ನವದೆಹಲಿ: ಸಾಮಾಜಿಕ ಜಾಲತಾಣಗಳಲ್ಲಿ ಸದಾ ಸಕ್ರಿಯರಾಗಿರುವ ಪ್ರಧಾನಿ ನರೇಂದ್ರ ಮೋದಿ ತಮ್ಮ ಬೆಂಬಲಿಗರಿಗೆ ನಿಂದನಾತ್ಮಕ ಪದಗಳನ್ನು ಬಳಸದಂತೆ ಕೋರಿದ್ದಾರೆ.
ಟ್ವಿಟರ್, ಫೇಸ್ಬುಕ್ನಂತಹ ಸಾಮಾಜಿಕ ಜಾಲತಾಣಗಳಲ್ಲಿ ನಿಂದನಾತ್ಮಕ ಪದಗಳನ್ನು ಬಳಸುವುದರಿಂದ ಇಂತಹ ಅದ್ಭುತ ಮಾಧ್ಯಮಗಳು ಸತ್ತು ಹೋಗುತ್ತವೆ, ಇಲ್ಲಿ ನಾವು ಪಾಸಿಟಿವ್ ಆಗಿರಬೇಕು ಎಂದಿದ್ದಾರೆ.
ಬುಧವಾರ ಅವರು ತಮ್ಮ ನಿವಾಸದಲ್ಲಿ 100 ಮಂದಿ ಟ್ವಿಟರ್ ಫಾಲೋವರ್ಗಳನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ. ಲೋಕಸಭಾ ಚುನಾವಣೆಯಲ್ಲೂ ಸಾಮಾಜಿಕ ಜಾಲತಾಣಗಳನ್ನು ಉತ್ತಮವಾಗಿ ಬಳಸಿಕೊಂಡ ಅವರು, ಆಗಲೂ ನಿಂದನಾತ್ಮಕ ಪದಗಳನ್ನು ಬಳಸದಂತೆ ತನ್ನ ಅಭಿಮಾನಿಗಳಿಗೆ ಮನವಿ ಮಾಡಿದ್ದರು.
ನನ್ನ ವಿರುದ್ಧ ಬಂದ ನಿಂದನಾತ್ಮಕ ಪದಗಳನ್ನು ಪ್ರಿಂಟ್ ಮಾಡಿದರೆ, ಇಡೀ ತಾಜ್ ಮಹಲನ್ನೇ ಕವರ್ ಮಾಡಬಹುದು ಎಂದು ಮೋದಿ ಹೇಳಿದ್ದಾರೆ.
ಅಲ್ಲದೇ ನೆಗೆಟಿವ್ ಕಮೆಂಟ್ಗಳಿಗೆ ಎಂದಿಗೂ ಉತ್ತರಿಸಬಾರದು ಎಂಬ ಸಲಹೆಯನ್ನೂ ತನ್ನ ಬೆಂಬಲಿಗರಿಗೆ ಅವರು ನೀಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.