ನವದೆಹಲಿ: ಅಮೆರಿಕಾಗೆ ಪ್ರಯಾಣಿಸಲಿರುವ ಪ್ರಧಾನಿ ನರೇಂದ್ರ ಮೋದಿಯವರು ಸೆಪ್ಟಂಬರ್ 22ರಂದು ‘ಹೌಡಿ, ಮೋದಿ!’ ಎಂಬ ಕಮ್ಯೂನಿಟಿ ಸಮಿತ್ ಅನ್ನು ಉದ್ದೇಶಿಸಿ ಮಾತನಾಡಲಿದ್ದಾರೆ. ಈ ಸಮಿತ್ ಅನ್ನು ಹೌಸ್ಟನ್ನಲ್ಲಿನ ಟೆಕ್ಸಾಸ್ ಇಂಡಿಯಾ ಫೋರಂ ಆಯೋಜನೆಗೊಳಿಸಲಿದೆ. ‘ಹೌಡಿ’ ಎಂದರೆ ‘ಹೌ ಡು ಯು ಡು?’ ಎಂಬುದರ ಶಾರ್ಟ್ಹ್ಯಾಂಡ್ ಆಗಿದೆ. ಅಮೆರಿಕಾದಲ್ಲಿ ಒಬ್ಬರನ್ನು ಸ್ವಾಗತ ಮಾಡುವುದಕ್ಕೆ ಈ ಶಬ್ದವನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ.
“ನಮ್ಮ ಪ್ರದೇಶ ಮತ್ತು ಪ್ರಧಾನಿ ನರೇಂದ್ರ ಮೋದಿ ಪ್ರತಿನಿಧಿಸುವ ‘ನವ ಭಾರತ’ದ ಆಕಾಂಕ್ಷೆಗಳ ನಡುವೆ ಅಭೂತಪೂರ್ವ ಸಮನ್ವಯ ಇದೆ. ಅಮೆರಿಕಾದ ಕನಸು ಉದಯೋನ್ಮುಖ ಭಾರತೀಯ ಕನಸಿನೊಂದಿಗೆ ಅನೇಕ ಹೋಲಿಕೆಗಳನ್ನು ಹೊಂದಿದೆ. ಇಂತಹ ಕಾರ್ಯಕ್ರಮಗಳು ಎರಡು ಶ್ರೇಷ್ಠ ಪ್ರಜಾಪ್ರಭುತ್ವಗಳ ನಡುವೆ ಸೇತುವೆಗಳನ್ನು ನಿರ್ಮಿಸುವ ಅವಕಾಶವನ್ನು ನೀಡುತ್ತವೆ ”ಎಂದು“ ಹೌಡಿ, ಮೋದಿ!” ಸಂಘಟನಾ ಸಮಿತಿಯ ಸಂಯೋಜಕ ಕನ್ವೀನರ್ ಜುಗಲ್ ಮಲಾನಿ ಹೇಳಿದ್ದಾರೆ.
ಈ ಕಮ್ಯೂನಿಟಿ ಸಮಿತ್ಗೆ ಉಚಿತ ಪ್ರವೇಶವಿದೆ ಆದರೆ ಪಾಸ್ ಹೊಂದುವುದು ಅತ್ಯಗತ್ಯವಾಗಿದೆ. ಪಾಸ್ಗಳನ್ನು http://www.howdymodi.org ನಲ್ಲಿ ಮೊದಲು ಬಂದವರಿಗೆ ಮೊದಲ ಆದ್ಯತೆಯ ಆಧಾರದ ಮೇಲೆ ನೀಡಲಾಗುತ್ತಿದೆ. ಪಾಸ್ಗಳ ನೋಂದಣಿಗೆ ಜುಲೈ 24 ಡೆಡ್ಲೈನ್ ಆಗಿದೆ. ಕಾರ್ಯಕ್ರಮ ನಡೆಯುವ ಸ್ಥಳ ಮತ್ತು ಸಮಯವನ್ನು ಶೀಘ್ರದಲ್ಲೇ ಪ್ರಕಟಿಸಲಾಗುತ್ತದೆ ಎಂದು ಆಯೋಜಕರು ಹೇಳಿದ್ದಾರೆ.
ಪ್ರಧಾನಿ ಮೋದಿಯವರ ಭಾಷಣ ಮತ್ತು ಭಾರತೀಯ-ಅಮೆರಿಕನ್ ಸಮುದಾಯದ ಸಾಂಸ್ಕೃತಿಕ ಪ್ರದರ್ಶನವನ್ನು ಒಳಗೊಂಡಿರುವ ಈ ಕಾರ್ಯಕ್ರಮವು ಆನ್ಲೈನ್ನಲ್ಲಿ ಮತ್ತು ಟೆಲಿವಿಷನ್ ಚಾನೆಲ್ಗಳಲ್ಲಿ ಅಮೆರಿಕಾ ಮತ್ತು ಭಾರತದಾದ್ಯಂತ ಪ್ರಸಾರವಾಗಲಿದ್ದು, 1 ಬಿಲಿಯನ್ ಜನರನ್ನು ತಲುಪಲಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಮೋದಿಯವರು 2014 ರಲ್ಲಿ ಪ್ರಧಾನಿಯಾದ ನಂತರ ಭಾರತೀಯ-ಅಮೆರಿಕನ್ ಸಮುದಾಯನ್ನು ಉದ್ದೇಶಿಸಿ ಮಾಡುತ್ತಿರುವ ಮೂರನೇ ಪ್ರಮುಖ ಭಾಷಣ ಇದಾಗಿದೆ ಮತ್ತು ಈ ವರ್ಷದ ಮೇ ತಿಂಗಳಲ್ಲಿ ಪ್ರಧಾನಿಯಾಗಿ ಮರು ಆಯ್ಕೆಯಾದ ನಂತರದ ಮೊದಲ ಭಾಷಣ ಇದಾಗಿದೆ.
2014 ರಲ್ಲಿ ನ್ಯೂಯಾರ್ಕ್ನ ಮ್ಯಾಡಿಸನ್ ಸ್ಕ್ವೇರ್ ಗಾರ್ಡನ್ ಮತ್ತು 2016 ರಲ್ಲಿ ಸಿಲಿಕಾನ್ ವ್ಯಾಲಿಗಳಲ್ಲಿ ಅವರ ಕಾರ್ಯಕ್ರಮ ಆಯೋಜನೆಗೊಂಡಿತ್ತು. ಎರಡೂ ಕಾರ್ಯಕ್ರಮಗಳಿಗೂ 20,000 ಕ್ಕೂ ಹೆಚ್ಚು ಜನರು ಭಾಗವಹಿಸಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.