ನವದೆಹಲಿ: ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ಅವರು ಗುರುವಾರ ಇಂಟರ್ನ್ಯಾಷನಲ್ ಕ್ರಿಕೆಟ್ ಕೌನ್ಸಿನ್ (ಐಸಿಸಿ)ನ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಂಡಿದ್ದಾರೆ. ದಕ್ಷಿಣ ಆಫ್ರಿಕಾದ ವೇಗಿ ಅಲನ್ ಡೊನಾಲ್ಡ್ ಮತ್ತು ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಕ್ಯಾಥರಿನ್ ಫಿಟ್ಜ್ಪ್ಯಾಟ್ರಿಕ್ ಅವರನ್ನು ಕೂಡ ಸೇರ್ಪಡೆಗೊಳಿಸಲಾಗಿದೆ. ಲಂಡನ್ನಿನಲ್ಲಿ ನಡೆದ ಸಮಾರಂಭದಲ್ಲಿ ಸೇರ್ಪಡೆ ಕಾರ್ಯ ಜರುಗಿತು.
“ಐಸಿಸಿ ಕ್ರಿಕೆಟ್ ಹಾಲ್ ಆಫ್ ಫೇಮ್ಗೆ ಸೇರ್ಪಡೆಗೊಳ್ಳುವುದು ಒಂದು ಗೌರವ, ಇದು ಕ್ರಿಕೆಟಿಗರು ನೀಡಿದ ಕೊಡುಗೆಯನ್ನು ತಲೆಮಾರುಗಳುದ್ದಕ್ಕೂ ಗೌರವಿಸುತ್ತದೆ. ಇದಕ್ಕೆ ಸೇರ್ಪಡೆಗೊಂಡವರು ಆಟದ ಬೆಳವಣಿಗೆ ಮತ್ತು ಜನಪ್ರಿಯತೆಗೆ ಕೊಡುಗೆ ನೀಡಿದವರಾಗಿದ್ದಾರೆ. ನಾನೂ ಈ ಕೂಡ ಕೊಡುಗೆ ನೀಡಿದ್ದೇನೆ ಎಂಬುದೇ ನನಗೆ ಸಂತೋಷದ ವಿಷಯ” ಎಂದು ತೆಂಡೂಲ್ಕರ್ ಹೇಳಿದ್ದಾರೆ.
“ನನ್ನ ಸುದೀರ್ಘ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ನನ್ನ ಜೊತೆಗಿದ್ದ ಎಲ್ಲರಿಗೂ ಧನ್ಯವಾದ ಹೇಳಲು ನಾನು ಬಯಸುತ್ತೇನೆ. ನನ್ನ ಪೋಷಕರು, ಸಹೋದರ ಅಜಿತ್ ಮತ್ತು ಪತ್ನಿ ಅಂಜಲಿ ನನ್ನ ನಿಜವಾದ ಶಕ್ತಿ. ಕೋಚ್ ರಾಮಕಾಂತ್ ಅಚ್ರೆಕರ್ ಅವರಂತಹವರನ್ನು ಮಾರ್ಗದರ್ಶಕರಾಗಿ ಪಡೆಯಲು ನಾನು ಅದೃಷ್ಟ ಮಾಡಿದ್ದೆ”ಎಂದು ಸಚಿನ್ ಹೇಳಿದ್ದಾರೆ.
ಭಾರತದ ಮಾಜಿ ಕ್ರಿಕೆಟಿಗನಾಗಿರುವ ಸಚಿನ್, ಟೆಸ್ಟ್ನಲ್ಲಿ 15,921 ರನ್ ಮತ್ತು ಏಕದಿನ ಪಂದ್ಯಗಳಲ್ಲಿ 18,426 ರನ್ ಗಳಿಸಿದ್ದಾರೆ. ಸಚಿನ್ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ 100 ಶತಕಗಳನ್ನು ಗಳಿಸಿದ ಏಕೈಕ ವ್ಯಕ್ತಿ ಮತ್ತು ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ಮೊದಲ ವ್ಯಕ್ತಿ ಎಂಬ ಹೆಗ್ಗಳಿಕೆಯನ್ನು ಹೊಂದಿದ್ದಾರೆ.
ಈಗಾಗಲೇ ಐಸಿಸಿನ ಹಾಲ್ ಆಫ್ ಫೇಮ್ನಲ್ಲಿ ರಾಹುಲ್ ದ್ರಾವಿಡ್, ಅನಿಲ್ ಕುಂಬ್ಳೆ, ಬಿಶನ್ ಸಿಂಗ್ ಬೇಡಿ, ಕಪಿಲ್ ದೇವ್, ಸುನಿಲ್ ಗಾವಸ್ಕರ್ ಸ್ಥಾನ ಪಡೆದುಕೊಂಡಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.