ರಾಂಚಿ: ಮುಸ್ಲಿಂ ಸಮುದಾಯದ ಬಗ್ಗೆ ಅಕ್ಷೇಪಾರ್ಹ ಹೇಳಿಕೆಯನ್ನು ಫೇಸ್ಬುಕ್ನಲ್ಲಿ ಹಾಕಿದ್ದ ಯುವತಿಯೊಬ್ಬಳನ್ನು ಇತ್ತೀಚಿಗೆ ಝಾರ್ಖಾಂಡ್ ಪೊಲೀಸರು ಬಂಧನಕ್ಕೊಳಪಡಿಸಿದ್ದರು. ಇದೀಗ ಆಕೆಗೆ ನ್ಯಾಯಾಲಯ ಖುರಾನ್ ಅನ್ನು ಹಂಚುವ ಶಿಕ್ಷೆಯನ್ನು ನೀಡಿದ್ದು, ಇದಕ್ಕೆ ತೀವ್ರ ವಿರೋಧಗಳು ವ್ಯಕ್ತವಾಗಿದೆ. ಯುವತಿ ಈ ಶಿಕ್ಷೆಯ ವಿರುದ್ಧ ಹೋರಾಟ ನಡೆಸಲು ಅಣಿಯಾಗುತ್ತಿದ್ದಾಳೆ.
ನ್ಯಾಯಾಲಯ ಆಕೆಗೆ ಷರತ್ತು ಬದ್ಧ ಜಾಮೀನನ್ನು ಮಂಜೂರು ಮಾಡಿದೆ. ಆದರೆ ಆಕೆ ಸರ್ಧಾರ್ ಅಂಜುಮಾನ್ ಇಸ್ಲಾಮಿಯಾ ಸಮಿತಿಗೆ ಒಂದು ಖುರಾನಿನ ಪ್ರತಿ ಮತ್ತು ಇತರ ನಾಲ್ಕು ಶಾಲೆ ಮತ್ತು ಕಾಲೇಜುಗಳಿಗೆ ತೆರಳಿ ಖುರಾನ್ ಪ್ರತಿಗಳನ್ನು ಹಂಚಬೇಕು ಎಂದು ಸೂಚನೆಯನ್ನು ನೀಡಿದೆ.
ರಿಚಾ ಭಾರ್ತಿಗೆ ಜುಲೈ 14ರಂದು ನ್ಯಾಯಾಲಯ ಈ ಆದೇಶವನ್ನು ನೀಡಿದೆ, ಅಲ್ಲದೇ ಈ ಸಂಸ್ಥೆಗಳಿಂದ ಖುರಾನ್ ಅನ್ನು ನೀಡಿದ ರಶೀದಿಯನ್ನೂ ತಂದು ಕೊಡುವಂತೆ ಸೂಚಿಸಿದೆ.
ಆದರೆ ರಿಚಾ ಭಾರ್ತಿ ತಾನು ನ್ಯಾಯಾಲಯದ ಈ ಆದೇಶವನ್ನು ಪಾಲನೆ ಮಾಡುವುದಿಲ್ಲ ಎಂದು ಸ್ಪಷ್ಟಪಡಿಸಿದ್ದಾಳೆ. ಇವತ್ತು ಖುರಾನ್ ಹಂಚಿಕೆ ಮಾಡಬೇಕು ಎಂದು ಹೇಳಿದವರು, ನಾಳೆ ನಮಾಝ್ ಮಾಡು, ಇಸ್ಲಾಂಗೆ ಮತಾಂತರಗೊಳ್ಳು ಎಂದೂ ಹೇಳಬಹುದು. ಸನಾತನ ಧರ್ಮವನ್ನು ಅವಹೇಳನ ಮಾಡಿದ ಮುಸ್ಲಿಮರಿಗೆ ಇದುವರೆಗೆ ಎಂದಾದರೂ ರಾಯಾಯಣ, ಮಹಾಭಾರತವನ್ನು ಓದುವ ಶಿಕ್ಷೆಯನ್ನು ವಿಧಿಸಲಾಗಿದೆಯೇ ಎಂದು ಆಕೆ ಪ್ರಶ್ನೆ ಮಾಡಿದ್ದಾಳೆ.
ಗುಂಪು ಹಲ್ಲೆಗೊಳಗಾಗಿ ಮೃತಪಟ್ಟಿದ್ದ ತಬ್ರೆಝ್ ಅನ್ಸಾರಿಯ ಸಾವಿಗೆ ಪ್ರತಿಕಾರ ತೀರಿಸಬೇಕು ಎಂದು ಹೇಳಿದ್ದ ಟಿಕ್ ಟಾಕ್ ವೀಡಿಯೋವೊಂದರ ವಿರುದ್ಧ ರಿಚಾ ಭಾರ್ತಿ ಫೇಸ್ ಬುಕ್ ಫೋಸ್ಟ್ ಹಾಕಿದ್ದಳು. ಇದಕ್ಕೆ ಸ್ಥಳೀಯ ಮುಸ್ಲಿಮ್ ಸಮುದಾಯದಿಂದ ತೀವ್ರ ಸ್ವರೂಪದ ವಿರೋಧ ವ್ಯಕ್ತವಾಗಿದ್ದು, ಆಕೆಯ ವಿರುದ್ಧ ದೂರು ಕೂಡ ದಾಖಲಾಗಿತ್ತು. ಕೊನೆಗೆ ಆಕೆಯನ್ನು ಬಂಧನಕ್ಕೊಳಪಡಿಸಲಾಯಿತು.
ಆದರೆ ಈಗ ನ್ಯಾಯಾಲಯ ಆಕೆಗೆ ನೀಡಿರುವ ಶಿಕ್ಷೆ ನಿಜಕ್ಕೂ ವಿಚಿತ್ರವೆನಿಸಿದ್ದು, ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.