ನವದೆಹಲಿ: ವಾಣಿಜ್ಯ ಬಾಡಿಗೆ ತಾಯ್ತನಕ್ಕೆ ನಿಷೇಧ ಹೇರುವ ಮತ್ತು ರಾಷ್ಟ್ರೀಯ ಮತ್ತು ರಾಜ್ಯ ಮಟ್ಟಗಳಲ್ಲಿ ಮಂಡಳಿಗಳನ್ನು ಸ್ಥಾಪನೆ ಮಾಡಿ ಬಾಡಿಗೆ ತಾಯ್ತನವನ್ನು ನಿಯಂತ್ರಿಸುವ ಮಸೂದೆಯನ್ನು ಸೋಮವಾರ ಲೋಕಸಭೆಯಲ್ಲಿ ಮಂಡನೆಗೊಳಿಸಲಾಗಿದೆ.
ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಅವರು, ಬಾಡಿಗೆ ತಾಯ್ತತನ (ನಿಯಂತ್ರಣ) ಮಸೂದೆ, 2019 ಅನ್ನು ಲೋಕಸಭೆಯಲ್ಲಿ ಮಂಡನೆಗೊಳಿಸಿದ್ದಾರೆ.
ಬಾಡಿಗೆ ತಾಯಂದಿರು ಮತ್ತು ಮಕ್ಕಳ ಮೇಲಿನ ದೌರ್ಜನ್ಯವನ್ನು ತಡೆಗಟ್ಟುವ ಮತ್ತು ಅಗತ್ಯವುಳ್ಳ ಭಾರತೀಯ ದಂಪತಿಗಳಿಗೆ ನೈತಿಕ ಬಾಡಿಗೆ ತಾಯ್ತನಕ್ಕೆ ಅವಕಾಶ ನೀಡುವ ಉದ್ದೇಶವನ್ನು ಈ ಮಸೂದೆಯು ಹೊಂದಿದೆ.
2018ರಲ್ಲಿ ಹಿಂದಿನ ಲೋಕಸಭಾದಲ್ಲಿ ಈ ಮಸೂದೆಯನ್ನು ಮಂಡನೆಗೊಳಿಸಲಾಗಿತ್ತು, ಆದರೆ ಆ ಲೋಕಸಭೆ ವಿಸರ್ಜನೆಗೊಂಡು ಹೊಸ ಲೋಕಸಭೆ ಬಂದ ಹಿನ್ನಲೆಯಲ್ಲಿ ಮತ್ತೊಮ್ಮೆ ಅದನ್ನು ಮಂಡನೆಗೊಳಿಸಲಾಗಿದೆ.
ಒಂದೇ ಲಿಂಗದ ದಂಪತಿಗಳು ಮಗುವನ್ನು ಮಾಡಿಕೊಳ್ಳುವ ಅವಕಾಶವನ್ನು ಈ ಮಸೂದೆ ನೀಡುತ್ತಿಲ್ಲ, ಅಲ್ಲದೇ ಮಗು ಪಡೆಯಲು ಸಮಯ ನಿಗದಿ ಮಾಡುವ ಮೂಲಕ ಮಕ್ಕಳಿಲ್ಲದ ದಂಪತಿಗೆ ಬೇಕಾದಾಗ ಮಗುವನ್ನು ಪಡೆಯುವ ಅವಕಾಶವನ್ನು ಇದು ನೀಡುತ್ತಿಲ್ಲ ಎಂಬ ವಿರೋಧಗಳು ಈ ಹಿಂದೆ ವ್ಯಕ್ತವಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.