ನವದೆಹಲಿ: ಭಾರತೀಯ ವಾಯುಪಡೆ (ಐಎಎಫ್) ಜುಲೈ 27 ರಂದು ಮೊದಲ ನಾಲ್ಕು ಬೋಯಿಂಗ್ ಅಪಾಚೆ ಹೆಲಿಕಾಪ್ಟರ್ಗಳನ್ನು ಸ್ವೀಕರಿಸಲಿದೆ. ಉಳಿದ ನಾಲ್ಕು ಕೆಲವು ದಿನಗಳ ನಂತರ ಸೇನೆಯನ್ನು ಸೇರ್ಪಡೆಗೊಳ್ಳುವ ನಿರೀಕ್ಷೆ ಇದೆ.
ಈ ಎಂಟು ಅಪಾಚೆಗಳ ತಂಡವನ್ನು ತಾತ್ಕಾಲಿಕವಾಗಿ ದೆಹಲಿಯ ಹೊರವಲಯದಲ್ಲಿರುವ ಹಿಂಡನ್ ವಾಯುಸೇನೆಯ ನೆಲೆಯಲ್ಲಿ ನಿಯೋಜನೆಗೊಳಿಸಲಾಗುತ್ತದೆ. ಬಳಿಕ ಇವುಗಳನ್ನು ಪಠಾನ್ಕೋಟ್ ವಾಯುಸೇನಾ ನೆಲೆಗೆ ತೆಗೆದುಕೊಂಡು ಹೋಗಲಾಗುತ್ತದೆ. ಇವುಗಳನ್ನು ಸೇನೆಗೆ ನಿಯೋಜನೆಗೊಳಿಸುವ ಪ್ರಕ್ರಿಯೆಯು ಸೆಪ್ಟೆಂಬರ್ ಆರಂಭದಲ್ಲಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ.
1.1 ಬಿಲಿಯನ್ ಡಾಲರ್ ಮೌಲ್ಯದ ಒಪ್ಪಂದ ಇದಾಗಿದ್ದು, ಈ ಒಪ್ಪಂದದಡಿಯಲ್ಲಿ ಒಟ್ಟು 22 ಸುಧಾರಿತ ಮಲ್ಟಿ ರೋಲ್ ಅಪಾಚೆ ಹೆಲಿಕಾಪ್ಟರ್ಗಳನ್ನು ವಾಯುಸೇನೆ ಸ್ವೀಕರಿಸಲಿದೆ. ಈ ಹೆಲಿಕಾಪ್ಟರ್ಗಳು ರಷ್ಯಾದ ಮಿ -35 ಅಸಾಲ್ಟ್ ಹೆಲಿಕಾಪ್ಟರ್ಗಳನ್ನು ರಿಪ್ಲೇಸ್ ಮಾಡುವ ನಿರೀಕ್ಷೆಯಿದೆ. ಈ ಹೆಲಿಕಾಪ್ಟರ್ಗಳನ್ನು ಎರಡು ಸ್ಕ್ವಾಡ್ರನ್ಗಳಾಗಿ ವಿಭಜಿಸಲಾಗುತ್ತದೆ.
ಹೆಲಿಕಾಪ್ಟರ್ಗಳು ಸೆಮಿ ನಾಕಡ್ ಡೌನ್ ಫಾರ್ಮ್ಯಾಟ್ ರೂಪದಲ್ಲಿ ಭಾರತಕ್ಕೆ ಬರುತ್ತವೆ ಮತ್ತು ಅದರ ಇಡೀ ಪ್ಲಾಟ್ಫಾರ್ಮ್ ಅನ್ನು ಭಾರತದಲ್ಲಿ ಮರು ಜೋಡಿಸಲಾಗುತ್ತದೆ. ದೇಶಾದ್ಯಂತ ಇರುವ ವಾಯುಸೇನಾ ನೆಲೆಗಳಿಗೆ ಕಳುಹಿಸಿಕೊಡುವ ಮುನ್ನ ಇವುಗಳು ಮರು ಪರೀಕ್ಷೆಗೆ ಒಳಪಡಲಿವೆ.
ಐಎಎಫ್ ಈಗಾಗಲೇ ಆರು ಬೋಯಿಂಗ್ ನಿರ್ಮಿತ ಚಿನೂಕ್ ಹೆಲಿಕಾಪ್ಟರ್ಗಳನ್ನು ಸ್ವೀಕರಿಸಿದೆ, ಅದರಲ್ಲಿ ನಾಲ್ಕು ಐಎಎಫ್ನ 126 ಫ್ಲೈಟ್ ಸ್ಕ್ವಾಡ್ರನ್ನಲ್ಲಿರುವ ಚಂಡೀಗಢ ವಾಯುಪಡೆಯ ನೆಲೆಯಲ್ಲಿ ನಿಯೋಜನೆಗೊಂಡಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.