ನವದೆಹಲಿ: ಕೀನ್ಯಾ ದೇಶದ ಸಂಸದರೊಬ್ಬರು 30 ವರ್ಷಗಳ ಹಿಂದೆ ಪಡೆದುಕೊಂಡಿದ್ದ 200 ರೂಪಾಯಿ ಸಾಲವನ್ನು ಮರಳಿ ನೀಡುವ ಸಲುವಾಗಿ ಭಾರತಕ್ಕೆ ಆಗಮಿಸಿದ್ದಾರೆ. ರಿಚಾರ್ಡ್ ಟೋಂಗಿ ಎಂಬುವವರು 70 ರ ಹರೆಯದ ಮಹಾರಾಷ್ಟ್ರದವರಾದ ಕಾಶಿನಾಥ್ ಗೌಳಿ ಎಂಬುವವರನ್ನು ಭೇಟಿಯಾಗಿ ಅವರಿಂದ ಪಡೆದ ಹಣವನ್ನು ವಾಪಾಸ್ ಮಾಡಿದ್ದಾರೆ.
30 ವರ್ಷಗಳ ಹಿಂದೆ ಮಹಾರಾಷ್ಟ್ರದ ಔರಂಗಬಾದ್ ನಲ್ಲಿ 1985-89ರಲ್ಲಿ ಕಾಲೇಜು ವಿದ್ಯಾಭ್ಯಾಸ ಮಾಡುತ್ತಿದ್ದ ಸಂದರ್ಭದಲ್ಲಿ ದಿನಸಿ ಅಂಗಡಿ ಇಟ್ಟುಕೊಂಡಿದ್ದ ಕಾಶೀನಾಥ್ ಗೌಳಿ ಅವರಿಂದ 200 ರೂಪಾಯಿ ಸಾಲ ಪಡೆದುಕೊಂಡಿದ್ದರು. ಆದರೆ ವಾಪಾಸ್ ತವರಿ ಹೋಗುವವರೆಗೆ ಅವರಿಗೆ ಸಾಲವನ್ನು ಮರಳಿ ನೀಡಲು ಸಾಧ್ಯವಾಗಿರಲಿಲ್ಲ. ಆದರೆ ಭಾರತಕ್ಕೆ ಒಂದಲ್ಲ ಒಂದು ದಿನ ಹೋಗಿ ಸಾಲವನ್ನು ಮರಳಿಸಬೇಕು ಎಂಬ ದೃಢ ನಿರ್ಧಾರವನ್ನು ಅವರು ಮಾಡಿದ್ದರು.
ಪ್ರಸ್ತುತ ರಿಚರ್ಡ್ ಕೀನ್ಯಾದ ನೈರಿಬಾರಿ ಚಾಚೆ ಕ್ಷೇತ್ರದ ಸಂಸದರಾಗಿದ್ದಾರೆ. ಪ್ರಸ್ತುತ ಅವರು ಪತ್ನಿಯೊಂದಿಗೆ ಭಾರತಕ್ಕೆ ಬಂದಿದ್ದು, ಗೌಳಿ ಅವರನ್ನು ಭೇಟಿಯಾಗಿ 30 ವರ್ಷಗಳ ಹಿಂದೆ ಪಡೆದುಕೊಂಡಿದ್ದ 200 ರೂಪಾಯಿಗಳನ್ನು ಹಿಂದಿರುಗಿಸಿದ್ದಾರೆ.
ಇವರಿಬ್ಬರು ಭೇಟಿ ನಿಜಕ್ಕೂ ಭಾವುಕವಾಗಿತ್ತು. ಕೀನ್ಯಾದ ಎಂಪಿ ತನ್ನ ಮನೆ ಬಾಗಿಲಿಗೆ ಬಂದಿದ್ದನ್ನು ಕಂಡು ಗೌಳಿಯವರು ಭಾವುಕರಾಗಿದ್ದಾರೆ. ರಿಚರ್ಡ್ ಕೂಡ ಹಿಂದಿನ ಘಟನೆಗಳನ್ನು ನೆನೆಸಿಕೊಂಡು ಭಾವುಕರಾಗಿದ್ದಾರೆ.
“ಔರಂಗಬಾದಿನಲ್ಲಿ ವಿದ್ಯಾರ್ಥಿಯಾಗಿದ್ದಾಗ ಆರ್ಥಿಕವಾಗಿ ತೀವ್ರ ಕುಸಿತ ಕಂಡಿದ್ದೆ. ಆಗ ನನ್ನ ನೆರವಿಗೆ ಬಂದವರು ಈ ಜನರು. ಒಂದಲ್ಲ ಒಂದು ದಿನ ವಾಪಾಸ್ ಆಗಿ ಸಾಲ ತೀರಿಸುತ್ತೇನೆ ಎಂದು ಪಣ ತೊಟ್ಟಿದ್ದೆ. ಈ ಭೇಟಿ ನನಗೆ ನಿಜಕ್ಕೂ ಭಾವನಾತ್ಮಕವಾಗಿದೆ” ಎಂದಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.