ನವದೆಹಲಿ: ಇಂದು ಎಲ್ಲಾ ವಿದ್ಯಾರ್ಥಿಗಳಿಗೂ ಸ್ಫೂರ್ತಿದಾಯಕ ದಿನ. ಯಾಕೆಂದರೆ ಗುರುವನ್ನು ಸ್ಮರಿಸಿ ಗೌರವಿಸುವ ‘ಗುರು ಪೂರ್ಣಿಮಾ’ವನ್ನು ನಾವಿಂದು ಆಚರಿಸುತ್ತಿದ್ದೇವೆ. ಗುರುಗಳಿಗಾಗಿ ಮೀಸಲಿಟ್ಟ ದಿನವಿಂದು. ಈ ಶುಭ ದಿನದಂದು ಕೇಂದ್ರ ಮಾನವ ಸಂಪನ್ಮೂಲ ಸಚಿವಾಲಯವು ವಿಭಿನ್ನವಾದ ಅಭಿಯಾನವೊಂದನ್ನು ಆರಂಭಿಸಿದೆ. ಅದುವೇ #ಸೆಲ್ಫಿವಿದ್ಗುರು.
ವೀಡಿಯೋ ಸಂದೇಶವನ್ನು ನೀಡಿರುವ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಕ್ರಿಯಾಲ್ ಅವರು, ಶಿಕ್ಷಕರು ಮತ್ತು ವಿದ್ಯಾರ್ಥಿಗಳು ತಮ್ಮ ಗುರುವಿನೊಂದಿಗೆ ಫೋಟೋವನ್ನು ಕ್ಲಿಕ್ಕಿಸಿ ಅದನ್ನು #SelfiewithGuru ಹ್ಯಾಶ್ಟ್ಯಾಗ್ ಬಳಸಿ ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವಂತೆ ಕರೆ ನೀಡಿದ್ದಾರೆ.
“ಗುರು ಪೂರ್ಣಿಮೆಯ ಸಂದರ್ಭವನ್ನು ಆಚರಿಸುವ ಸಲುವಾಗಿ, ಜನರು ತಾವು ಗುರು ಎಂದು ಪರಿಗಣಿಸುವವರೊಂದಿಗೆ ಸೆಲ್ಫಿಯನ್ನು ತೆಗೆದು ಹಂಚಿಕೊಂಡರೆ, ಅವರ ಬಗ್ಗೆ ಕೃತಜ್ಞತೆ, ಗೌರವವನ್ನು ವ್ಯಕ್ತಪಡಿಸಿದರೆ, ಗುರು-ಶಿಷ್ಯ ಸಂಸ್ಕೃತಿ ಭಾರತದಲ್ಲಿ ಪುನರುಜ್ಜೀವನಗೊಳ್ಳುತ್ತದೆ” ಎಂದು ಸಚಿವರು ತಮ್ಮ ವೀಡಿಯೋ ಸಂದೇಶದಲ್ಲಿ ಹೇಳಿಕೊಂಡಿದ್ದಾರೆ. ಜೀವನದಲ್ಲಿ ಉತ್ತಮ ಸಾಧನೆ ಮಾಡಲು ಪ್ರೇರಣೆ ನೀಡಿದವರು ನಮಗೆ ಗುರು ಆಗಿರುತ್ತಾರೆ ಎಂದಿದ್ದಾರೆ.
ಗುರು ಪೂರ್ಣಿಮಾ ಗುರುಗಳಿಗೆ ಮೀಸಲಾದ ದಿನ. ಇದನ್ನು ಹಿಂದೂ ಮತ್ತು ಬೌದ್ಧ ಧರ್ಮದಲ್ಲಿ ಆಚರಿಸಲಾಗುತ್ತದೆ. ಹುಣ್ಣಿಮೆಯ ದಿನದಂದು ಇದನ್ನು ಆಚರಿಸಲಾಗುತ್ತದೆ.
ಭಗವಾನ್ ಬುದ್ಧ ಈ ದಿನದಂದು ತನ್ನ ಮೊದಲ ಧರ್ಮೋಪದೇಶವನ್ನು ನೀಡಿದ್ದಾನೆ ಎಂದು ನಂಬಲಾಗಿದೆ. ಶಿವನು ಗುರು ಪೂರ್ಣಿಮೆಯಂದು ಆದಿಯೋಗಿ ಅಥವಾ ಮೊದಲ ಯೋಗಿಯಾದನು ಎಂದು ನಂಬಲಾಗಿದೆ. ಇಂದು ಮಹಾಭಾರತವನ್ನು ರಚಿಸಿದ ವೇದವ್ಯಾಸರ ಜನ್ಮದಿನ ಕೂಡ ಆಗಿದೆ.
To mark the occasion of Guru Purnima, Union HRD Minister @DrRPNishank today launched a people’s campaign #SelfiewithGuru inviting participation from all to post their selfie with their teachers on social media and highlight the importance of teachers in our lives. @PMOIndia pic.twitter.com/Tu6Oa97ESX
— Ministry of HRD (@HRDMinistry) July 15, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.