ಮಂಗಳೂರು: ಕೆಲ ವರ್ಷಗಳ ಹಿಂದೆ ಕರ್ನಾಟಕ ಉತ್ತರ ಪ್ರಾಂತದ ಪ್ರಚಾರ ಪ್ರಮುಖ್ ಆಗಿದ್ದ ರಾಮಚಂದ್ರ ಕಾಸರಗೋಡು ಅವರು ನಿನ್ನೆ ರಾತ್ರಿ ಹೃದಯಾಘಾತದಿಂದ ಸ್ವರ್ಗಸ್ಥರಾಗಿದ್ದಾರೆ. ಅವರಿಗೆ 66 ವರ್ಷ ವಯಸ್ಸಾಗಿತ್ತು.
ಮೈಸೂರಿನಿಂದ ಮಂಗಳೂರಿಗೆ ಬಸ್ಸಿನಲ್ಲಿ ಬರುತ್ತಿರುವಾಗ ಹೃದಯಾಘಾತದಿಂದ ಇವರು (ಜುಲೈ 23) ನಿಧನರಾದರು. ಅವರ ಹುಟ್ಟೂರು ಮುಳ್ಳೇರಿಯಾದಲ್ಲಿ (ಜುಲೈ 25) ಅಂತ್ಯಕ್ರಿಯೆ ನಡೆಯಲಿದೆ.
ಸಾಹಿತಿಯೂ ಆಗಿರುವ ಇವರಿಂದ ಹಲವಾರು ದೇಶಭಕ್ತಿ ಗೀತೆಗಳು ಇವರ ಲೇಖನಿಯಿಂದ ಹೊರಹೊಮ್ಮಿವೆ. 2013ರಲ್ಲಿ ನಡೆದ ಮಂಗಳೂರು ವಿಭಾಗ ಸಾಂಘಿಕ್ನ ವೈಯಕ್ತಿಕ ಗೀತೆ ‘ಯುವಮನದೊಳಿಂದು’ ಹಾಡಿನ ಸಾಹಿತಿ ಇವರು.
ದತ್ತಾತ್ರೇಯ ವಜ್ರಳ್ಳಿ ಅವರು ರಾಮಚಂದ್ರ ಕಾಸರಗೋಡು ಅವರ ಬಗ್ಗೆ ಮಾತನಾಡುತ್ತಾ,
“ಸೂಕ್ಷ್ಮ ಚಿಂತನೆ, ನಾಜೂಕು ವ್ಯವಹಾರ ಇವುಗಳ ಪ್ರತಿರೂಪವಾಗಿದ್ದ ರಾಮಚಂದ್ರ ಕಾಸರಗೋಡು ಅವರು ಇನ್ನಿಲ್ಲ ಎಂಬುದನ್ನು ನಂಬಲು ಮನಸ್ಸು ಸಿದ್ಧವಾಗುತ್ತಿಲ್ಲ. ಭಾಷೆಗೆ, ಸಾಹಿತ್ಯಕ್ಕೆ ಸಂಬಂಧಿಸಿದ ಜಿಜ್ಞಾಸೆಗಳಿಗೆಲ್ಲ ಮೈತ್ರೀ ಭಾವದಿಂದಲೇ ಪರಿಹಾರ ಒದಗಿಸುತ್ತಿದ್ದ ಅವರ ಸಜ್ಜನಿಕೆ, ಸರಳತೆ, ಅಪರೂಪದ ಪದಗಳನ್ನು ಲೀಲೆಯಿಂದ ಬಳಸಿ, ಹಾಡುಗಳನ್ನು ರಚಿಸುವ ಅವರ ಅನುಪಮ ಸಾಮರ್ಥ್ಯ ದೀರ್ಘಕಾಲ ನೆನಪಿನಲ್ಲುಳಿಯುತ್ತದೆ ಹಾಗೂ ಹೊಸ ತಲೆಮಾರಿಗೆ ಶಕ್ತಿ ತುಂಬುತ್ತದೆ.
ಸಂಸ್ಕೃತ ಭಾರತಿಯ ಉತ್ತರ ಪ್ರಾಂತದ ಸಮ್ಮೇಳನದ ಸಂದರ್ಭದಲ್ಲಿ ಕೇಳದಿದ್ದರೂ ಹತ್ತು ಸಹಸ್ರ ರೂಪಾಯಿಗಳನ್ನು ಕೈಗಿತ್ತು ಏನಿದೆಂಬಂತೆ ನಾನು ದಿಟ್ಟಿಸಿದಾಗ ನಸು ನಕ್ಕು ಮೆಲ್ಲಗೆ ಬೆನ್ನು ತಟ್ಟಿ ಹೊರಟುಹೋದ ಸಹೃಯಿ ಹಾಗೆಯೇ ಹೊರಟೇ ಹೋದರೆಂಬುದುದನ್ನು ಅರಗಿಸಿಕೊಳ್ಳುವುದು ಕಷ್ಟ ಸಾಧ್ಯ.
ಅವರ ಆತ್ಮಕ್ಕೆ ಭಗವಂತ ತನ್ನೆಡೆಯಲ್ಲಿ ಸ್ಥಾನ ಕಲ್ಪಿಸಿ ಬರಮಾಡಿಕೊಳ್ಳಲೆಂಬ ಪ್ರಾರ್ಥನೆಯೊಂದಿಗೆ ಆದರಪೂರ್ವಕ ಶ್ರದ್ಧಾಂಜಲಿ!!” ಎಂದು ಅವರ ನಿಧನಕ್ಕೆ ಶ್ರದ್ಧಾಂಜಲಿ ಸಲ್ಲಿಸಿದ್ದಾರೆ.
ರಾಮಚಂದ್ರ ಕಾಸರಗೋಡು ಅವರು ಪತ್ನಿ, ಇಬ್ಬರು ಪುತ್ರಿಯರು ಹಾಗೂ ಓರ್ವ ಪುತ್ರ, ಮೊಮ್ಮಕ್ಕಳು ಹಾಗೂ ಅಪಾರ ಬಂಧು ವರ್ಗವನ್ನು ಅಗಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.