ನವದೆಹಲಿ: ಸಶಸ್ತ್ರ ಪಡೆಗಳ ವೈದ್ಯಕೀಯ ಸೇವೆಗಳ (ಎಎಫ್ಎಂಎಸ್) ಅತ್ಯುತ್ತಮ ಮತ್ತು ಎರಡನೇ ಅತ್ಯುತ್ತಮ ಕಮಾಂಡ್ ಆಸ್ಪತ್ರೆಗಳಿಗೆ 2018ರ ರಕ್ಷಾ ಮಂತ್ರಿ ಟ್ರೋಫಿಯನ್ನು ನವದೆಹಲಿಯಲ್ಲಿ ಮಂಗಳವಾರ ರಕ್ಷಣಾ ಮಂತ್ರಿ ರಾಜನಾಥ್ ಸಿಂಗ್ ಪ್ರದಾನಿಸಿದರು.
ಎಎಫ್ಎಂಎಸ್ನ ಅತ್ಯುತ್ತಮ ಕಮಾಂಡ್ ಹಾಸ್ಪಿಟಲ್ ಅವಾರ್ಡ್ ಅನ್ನು, ಕಮಾಂಡ್ ಹಾಸ್ಪಿಟಲ್ ಏರ್ಫೋರ್ಸ್ ಬೆಂಗಳೂರಿಗೆ ನೀಡಲಾಗಿದೆ. ಎರಡನೇ ಅತ್ಯುತ್ತಮ ಕಮಾಂಡ್ ಆಸ್ಪತ್ರೆ ಅವಾರ್ಡ್ ಅನ್ನು ಕಮಾಂಡ್ ಹಾಸ್ಪಿಟಲ್ ಸೆಂಟ್ರಲ್ ಕಮಾಂಡ್ ಲಕ್ನೋಗೆ ನೀಡಲಾಗಿದೆ.
“ಕಮಾಂಡ್ ಹಾಸ್ಪಿಟಲ್ ಏರ್ಫೋರ್ಸ್ ಬೆಂಗಳೂರು ಮತ್ತು ಕಮಾಂಡ್ ಹಾಸ್ಪಿಟಲ್ ಸೆಂಟ್ರಲ್ ಕಮಾಂಡ್ ಲಕ್ನೋಗಳನ್ನು ಕ್ರಮವಾಗಿ ಅತ್ಯುತ್ತಮ ಮತ್ತು ಎರಡನೇ ಅತ್ಯುತ್ತಮ ಕಮಾಂಡ್ ಆಸ್ಪತ್ರೆ ಎಂದು ಆಯ್ಕೆ ಮಾಡಲಾಗಿದೆ” ಎಂದು ರಕ್ಷಣಾ ಮಂತ್ರಿಯ ಕಚೇರಿಯ ಅಧಿಕೃತ ಟ್ವೀಟ್ ಹ್ಯಾಂಡಲ್ ಮೂಲಕ ತಿಳಿಸಲಾಗಿದೆ.
ಮಂಗಳವಾರ ರಾಜನಾಥ್ ಸಿಂಗ್ ಅವರು, ಎಕೆ 203 ಅಸಾಲ್ಟ್ ರೈಫಲ್ಗಳ ಉತ್ಪಾದನೆಗಾಗಿ ಉತ್ತರ ಪ್ರದೇಶದ ಕೊರ್ವಾದಲ್ಲಿ ಹೊಸದಾಗಿ ನಿರ್ಮಾಣ ಮಾಡಲಾದ ಜಂಟಿ ಉದ್ಯಮ – ಇಂಡೋ ರಷ್ಯನ್ ರೈಫಲ್ಸ್ ಪ್ರೈವೇಟ್ ಲಿಮಿಟೆಡ್ (ಐಆರ್ಆರ್ಪಿಎಲ್)ಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲಿ ಉನ್ನತ ಮಟ್ಟದ ಸಭೆಯನ್ನು ನಡೆಸಿದರು.
ಐಆರ್ಆರ್ಪಿಎಲ್ನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ (ಸಿಇಒ) ಮೇಜರ್ ಜನರಲ್ ಸಂಜೀವ್ ಸೆಂಗರ್ ಅವರು ಸಭೆಯಲ್ಲಿ ಮಾತನಾಡಿ, ಇದು ಭಾರತದ ಆರ್ಡ್ನೆನ್ಸ್ ಫ್ಯಾಕ್ಟರೀಸ್ ಬೋರ್ಡ್ (ಒಎಫ್ಬಿ) ಮತ್ತು ರೋಸನ್ಬೊರಾನ್ ಎಕ್ಸ್ಪೋರ್ಟ್ಸ್ ಮತ್ತು ರಷ್ಯಾದ ಕಲಾಶ್ ಕಲಾಶ್ನಿಕೋವ್ದ ಜಂಟಿ ಉದ್ಯಮವಾಗಿದೆ ಎಂದು ಹೇಳಿದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.