರಬೇತಿಯನ್ನು ಪೂರ್ಣಗೊಳಿಸಿದ್ದರು.
ಇದೀಗ ಮತ್ತೊಂದು ಸುತ್ತಿನ ತರಬೇತಿಯಲ್ಲಿ ಪಾಲ್ಗೊಂಡಿರುವ ಅವರು, 15 ದಿನಗಳ ಕಾಲ ಕಾಶ್ಮೀರ ಕಣಿವೆಯಲ್ಲಿ ಇದ್ದು ಗಸ್ತು ತಿರುಗುವಿಕೆ, ಕಣ್ಗಾವಲಿನಂತಹ ಕಠಿಣ ಕಾರ್ಯವನ್ನು ನೆರವೇರಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.