ಅಪಿಯಾ: ದ್ವೀಪ ರಾಷ್ಟ್ರ ಸಮೋವಾದಲ್ಲಿ ನಡೆದ 2019 ಕಾಮನ್ವೆಲ್ತ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ನ ಮೊದಲ ದಿನವೇ ಭಾರತವು ಒಟ್ಟು 13 ಪದಕಗಳನ್ನು ಗೆದ್ದುಕೊಂಡಿದೆ. ಇದರಲ್ಲಿ ಎಂಟು ಚಿನ್ನ, ಮೂರು ಬೆಳ್ಳಿ ಮತ್ತು ಎರಡು ಕಂಚುಗಳು ಸೇರಿವೆ.
2019 ರ ಕಾಮನ್ವೆಲ್ತ್ ಸೀನಿಯರ್, ಜೂನಿಯರ್ ಮತ್ತು ಯೂತ್ ವೇಟ್ಲಿಫ್ಟಿಂಗ್ ಚಾಂಪಿಯನ್ಶಿಪ್ಗಳು ಜುಲೈ 5 ರಿಂದ ಜುಲೈ 15 ರವರೆಗೆ ಸಮೋವಾದ ರಾಜಧಾನಿ ಅಪಿಯಾದಲ್ಲಿ ನಡೆಯುತ್ತಿದೆ. ಆರಂಭಿಕ ಸುತ್ತಿನಲ್ಲಿ, ಮಾಜಿ ವಿಶ್ವ ಚಾಂಪಿಯನ್ ಮೀರಾಬಾಯಿ ಚಾನು ಸೀನಿಯರ್ ವುಮೆನ್ 49 ಕೆಜಿ ಸ್ಪರ್ಧೆಯಲ್ಲಿ ಭಾರತಕ್ಕೆ ಮೊದಲ ಬಂಗಾರವನ್ನು ದೊರಕಿಸಿಕೊಟ್ಟರು. ಇದು ಒಲಿಂಪಿಕ್ ಅರ್ಹತಾ ಪಂದ್ಯವಾಗಿತ್ತು. ಅವರು ಒಟ್ಟು 191 ಕೆಜಿ ಎತ್ತಿದ್ದಾರೆ. ಸೀನಿಯರ್ ವುಮೆನ್ 45 ಕೆಜಿ ಸ್ಪರ್ಧೆಯಲ್ಲಿ ಜಿಲ್ಲಿ ದಲಾಬೆಹ್ರಾ ಅವರು 154 ಕೆಜಿ ಎತ್ತುವ ಮೂಲಕ ಪ್ರಥಮ ಸ್ಥಾನ ಪಡೆದರು.
ಸೀನಿಯರ್ ವುಮೆನ್ 55 ಕೆಜಿಯಲ್ಲಿ ಸೊರೊಖೈಬಾಮ್ ಬಿಂದಾರಾಣಿ ದೇವಿ ಚಿನ್ನ ಗೆದ್ದರೆ, ಮತ್ಸಾ ಸಂತೋಶಿ ಬೆಳ್ಳಿ ಪಡೆದರು. ಸೀನಿಯರ್ ಮೆನ್ 55 ಕೆಜಿಯಲ್ಲಿ ರಿಷಿಕಾಂತ್ ಸಿಂಗ್ ಒಟ್ಟು 235 ಕೆಜಿ ಎತ್ತುವ ಮೂಲಕ ಚಿನ್ನವನ್ನು ಪಡೆದರು. ಬಿಂದ್ರಯಾನಿ 78 ಕೆಜಿ ಎತ್ತಿ ಬೆಳ್ಳಿ ಪದಕ ಗೆದ್ದರು. 105 ಕಿ.ಗ್ರಾಂ ಜೆರ್ಕ್ ನಲ್ಲಿ ಚಿನ್ನದ ಪದಕವನ್ನು ಅವರು ಪಡೆದುಕೊಂಡಿದ್ದಾರೆ. ಸಂತೋಶಿ ಕೂಡ 102 ಕೆಜಿ ಎತ್ತುವ ಮೂಲಕ ಚಿನ್ನ ಪಡೆದುಕೊಂಡಿದ್ದಾರೆ.
