ವಾರಣಾಸಿ: ಕನ್ವರ್ ಯಾತ್ರೆ ಭರದಿಂದ ಸಾಗುತ್ತಿದ್ದು, ಈ ಹಿನ್ನಲೆಯಲ್ಲಿ ವಾರಣಾಸಿಯ ಅಂಗಡಿಗಳಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಚಿತ್ರಗಳನ್ನು ಹೊಂದಿರುವ ವರ್ಣರಂಜಿತ ಟೀ ಶರ್ಟ್ ಮಾರಾಟಗಳಿಗೆ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗುತ್ತಿದೆ. ಕನ್ವರ್ ಯಾತ್ರೆ ಜುಲೈ 17 ರಿಂದ ಪ್ರಾರಂಭವಾಗಿದ್ದು, ಆಗಸ್ಟ್ 15 ರವರೆಗೆ ಮುಂದುವರಿಯಲಿದೆ.
“ಸಾಮಾನ್ಯವಾಗಿ, ಕನ್ವರಿಯರು (ಯಾತ್ರಿಕರು) ಸರಳವಾದ ಕೇಸರಿ ಟೀ ಶರ್ಟ್ಗಳನ್ನು ಖರೀದಿಸುತ್ತಾರೆ. ಆದರೆ ಈ ಬಾರಿ ಮೋದಿ, ಯೋಗಿ ಚಿತ್ರವುಳ್ಳ ಎಲ್ಲಾ ಸರಕುಗಳಿಗೆ ಬೇಡಿಕೆ ಭಾರೀ ಪ್ರಮಾಣದಲ್ಲಿ ಹೆಚ್ಚಾಗಿದೆ. ಯಾತ್ರೆಗಾಗಿ ಯೋಗಿ ಸರ್ಕಾರ ಕೈಗೊಂಡ ಕ್ರಮಗಳಿಂದ ಕನ್ವರಿಯರು ಸಂತೋಷಗೊಂಡಿದ್ದಾರೆ. ಪ್ರಧಾನಿ ಮೋದಿ ವಾರಣಾಸಿ ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡಿದ್ದಾರೆ. ಹೀಗಾಗಿ ಯುವಕರು ಅವರಿಬ್ಬರ ಅಭಿಮಾನಿಗಳಾಗಿದ್ದಾರೆ” ಎಂದು ಯುವಕರ ಮೋದಿ, ಯೋಗಿ ಟೀ ಶರ್ಟ್ ಕ್ರೇಝ್ ಬಗ್ಗೆ ವ್ಯಾಪಾರಿಯೊಬ್ಬರು ಹೇಳಿಕೊಂಡಿದ್ದಾರೆ.
“ಈ ಬಾರಿ ಜನರು ‘ಅಪ್ನಾ ಟೈಮ್ ಆಯೆಗಾ’ ಮತ್ತು ‘ಜೀತಾ ಹು ಶಾನ್ ಸೆ, ಮಹಕಲ್ ತೇರೆ ನಾಮ್ ಸೆ’ ಎಂಬಿತ್ಯಾದಿ ಸ್ಲೋಗನ್ಗಳುಳ್ಳ ಟೀಶರ್ಟ್ಗಳನ್ನು ಹೆಚ್ಚಾಗಿ ಖರೀದಿಸುತ್ತಿದ್ದಾರೆ” ಎಂದಿದ್ದಾರೆ.
ವಾರಣಾಸಿಯ ಪ್ರಾಚೀನ ‘ಗಂಗಾ-ಜಮುನಿ ತೆಹ್ಜೀಬ್’ ಅನ್ನು ಅನುಸರಿಸುವ ಮೂಲಕ, ಹಿಂದೂ ಮತ್ತು ಮುಸ್ಲಿಂ ವ್ಯಾಪಾರಿಗಳು ‘ಸಾವನ್’ ಗಾಗಿ ಬಟ್ಟೆ ಮತ್ತು ಇತರ ವಸ್ತುಗಳನ್ನು ಮಾರಾಟ ಮಾಡುತ್ತಾರೆ.
