ನವದೆಹಲಿ: ‘ನವ ಭಾರತ’ ಕನಸನ್ನು ನನಸು ಮಾಡುವಲ್ಲಿ ಶಿಕ್ಷಣ ಪ್ರಮುಖವಾದ ಪಾತ್ರವನ್ನು ನಿರ್ವಹಿಸುತ್ತದೆ. ಈ ಹಿನ್ನಲೆಯಲ್ಲಿ ಶಿಕ್ಷಣದಲ್ಲಿ ಹೊಸ ಸುಧಾರಣೆಗಳನ್ನು ತರುವ ಮೂಲಕ ಎಲ್ಲಾ ರಾಜ್ಯಗಳು ನವ ಭಾರತದ ಗುರಿಯನ್ನು ಸಾಧಿಸಲು ಶ್ರಮಿಸುತ್ತಿವೆ. ‘ಪರ್ಫಾರ್ಮೆನ್ಸ್ ಗ್ರೇಡಿಂಗ್ ಇಂಡೆಕ್ಸ್ 2017-18’ ಈ ಪ್ರಯತ್ನಗಳನ್ನು ಅಳೆಯುವ ಗ್ರೇಡಿಂಗ್ ಮಾನದಂಡವಾಗಿದ್ದು, ಇದರಲ್ಲಿ ಚಂಡೀಗಢ ಶಿಕ್ಷಣ ಕ್ಷೇತ್ರದಲ್ಲಿ ಅತ್ಯುತ್ತಮ ಸ್ಥಾನ ಪಡೆದುಕೊಂಡಿದೆ. ಕೇರಳ ಮತ್ತು ಗುಜರಾತ್ ನಂತರದ ಸ್ಥಾನದಲ್ಲಿವೆ.
ಎಚ್ಆರ್ಡಿ ಸಚಿವಾಲಯದ ಅಧಿಕೃತ ಹೇಳಿಕೆಯ ಪ್ರಕಾರ, ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಿಗಿಂತ ಚಂಡೀಗಢ ಶಿಕ್ಷಣ ಸುಧಾರಣೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದೆ. ಅರುಣಾಚಲ ಪ್ರದೇಶವು ಕಡಿಮೆ ಕಾರ್ಯನಿರ್ವಹಿಸುತ್ತಿರುವ ರಾಜ್ಯವಾಗಿದೆ ಮತ್ತು ಸೂಚ್ಯಂಕದಲ್ಲಿ 36 ನೇ ಸ್ಥಾನದಲ್ಲಿದೆ.
ಎಚ್ಆರ್ಡಿ ಸಚಿವಾಲಯದ ‘ಪರ್ಫಾರ್ಮೆನ್ಸ್ ಗ್ರೇಡಿಂಗ್ ಇಂಡೆಕ್ಸ್ 2017-18’ ಪ್ರಕಾರ, ಹರಿಯಾಣ 4ನೇ ಸ್ಥಾನ, ತಮಿಳುನಾಡು 5ನೇ ಸ್ಥಾನ, ಪಂಜಾಬ್ 7ನೇ ಸ್ಥಾನ, ರಾಜಸ್ಥಾನ 8ನೇ ಸ್ಥಾನ ಮತ್ತು ದೆಹಲಿ 9ನೇ ಸ್ಥಾನ ಪಡೆದುಕೊಂಡಿದೆ. ಆದರೆ ಕಡಿಮೆ ಸ್ಥಾನದಲ್ಲಿ ಮೇಘಾಲಯ 34ನೇ, ನಾಗಾಲ್ಯಾಂಡ್ 35ನೇ ಮತ್ತು ಅರುಣಾಚಲ ಪ್ರದೇಶ 36ನೇ ಸ್ಥಾನ ಪಡೆದುಕೊಂಡಿದೆ.
ಕೇರಳವು ಹೆಚ್ಚಿನ ಸಾಕ್ಷರತೆ ಹೊಂದಿರುವ ರಾಜ್ಯವಾಗಿದ್ದು, ಲಕ್ಷದ್ವೀಪ ಮತ್ತು ಮಿಜೋರಾಂ ನಂತರದ ಸ್ಥಾನದಲ್ಲಿವೆ. ಕಳೆದ ವಾರ ಸಂಸತ್ತಿನಲ್ಲಿ ಕೇಂದ್ರ ಮಾನವ ಸಂಪನ್ಮೂಲ ಸಚಿವ ರಮೇಶ್ ಪೋಖ್ರಿಯಲ್ ನಿಶಾಂಕ್ ಈ ಮಾಹಿತಿಯನ್ನು ಹಂಚಿಕೊಂಡಿದ್ದಾರೆ.
2021 ರ ವೇಳೆಗೆ 100% ಸಾಕ್ಷರತೆ?
2017 ರಲ್ಲಿ ಕೇಂದ್ರ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವರಾಗಿದ್ದ ಪ್ರಕಾಶ್ ಜಾವ್ಡೇಕರ್ ಅವರು, 2021 ರ ವೇಳೆಗೆ ಎಲ್ಲಾ ಭಾರತೀಯರು ಸಾಕ್ಷರರಾಗುತ್ತಾರೆ ಎಂಬ ಭರವಸೆ ನೀಡಿದ್ದರು.
“ಸ್ವಾತಂತ್ರ್ಯೋತ್ತರ ಕಾಲದಲ್ಲಿ ಸಾಕ್ಷರತೆಯ ಪ್ರಮಾಣ ಶೇ.18ರಷ್ಟು ಇತ್ತು. ಇಂದು ಅದು ಶೇ.80ಕ್ಕೆ ಏರಿದೆ ಮತ್ತು ಮುಂದಿನ ಐದು ವರ್ಷಗಳಲ್ಲಿ ಅದು ಶೇ.100ರಷ್ಟು ಆಗುತ್ತದೆ ಎಂದು ನಾನು ಖಾತರಿಪಡಿಸುತ್ತೇನೆ. ಆ ವೇಳಗೆ ದೇಶದಲ್ಲಿ ಅನಕ್ಷರತೆ ಇರುವುದಿಲ್ಲ ” ಎಂದಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.