ಅಸ್ಸಾಂ ರಾಜ್ಯದವರಾದ ಬೊರ್ನಾಲಿ ಬೋರಾ ಮತ್ತು ರೇಖಾಮೋನಿ ಗೊಗೊಯ್ ಅವರು ಕ್ರಮವಾಗಿ ಚಿನ್ನ ಮತ್ತು ಬೆಳ್ಳಿಯನ್ನು ಪಡೆದರು. 45 ನೇ ಕೆಜಿ ಜೂನಿಯರ್ ವಿಭಾಗದಲ್ಲಿ ಬೋರಾ ಚಿನ್ನ ಗೆದ್ದರೆ, ಗೊಗೊಯ್ 40 ಕೆಜಿ ಯುವ ವಿಭಾಗದಲ್ಲಿ ಬೆಳ್ಳಿ ಪದಕ ಗೆದ್ದಿದ್ದಾರೆ. 20 ವರ್ಷದ ಭರವಸೆಯ ಒರಿಸ್ಸಾ ಮೂಲದ ವೇಟ್ಲಿಫ್ಟರ್ ಭಕ್ತರಾಮ್ ದೇಸ್ತಿ 49 ಕೆಜಿ ವಿಭಾಗದಲ್ಲಿ 185 ಕೆಜಿ ಎತ್ತುವ ಮೂಲಕ ಚಿನ್ನ ಗೆದ್ದರು.
ಮಾಜಿ ವಿಶ್ವ ಚಾಂಪಿಯನ್ ಮತ್ತು ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ ಚಿನ್ನದ ಪದಕ ವಿಜೇತ ಮೀರಾಬಾಯಿ ಚಾನು ಅವರು ಬೆನ್ನಿನ ತೀವ್ರವಾದ ಗಾಯದಿಂದಾಗಿ ಸುಮಾರು ನಾಲ್ಕು ತಿಂಗಳು ವಿರಾಮದಲ್ಲಿದ್ದರು. ಈಗ ಸಂಪೂರ್ಣವಾಗಿ ಚೇತರಿಸಿಕೊಂಡ ಅವರು 2020 ಟೋಕಿಯೊ ಒಲಿಂಪಿಕ್ಸ್ಗೆ ಗುರಿಯನ್ನು ಇಟ್ಟಿದ್ದಾರೆ.
ಈ ವರ್ಷ ಜೂನಿಯರ್ ವಿಭಾಗದಲ್ಲಿ ಭಾರತದ ಒಟ್ಟು ಒಂಬತ್ತು ಪುರುಷರು ಮತ್ತು ಎಂಟು ಮಹಿಳೆಯರು ಭಾಗವಹಿಸುತ್ತಿದ್ದರೆ, ಸೀನಿಯರ್ ವಿಭಾಗಕ್ಕೆ ಒಂಬತ್ತು ಪುರುಷರು ಮತ್ತು ಒಂಬತ್ತು ಮಹಿಳೆಯರು ಭಾಗವಹಿಸುತ್ತಿದ್ದಾರೆ. ಯುವ ವಿಭಾಗದಲ್ಲಿ ಭಾರತದ ಐದು ಪುರುಷರು ಮತ್ತು ಮೂವರು ಮಹಿಳೆಯರು ಇದ್ದಾರೆ.
2020 ರ ಒಲಿಂಪಿಕ್ಸ್ನ ಅರ್ಹತಾ ಪ್ರಕ್ರಿಯೆಯು 18 ತಿಂಗಳ ಅವಧಿಯಲ್ಲಿ ಆರು ಕ್ರೀಡಾಕೂಟಗಳಲ್ಲಿನ ವೇಟ್ಲಿಫ್ಟರ್ಗಳ ಪ್ರದರ್ಶನವನ್ನು ಆಧರಿಸಿದೆ. ಆರರ ಪೈಕಿ ಲಿಫ್ಟರ್ ಲಾಗ್ ಮಾಡಿದ ನಾಲ್ಕು ಅತ್ಯುತ್ತಮ ಫಲಿತಾಂಶಗಳನ್ನು ಪರಿಗಣನೆಗೆ ತೆಗೆದುಕೊಳ್ಳಲಾಗುತ್ತದೆ.
Congratulations @mirabai_chanu for winning gold medal in the Commonwealth #Weightlifting Championship in Women’s 49 kg with a total lift of 191 kg. pic.twitter.com/4lWHBDB8U0
— Kiren Rijiju (@KirenRijiju) July 9, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.