“ಹೆಚ್ಚಾಗಿ ಯುವಕರು ಕನ್ವರ್ ಯಾತ್ರೆಯನ್ನು ಕೈಗೊಳ್ಳುತ್ತಿದ್ದಾರೆ. ಹೀಗಾಗಿ ಒನ್-ಲೈನರ್ ಹೊಂದಿರುವ ಟೀ ಶರ್ಟ್ಗಳಿಗೆ ಹೆಚ್ಚಿನ ಬೇಡಿಕೆ ಸೃಷ್ಟಿಯಾಗಿದೆ. ಅಲ್ಲದೆ, ಮುಖ್ಯಮಂತ್ರಿ ಯೋಗಿ ಅವರು ಯಾತ್ರೆಯ ಸಮಯದಲ್ಲಿ ಡಿಜೆ ಹಾಕಲು ಅನುಮತಿ ನೀಡಿದ್ದರಿಂದ ಜನರು ಹೆಚ್ಚು ಸಂತೋಷಗೊಂಡಿದ್ದಾರೆ” ಎಂದು ಕನ್ವರಿಯಾ ಹೇಳಿದ್ದಾರೆ.
“ವಾರಣಾಸಿಯಲ್ಲಿ, ಹಿಂದೂ ಮತ್ತು ಮುಸ್ಲಿಮರು ಒಗ್ಗಟ್ಟಾಗಿ ವಾಸಿಸುತ್ತಿದ್ದಾರೆ. ಇದು ಹಳೆಯ ಸಂಪ್ರದಾಯ ಕೂಡ ಆಗಿದೆ. ನಾವು ಹಿಂದೂ ಹಬ್ಬದ ಸಮಯದಲ್ಲಿ ವಿವಿಧ ಉತ್ಪನ್ನಗಳನ್ನು ಮಾರಾಟ ಮಾಡುತ್ತೇವೆ ಮತ್ತು ನಮ್ಮ ಸಮುದಾಯದ ಹಬ್ಬಗಳ ವೇಳೆ ಹಿಂದೂ ವ್ಯಾಪಾರಿಗಳು ನಮಗೆ ಸಂಬಂಧಿಸಿದ ವಸ್ತುಗಳನ್ನು ಮಾರಾಟ ಮಾಡುತ್ತಾರೆ” ಎಂದು ಮುಸ್ಲಿಂ ವ್ಯಾಪಾರಿ ಹೇಳಿದ್ದಾರೆ.
ಜೂನ್ನಲ್ಲಿ ಆದಿತ್ಯನಾಥ್ ಅವರು, ಸಿನಿಮಾ ಹಾಡನ್ನು ಬಿಟ್ಟು ಭಜನೆಗಳನ್ನು ನುಡಿಸಿದರೆ ‘ಕನ್ವರ್ ಯಾತ್ರೆ’ ಸಮಯದಲ್ಲಿ ಡಿಜೆಗೆ ಅವಕಾಶ ನೀಡಲಾಗುವುದು ಎಂದು ಹೇಳಿದ್ದರು. “ಕನ್ವರ್ ಯಾತ್ರೆ” ಸಮಯದಲ್ಲಿ ಡಿಜೆಗಳನ್ನು ನಿಷೇಧಿಸಲಾಗುವುದಿಲ್ಲ, ಆದರೆ ಭಜನೆಗಳನ್ನು ಮಾತ್ರ ನುಡಿಸಬೇಕು. ಯಾವುದೇ ಸಿನಿಮಾ ಹಾಡನ್ನು ಅನುಮತಿಸಲಾಗುವುದಿಲ್ಲ “ಎಂದು ಸಿಎಂಒ ಕಚೇರಿಯ ಅಧಿಕೃತ ಹೇಳಿಕೆಯಲ್ಲಿ ತಿಳಿಸಲಾಗಿದೆ.
‘ಕನ್ವರ್ ಯಾತ್ರೆ’ ಶಿವನ ಭಕ್ತರ ವಾರ್ಷಿಕ ಯಾತ್ರೆಯಾಗಿದೆ. ಗಂಗಾ ನದಿಯ ಪವಿತ್ರ ನೀರನ್ನು ತರಲು ಕನ್ವರಿಯರು (ಯಾತ್ರಿಕರು) ಉತ್ತರಾಖಂಡದ ಹರಿದ್ವಾರ, ಗೌಮುಖ್ ಮತ್ತು ಗಂಗೋತ್ರಿ ಮತ್ತು ಬಿಹಾರದ ಸುಲ್ತಂಗಂಜ್ಗೆ ಭೇಟಿ ನೀಡುತ್ತಾರೆ. ನಂತರ ಅವರು ಅದೇ ನೀರನ್ನು ಬಳಸಿ ದೇವರನ್ನು ಆರಾಧಿಸುತ್ತಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.