ನವದೆಹಲಿ: ಪ್ರಧಾನಿ ನರೇಂದ್ರ ಮೋದಿಯವರು ಭಾರತದ ಅತ್ಯಂತ ಮೆಚ್ಚುಗೆ ಗಳಿಸಿದ ವ್ಯಕ್ತಿ ಮತ್ತು ವಿಶ್ವದ 6ನೇ ಅತ್ಯಂತ ಮೆಚ್ಚುಗೆ ಗಳಿಸಿದ ವ್ಯಕ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಯುಕೆ ಮೂಲದ ಮಾರ್ಕೆಟ್ ರಿಸರ್ಚ್ ಫರ್ಮ್ YouGov ನಡೆಸಿದ ಸಮೀಕ್ಷೆ ಈ ಸಂಗತಿಯನ್ನು ಬಹಿರಂಗಪಡಿಸಿದೆ.ಕಳೆದ ವರ್ಷದ ಮೆಚ್ಚುಗೆ ಪಡೆದ ವ್ಯಕ್ತಿಗಳ ಪಟ್ಟಿಯಲ್ಲಿ 8 ಸ್ಥಾನದಲ್ಲಿದ್ದ ಮೋದಿ, ಈ ಬಾರಿ ಸ್ಥಾನವನ್ನು 6ಕ್ಕೆ ಏರಿಸಿಕೊಂಡಿದ್ದಾರೆ.
YouGov ಪಟ್ಟಿಯಲ್ಲಿ ಸ್ಥಾನ ಪಡೆದ ಭಾರತದ ಏಕೈಕ ರಾಜಕಾರಣಿ ಎಂಬ ಹೆಗ್ಗಳಿಕೆಯೂ ಮೋದಿಯದ್ದಾಗಿದೆ. ಬಾಕ್ಸರ್ ಮೇರಿ ಕೋಮ್ ಅವರು ಭಾರತದ ಅತ್ಯಂತ ಮೆಚ್ಚುಗೆ ಗಳಿಸಿದ ಮಹಿಳೆ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಮೋದಿಯವರು ವಿಶ್ವದಾದ್ಯಂತದ ಮೆಚ್ಚುಗೆಯಲ್ಲಿ ಪಡೆದ ಅಂಕ ಶೇ.4.8 ಆಗಿದ್ದು, ಪ್ರಧಾನಿಯಾಗಿ ಅವರು ಮಾಡಿದ ಸಾಧನೆಗಳಿಗೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿದೆ.
ಕ್ರಿಕೆಟಿಗ ಮಹೇಂದ್ರ ಸಿಂಗ್ ಧೋನಿ ಭಾರತದ ಎರಡನೇ ಅತಿ ಹೆಚ್ಚು ಮೆಚ್ಚುಗೆ ಪಡೆದ ವ್ಯಕ್ತಿ, ನಂತರದ ಸ್ಥಾನದಲ್ಲಿ ಉದ್ಯಮಿ ರತನ್ ಟಾಟಾ ಇದ್ದಾರೆ. ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ, ಸಿಂಗರ್ ಲತಾ ಮಂಗೇಶ್ಕರ್, ಬಿಜೆಪಿ ನಾಯಕಿ ಸುಷ್ಮಾ ಸ್ವರಾಜ್ ಮತ್ತು ನಟಿ ದೀಪಿಕಾ ಪಡುಕೋಣೆ ಮೊದಲ ಐದು ಹೆಚ್ಚು ಮೆಚ್ಚುಗೆ ಪಡೆದ ಮಹಿಳೆಯರು.
ಬಾಲಿವುಡ್ ತಾರೆಗಳಾದ ಅಮಿತಾಬ್ ಬಚ್ಚನ್, ಶಾರುಖ್ ಖಾನ್ ಮತ್ತು ಸಲ್ಮಾನ್ ಖಾನ್ ವಿಶ್ವದ ಅತಿ ಹೆಚ್ಚು ಮೆಚ್ಚುಗೆ ಪಡೆದ ಟಾಪ್ 20 ಪುರುಷರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಿಯಾಂಕಾ ಚೋಪ್ರಾ, ಐಶ್ವರ್ಯಾ ರೈ ಮತ್ತು ಸುಶ್ಮಿತಾ ಸೇನ್ ವಿಶ್ವದ ಅತಿ ಹೆಚ್ಚು ಮೆಚ್ಚುಗೆ ಪಡೆದ 20 ಮಹಿಳೆಯರ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ.
ಈ ಪಟ್ಟಿಯಲ್ಲಿ ಬಿಲಿಯನೇರ್ ಬಿಲ್ ಗೇಟ್ಸ್ ಅಗ್ರಸ್ಥಾನದಲ್ಲಿದ್ದು, ಅಮೆರಿಕದ ಮಾಜಿ ಅಧ್ಯಕ್ಷ ಬರಾಕ್ ಒಬಾಮ ನಂತರದ ಸ್ಥಾನದಲ್ಲಿದ್ದಾರೆ. ಅಮೆರಿಕಾದ ಮಾಜಿ ಪ್ರಥಮ ಮಹಿಳೆ ಮಿಶೆಲ್ ಒಬಾಮ ಮತ್ತು ಅಮೇರಿಕನ್ ಟಿವಿ ತಾರೆ ಓಪ್ರಾ ವಿನ್ಫ್ರೇ ಅವರು ವಿಶ್ವದಾದ್ಯಂತ ಹೆಚ್ಚು ಮೆಚ್ಚುಗೆ ಪಡೆದ ಮಹಿಳೆಯರಾಗಿದ್ದಾರೆ.
YouGov ನಡೆಸಿದ ಪ್ರತಿ ಸಮೀಕ್ಷೆಯಲ್ಲೂ ಬಿಲ್ ಗೇಟ್ಸ್ ವಿಶ್ವದ ಅತ್ಯಂತ ಮೆಚ್ಚುಗೆ ಪಡೆದ ಅಗ್ರಗಣ್ಯ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ.
PM @NarendraModi ji is the most admired Indian, as per a study carried out by a UK based firm.
Proud to be led by such a visionary and dynamic leader who is recognised all over the world for his inimitable and unparalleled leadership.https://t.co/Cu5ngDPce9
— Piyush Goyal (@PiyushGoyal) July 18, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.