ನವದೆಹಲಿ: ಪುಟಾಣಿ ಮಗುವಿನೊಂದಿಗೆ ಆಡುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಸಂಸತ್ತಿನಲ್ಲಿನ ಕಛೇರಿಯಲ್ಲಿ ಮಗು ಜೊತೆ ಅವರು ತುಸು ಕಾಲ ಕಳೆದಿದ್ದು, ಈ ಫೋಟೋವನ್ನು ಇನ್ಸ್ಟಾಗ್ರಾಂನಲ್ಲಿ ಅಪ್ಲೋಡ್ ಮಾಡಿದ್ದಾರೆ. ಕೆಲವೇ ಕ್ಷಣಗಳಲ್ಲಿ ಇದು ವೈರಲ್ ಆಗಿದೆ.
ಈ ಪೋಟೋ ಬಗ್ಗೆ ಬರೆದುಕೊಂಡಿರುವ ಮೋದಿ, “ತುಂಬಾ ವಿಶೇಷ ಸ್ನೇಹಿತರೊಬ್ಬರು ಇಂದು ನನ್ನನ್ನು ಸಂಸತ್ತಿಗೆ ಭೇಟಿಯಾಗಲು ಬಂದರು” ಎಂದಿದ್ದಾರೆ.
ಪ್ರಧಾನಿಯವರ ತೊಡೆ ಮೇಲೆ ಕುಳಿತುಕೊಂಡ ಹಾಲುಗಲ್ಲದ ಮಗು ಮುಖದ ತುಂಬ ನಗು ತುಂಬಿಕೊಂಡಿದೆ. ಕಛೇರಿ ಟೇಬಲ್ ಮೇಲಿನ ವಸ್ತುಗಳ ಮೇಲೆ ಕುತೂಹಲದಿಂದ ಕೈಯಾಡಿಸಿದೆ. ಅದರಲ್ಲೂ ಟೇಬಲ್ ಮೇಲೆ ಇದ್ದ ಎರಡು ಚಾಕಲೇಟ್ಗಳ ಮೇಲೆ ಮಗುವಿನ ಗಮನ ಹೆಚ್ಚಾಗಿತ್ತು.
ಪ್ರಧಾನಿಯನ್ನು ಕಾಣಲು ಸಂಸತ್ತಿಗೆ ಬಂದ ವಿಸಿಟರ್ಸ್ರವರೊಬ್ಬರ ಮಗು ಇದಾಗಿದೆ ಎಂದು ಹೇಳಲಾಗಿದೆ. ಟ್ವಿಟರ್ನಲ್ಲೊಬ್ಬರು ಈ ಮಗು ರಾಜ್ಯ ಸಭಾ ಸದಸ್ಯ ಸತ್ಯನಾರಾಯಣ ಜತಿಯಾ ಅವರ ಮೊಮ್ಮಗು ಎಂದು ಟ್ವೀಟ್ ಮಾಡಿದ್ದಾರೆ.
ಈ ಫೋಟೋ ಕ್ಷಿಪ್ರವಾಗಿ ವೈರಲ್ ಆಗಿದ್ದು, ಪೋಸ್ಟ್ ಮಾಡಿದ 30 ನಿಮಿಷದಲ್ಲಿ ಇನ್ಸ್ಟಾಗ್ರಾಂ ಬಳಕೆದಾರರಿಂದ 5 ಲಕ್ಷ ಲೈಕ್ಸ್ ಪಡೆದುಕೊಂಡಿದೆ. ಇನ್ಸ್ಟಾಗ್ರಾಂನಲ್ಲಿ ಮೋದಿಯವರಿಗೆ 25 ಮಿಲಿಯನ್ ಫಾಲೋವರ್ಗಳಿದ್ದಾರೆ.
ಪ್ರಧಾನಿ ಮೋದಿಯವರಿಗೆ ಮಕ್ಕಳೆಂದರೆ ಬಹಳ ಅಚ್ಚುಮೆಚ್ಚು. ತಮ್ಮ ಸಭೆ, ಸಮಾರಂಭಗಳಲ್ಲಿ ಮಕ್ಕಳ ಜೊತೆ ಅವರು ಸಂವಾದ, ಮಾತುಕತೆಗಳನ್ನು ನಡೆಸುವುದನ್ನು ನಾವು ಹೆಚ್ಚಾಗಿ ನೋಡುತ್ತಿರುತ್ತೇವೆ. ಇತರ ದೇಶಗಳಿಗೆ ಹೋದಾಗಲೂ ಮಕ್ಕಳ ಜೊತೆ ಅವರು ಆಟವಾಡುತ್ತಿರುತ್ತಾರೆ. ಮೋದಿಯವರ ಸ್ನೇಹಮಯ ವ್ಯಕ್ತಿತ್ವಕ್ಕೆ ಇದೊಂದು ಉದಾಹರಣೆಯಷ್ಟೇ.
सांसद सत्यनारायण जी का पोता है 😊 pic.twitter.com/3jUxrSa7lb
— Vivek Mishra 🇮🇳 (@vivek_mishra97) July 23, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.