ವಾಷಿಂಗ್ಟನ್ : ಕೊನೆಗೂ ಪಾಕಿಸ್ಥಾನದ ಪ್ರಧಾನ ಮಂತ್ರಿ ಇಮ್ರಾನ್ ಖಾನ್ ಅವರು ತನ್ನ ದೇಶದಲ್ಲಿ ಭಯೋತ್ಪಾದಕರು ಬೀಡು ಬಿಟ್ಟಿದ್ದಾರೆ ಎಂಬುದನ್ನು ಒಪ್ಪಿಕೊಂಡಿದ್ದಾರೆ. ತರಬೇತಿಯನ್ನು ಪಡೆದುಕೊಂಡ, ಕಾಶ್ಮೀರ ಮತ್ತು ಅಫ್ಘಾನಿಸ್ಥಾನದ ವಿವಿಧ ಭಾಗಗಳಲ್ಲಿ ಕಾರ್ಯಾಚರಣೆಗಳನ್ನು ನಡೆಸಿರುವಂತಹ ಸುಮಾರು 30 ರಿಂದ 40 ಸಾವಿರ ಉಗ್ರರು ಪಾಕಿಸ್ಥಾನದಲ್ಲಿ ಇದ್ದಾರೆ ಎಂದು ಅಮೆರಿಕಾದಲ್ಲಿ ಖಾನ್ ಹೇಳಿಕೊಂಡಿದ್ದಾರೆ.
“ನಾವು ಅಧಿಕಾರಕ್ಕೆ ಬರುವವರೆಗೂ ನಮ್ಮ ದೇಶದ ಸರ್ಕಾರಕ್ಕೆ ರಾಜಕೀಯ ಇಚ್ಛಾಶಕ್ತಿ ಇರಲಿಲ್ಲ, ಭಯೋತ್ಪಾದಕರ ಬಗ್ಗೆ ಹೇಳಬೇಕೆಂದರೆ ನಮ್ಮ ದೇಶದಲ್ಲಿ ಈಗಲೂ 30 ಸಾವಿರದಿಂದ 40 ಸಾವಿರದವರೆಗೆ ಶಸ್ತ್ರಸಜ್ಜಿತ ಉಗ್ರರು ಇದ್ದಾರೆ. ಅವರಲ್ಲಿ ಅನೇಕರು ಕಾಶ್ಮೀರ, ಅಫ್ಘಾನ್ ಪ್ರದೇಶಗಳಲ್ಲಿನ ಕಾರ್ಯಾಚರಣೆಗಳಲ್ಲಿ ಭಾಗಿಯಾದವರು” ಎಂದಿದ್ದಾರೆ.
“ಪಾಕಿಸ್ಥಾನದ ರಾಜಕೀಯದಲ್ಲಿ ಪ್ರವಾಹವಿತ್ತು. 2014 ರಲ್ಲಿ ಪಾಕಿಸ್ಥಾನಿ ತಾಲಿಬಾನ್ ಸಂಘಟನೆ ಆರ್ಮಿ ಪಬ್ಲಿಕ್ ಶಾಲೆಯಲ್ಲಿ 150 ಶಾಲಾ ಮಕ್ಕಳನ್ನು ಕೊಂದಿತು. ಎಲ್ಲಾ ರಾಜಕೀಯ ಪಕ್ಷಗಳು ರಾಷ್ಟ್ರೀಯ ಕ್ರಿಯಾ ಯೋಜನೆಗೆ ಸಹಿ ಹಾಕಿದವು ಮತ್ತು ಯಾವುದೇ ಉಗ್ರಗಾಮಿ ಗುಂಪುಗಳನ್ನು ನಮ್ಮ ದೇಶದೊಳಗೆ ಕಾರ್ಯನಿರ್ವಹಿಸಲು ಅನುಮತಿಸುವುದಿಲ್ಲ ಎಂದು ನಾವೆಲ್ಲರೂ ನಿರ್ಧರಿಸಿದೆವು” ಎಂದು ಯುಎಸ್ ಇನ್ಸ್ಟಿಟ್ಯೂಟ್ ಆಫ್ ಪೀಸ್ನಲ್ಲಿ ಖಾನ್ ಹೇಳಿದ್ದಾರೆ.
ಮೊದಲ ಬಾರಿಗೆ ಪಾಕಿಸ್ಥಾನದಲ್ಲಿ ನಮ್ಮ ಸರ್ಕಾರ ಉಗ್ರರ ಹಲ್ಲು ಕೀಳುವ ಪ್ರಯತ್ನ ಮಾಡುತ್ತಿದೆ. ಅವರ ಸಂಘಟನೆ, ಸಂಸ್ಥೆಗಳನ್ನು, ಸೆಮಿನಾರ್ಗಳನ್ನು ನಾವು ಮುಟ್ಟುಗೋಲು ಹಾಕಿಕೊಂಡಿದ್ದೇವೆ ಎಂದಿದ್ದಾರೆ.
ಮತ್ತೊಂದು ಕಾರ್ಯಕ್ರಮದಲ್ಲಿ ಮಾತನಾಡಿದ ಇಮ್ರಾನ್ ಖಾನ್ ಅವರು “40 ವಿವಿಧ ಉಗ್ರಗಾಮಿ ಗುಂಪುಗಳು ಪಾಕಿಸ್ಥಾನದಲ್ಲಿ ಕಾರ್ಯನಿರ್ವಹಿಸುತ್ತಿವೆ. ಹಿಂದಿನ ಸರ್ಕಾರಗಳು, ವಿಶೇಷವಾಗಿ ಕಳೆದ 15 ವರ್ಷಗಳಲ್ಲಿನ ಸರ್ಕಾರಗಳು ನಿಯಂತ್ರಣದಲ್ಲಿರಲಿಲ್ಲ ಮತ್ತು ಅಮೆರಿಕಾಗೆ ನಿಖರವಾದ ಸತ್ಯವನ್ನು ಅವುಗಳು ಹೇಳಿರಲಿಲ್ಲ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.