ನವದೆಹಲಿ: ಭಾರತದ ಭರವಸೆಯ ಓಟಗಾರ್ತಿ ಹಿಮಾ ದಾಸ್ ಅವರು, ಅಸ್ಸಾಂ ನೆರೆ ಸಂತ್ರಸ್ಥರಿಗೆ ತಮ್ಮ ಮಾಸಿಕ ವೇತನದ ಅರ್ಧದಷ್ಟು ಹಣವನ್ನು ನೀಡಿದ್ದಾರೆ. ಆಕೆಯ ತವರು ರಾಜ್ಯವಾಗಿರುವ ಅಸ್ಸಾಂ ಭೀಕರ ನೆರೆಗೆ ತುತ್ತಾಗಿದ್ದು, ಅನೇಕ ಮಂದಿ ಮನೆ ಮಠ ಕಳೆದುಕೊಂಡಿದ್ದಾರೆ.
ಪ್ರಸ್ತುತ ಹಿಮಾ ದಾಸ್ ಅವರು ಯುರೋಪ್ನಲ್ಲಿದ್ದು, ತರಬೇತಿ ಕಾರ್ಯ ಮತ್ತು ಸ್ಪರ್ಧಾತ್ಮಕ ಸಭೆಗಳಲ್ಲಿ ಭಾಗಿಯಾಗುತ್ತಿದ್ದಾರೆ. ಅವರು ಅಸ್ಸಾಂ ಮುಖ್ಯಮಂತ್ರಿಗಳ ಪರಿಹಾರ ನಿಧಿಗೆ ತಮ್ಮ ಅರ್ಧ ವೇತನವನ್ನು ನೀಡಿದ್ದಾರೆ.
“ಅಸ್ಸಾಂನಲ್ಲಿನ ನೆರೆ ಪರಿಸ್ಥಿತಿ ಆತಂಕಕಾರಿಯಾಗಿದ್ದು, 33 ಜಿಲ್ಲೆಗಳ ಪೈಕಿ 30 ಜಿಲ್ಲೆಗಳು ಸಂಪೂರ್ಣ ಜಲಾವೃತವಾಗಿವೆ. ಹೀಗಾಗಿ ದೊಡ್ದ ಉದ್ಯಮಿಗಳಿಗೆ, ಜನರಿಗೆ ಮುಂದೆ ಬಂದು ಕಠಿಣ ಪರಿಸ್ಥಿತಿಯನ್ನು ಎದುರಿಸುತ್ತಿರುವ ಅಸ್ಸಾಂ ಜನತೆಗೆ ಸಹಾಯ ಮಾಡಿ ಎಂದು ಕೇಳಿಕೊಳ್ಳುತ್ತೇನೆ” ಎಂದು ಹಿಮಾ ದಾಸ್ ಟ್ವೀಟ್ ಮಾಡಿದ್ದಾರೆ.
ಕಳೆದ ವರ್ಷ ಜುಲೈನಲ್ಲಿ ನಡೆದ ಗ್ಲೋಬಲ್ ಅಥ್ಲೆಟಿಕ್ ಕ್ರೀಡಾಕೂಟದಲ್ಲಿ ಚಿನ್ನ ಗೆದ್ದ ಹಿಮಾದಾಸ್, ಈ ಸಾಧನೆಯನ್ನು ಮಾಡಿದ ಮೊದಲ ಭಾರತೀಯ ಓಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದದರು. ಆ ಬಳಿಕದಿಂದ ಅವರು ತನ್ನ ತಾಯ್ನಾಡಿನಲ್ಲಿ ಸೂಪರ್ ಸ್ಟಾರ್ ಎನಿಸಿಕೊಂಡಿದ್ದಾರೆ. ಐಎಎಎಫ್ ವರ್ಲ್ಡ್ ಅಂಡರ್ -20 ಅಥ್ಲೆಟಿಕ್ಸ್ ಚಾಂಪಿಯನ್ಶಿಪ್ನಲ್ಲಿ ಮಹಿಳೆಯರ 400 ಮೀಟರ್ ಅಂತಿಮ ಓಟವನ್ನು ಗೆಲ್ಲುವ ಮೂಲಕ ಅವರು ಈ ಚಿನ್ನವನ್ನು ಪಡೆದುಕೊಂಡಿದ್ದರು.
ಅಸ್ಸಾಂ ಪ್ರವಾಹದಲ್ಲಿ ಕನಿಷ್ಠ ಹದಿನೈದು ಮಂದಿ ಸಾವನ್ನಪ್ಪಿದ್ದಾರೆ ಮತ್ತು ಲಕ್ಷಾಂತರ ಜನರು ಸ್ಥಳಾಂತರಗೊಂಡಿದ್ದಾರೆ ಎಂದು ವರದಿಗಳು ಹೇಳಿವೆ. ಇದಲ್ಲದೆ, ಕಾಜಿರಂಗಾ ರಾಷ್ಟ್ರೀಯ ಉದ್ಯಾನ ಕೂಡ ಶೇ.90ರಷ್ಟು ಮುಳುಗಿದ್ದು, ಪ್ರಾಣಿಗಳು ಅಪಾಯದಲ್ಲಿವೆ. ಈ ಹಿನ್ನಲೆಯಲ್ಲಿ ಹಿಮಾ ದಾಸ್ ನೀಡಿದೆ ಕೊಡುಗೆ ಇತರರಿಗೂ ಪ್ರೇರಣೆಯಾಗಿದೆ.
I have contributed my bit and requesting others also to please help people of Assam. #AssamFloods https://t.co/y7ml1EMGzG
— Hima MON JAI (@HimaDas8) July 16, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.