ನವದೆಹಲಿ: OHS ಕೋಡ್ ಎಂದೂ ಕರೆಯಲ್ಪಡುವ, ಉದ್ಯೋಗ, ಸುರಕ್ಷತೆ, ಆರೋಗ್ಯ ಮತ್ತು ಕೆಲಸದ ಪರಿಸ್ಥಿತಿಗಳ ನೀತಿಗೆ ಕೇಂದ್ರ ಸಂಪುಟ ಬುಧವಾರ ಅಂಗೀಕಾರವನ್ನು ನೀಡಿದೆ. ಇದು 13 ಕೇಂದ್ರ ಕಾರ್ಮಿಕ ಕಾನೂನುಗಳನ್ನು ಒಂದೇ ನೀತಿಯಡಿ ವಿಲೀನಗೊಳಿಸಲಿದೆ. ಅಲ್ಲದೇ, ಇದು 10 ಅಥವಾ ಹೆಚ್ಚಿನ ಕಾರ್ಮಿಕರನ್ನು ನೇಮಿಸಿಕೊಳ್ಳುವ ಎಲ್ಲಾ ಸಂಸ್ಥೆಗಳಿಗೆ ಅನ್ವಯವಾಗಲಿದೆ.
ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಪರಿಸರ ಮತ್ತು ಮಾಹಿತಿ ಮತ್ತು ಪ್ರಸಾರ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದಾರೆ. ನರೇಂದ್ರ ಮೋದಿ ಸರ್ಕಾರ ತನ್ನ ಎರಡನೆಯ ಅವಧಿಯಲ್ಲಿ ಕಾರ್ಮಿಕ ಸುಧಾರಣೆಗಳಿಗೆ ಹೆಚ್ಚಿನ ಒತ್ತನ್ನು ನೀಡಲು ಬದ್ಧವಾಗಿದೆ ಎಂಬ ಸ್ಪಷ್ಟ ಸೂಚನೆಯನ್ನು ಈ ನಿರ್ಧಾರ ನೀಡಿದೆ ಎಂದು ಜಾವ್ಡೇಕರ್ ಅಭಿಪ್ರಾಯಿಸಿದ್ದಾರೆ.
OHS ಕೋಡ್ ಸರ್ಕಾರವು ಅನುಮೋದಿಸಿದ ಎರಡನೇ ಪ್ರಮುಖ ಕಾರ್ಮಿಕ ಸುಧಾರಣೆಯಾಗಿದೆ. ಕಳೆದ ವಾರ ವೇತನ ನೀತಿಯನ್ನು ಸರ್ಕಾರ ಅನುಮೋದಿಸಿತ್ತು, ಇದು ಸಂಘಟಿತ ಮತ್ತು ಅಸಂಘಟಿತ ಎರಡೂ ಕ್ಷೇತ್ರಗಳಲ್ಲಿನ ನೌಕರರನ್ನು ಕನಿಷ್ಠ ವೇತನ ಮತ್ತು ವೇತನ ಪಾವತಿಸುವಿಕೆಗೆ ಒಳಪಡಿಸುತ್ತದೆ. ಪ್ರಸ್ತುತ ಇರುವ ಕನಿಷ್ಠ ವೇತನ ಕಾಯ್ದೆ ಮತ್ತು ವೇತನ ಪಾವತಿ ಕಾಯ್ದೆಯಂತೆ ಕೆಲವು ಉದ್ಯೋಗಿಗಳಿಗೆ ಮಾತ್ರ ಅನ್ವಯಿಸದೆ, ಎಲ್ಲಾ ಉದ್ಯೋಗಿಗಳಿಗೂ ಈ ಹೊಸ ವೇತನ ನೀತಿ ಅನ್ವಯಗೊಳ್ಳಲಿದೆ.
OHS ಕೋಡ್ ಸಂಘಟಿತ ಮತ್ತು ಅಸಂಘಟಿತ ವಲಯಗಳಲ್ಲಿನ 400 ಮಿಲಿಯನ್ ಕಾರ್ಮಿಕರನ್ನು ಒಳಗೊಳ್ಳುತ್ತದೆ ಮತ್ತು ಕಾರ್ಖಾನೆಗಳ ಕಾಯ್ದೆ, ಗಣಿ ಕಾಯ್ದೆ, ಡಾಕ್ ವರ್ಕರ್ಸ್ ಆಕ್ಟ್, ವರ್ಕಿಂಗ್ ಜರ್ನಲಿಸ್ಟ್ ಮತ್ತು ಇತರ ಪತ್ರಿಕೆ ನೌಕರರ ಕಾಯ್ದೆ ಮತ್ತು ಸಿನಿಮಾ ಕಾರ್ಮಿಕರು, ಸಿನಿಮಾ ಥಿಯೇಟರ್ ಕಾರ್ಮಿಕರು ಸೇರಿದಂತೆ ಸುಮಾರು 13 ಕಾರ್ಮಿಕ ಕಾನೂನುಗಳ ನಿಬಂಧನೆಗಳನ್ನು ಇದು ಒಳಗೊಂಡಿರುತ್ತದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.