ಮೀರತ್ : ಕೋಮು ಸೌಹಾರ್ದತೆ ಎಂಬುದನ್ನು ನೋಡುವುದೇ ಕಷ್ಟ ಎನ್ನುವ ಇಂದಿನ ಕಾಲದಲ್ಲಿ, ಉತ್ತರಪ್ರದೇಶದ ಮೀರತ್ನ ಮುಸ್ಲಿಂ ಮಹಿಳೆಯರೊಬ್ಬರು ನಿತ್ಯ ಹನುಮಾನ್ ಚಾಲಿಸಾವನ್ನು ಶ್ರದ್ಧಾ ಭಕ್ತಿಯಿಂದ ಪಠಣ ಮಾಡುತ್ತಾರೆ. ಸಕಾರಾತ್ಮಕತೆಯನ್ನು ಮೈಗೂಡಿಸಿಕೊಳ್ಳಲು ನನಗಿದು ಸಹಕಾರಿಯಾಗುತ್ತದೆ ಎಂದು ಅವರು ಪ್ರತಿಪಾದಿಸುತ್ತಾರೆ.
ಹನುಮಂತನ ಭಕ್ತೆಯಾಗಿರುವ ಶಹೀನ್ ಪರ್ವೇಝ್ ಅವರು, ಧರ್ಮದ ವಿಷಯಕ್ಕೆ ಬಂದರೆ ಮಾನವೀಯತೆ ಸಮುದಾಯಕ್ಕಿಂತಲೂ ಶ್ರೇಷ್ಠವಾದುದು ಎನ್ನುತ್ತಾರೆ.
“ಕಾಲೇಜು ದಿನಗಳಿಂದಲೇ ನಾನು ನಿತ್ಯ ಹನುಮಾನ್ ಚಾಲಿಸವನ್ನು ಪಠಣ ಮಾಡುತ್ತಿದ್ದೇನೆ. ನಾನು ಕಲಿತ ಶಾಲೆ ನನಗೆ ಇಸ್ಲಾಂ, ಸಿಖ್ಖ್, ಹಿಂದೂ ಧರ್ಮದ ಬಗ್ಗೆ ಕಲಿಸಿಕೊಟ್ಟಿದೆ. ಹನುಮಾನ್ ಚಾಲೀಸವನ್ನೂ ಅಲ್ಲೇ ಕಲಿತುಕೊಂಡೆ. ಅದನ್ನು ಪಠಣ ಮಾಡುವಾಗ ಒಳ್ಳೆಯದು ಎನಿಸುತ್ತದೆ” ಎಂದಿದ್ದಾರೆ.
“ನಾನು ಯಾರಿಗೂ ಭಯಪಡುವುದಿಲ್ಲ, ನನ್ನ ಧರ್ಮದ ಆಯ್ಕೆಯನ್ನು ಪ್ರಶ್ನಿಸುವ ಅಧಿಕಾರವನ್ನು ನಾನು ಯಾರಿಗೂ ನೀಡುವುದಿಲ್ಲ” ಎಂದು ಶಹೀನ್ ಹೇಳುತ್ತಾರೆ.
ಪರಸ್ಪರರ ನಂಬಿಕೆಗಳನ್ನು ಗೌರವಿಸುವಂತಹ ದೇಶದಲ್ಲಿ ನಾವಿದ್ದೇವೆ. ಇನ್ನೊಂದು ಧರ್ಮದ ಬಗ್ಗೆ ಕಲಿತುಕೊಂಡರೆ ತಪ್ಪೇನು? ಎಲ್ಲಾ ಧರ್ಮವು ಪ್ರೀತಿಯನ್ನು ಹರಡುವುದನ್ನು ಹೇಳಿಕೊಡುತ್ತದೆ. ಅದನ್ನೇ ನಾನು ಮಾಡುತ್ತಿದ್ದೇನೆ” ಎನ್ನುತ್ತಾರೆ.
ಅವರ ಮನೆಯಲ್ಲಿ ಹಿಂದೂ ದೇವತೆಯ ಮೂರ್ತಿಯೂ ಇದ್ದು, ಅದಕ್ಕೆ ನಿತ್ಯ ಅವರು ಪೂಜೆ ಸಲ್ಲಿಸುತ್ತಾರೆ. ಆರತಿಯನ್ನೂ ಮಾಡುತ್ತಾರೆ. ತುಳಸಿ ಮಾಲೆಯನ್ನೂ ಹಾಕುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.