ನವದೆಹಲಿ: ಎರಡು ಹೊಸ ಸಿಎಚ್ -47 ಎಫ್ (ಐ) ಚಿನೂಕ್ ಹೆಲಿಕಾಪ್ಟರ್ಗಳು ಸೋಮವಾರ ಭಾರತೀಯ ವಾಯುಪಡೆಗೆ ಸೇರ್ಪಡೆಗೊಂಡಿವೆ. ಭಾರತವು 15 ಚಿನೂಕ್ ಮತ್ತು 22 ಎಎಚ್ -64 ಇ ಅಪಾಚೆ ಹೆಲಿಕಾಪ್ಟರ್ಗಳನ್ನು ಅಮೆರಿಕಾದ ರಕ್ಷಣಾ ಮತ್ತು ವಾಯುಯಾನ ದಿಗ್ಗಜ ಸಂಸ್ಥೆಯಾಗ ಬೋಯಿಂಗ್ನಿಂದ ಖರೀದಿಸುತ್ತಿದ್ದೆ. ಸೇನೆಗಾಗಿ ಒಟ್ಟು ಆರು ಎಎಚ್ -64 ಅಪಾಚೆಗಳನ್ನೂ ಕೂಡ ಭಾರತ ಖರೀದಿ ಮಾಡುತ್ತಿದೆ.
ಮೊದಲ ನಾಲ್ಕು ಸಿಎಚ್ -47 ಎಫ್ (ಐ) ಚಿನೂಕ್ ಹೆಲಿಕಾಫ್ಟರ್ಗಳು 2019ರ ಫೆಬ್ರವರಿ 10ರಂದು ಗುಜರಾತ್ನ ಮುಂಡ್ರಾ ವಿಮಾನ ನಿಲ್ದಾಣಕ್ಕೆ ಬಂದಿಳಿದಿವೆ. ಇದೀಗ ಮತ್ತೆರಡು ಚಿನೂಕ್ ಹೆಲಿಕಾಫ್ಟರ್ ವಾಯಸೇನೆಯನ್ನು ಸೇರ್ಪಡೆಗೊಂಡಿವೆ.
ಸುಧಾರಿತ ಮಲ್ಟಿ-ಮಿಷನ್ ಚಿನೂಕ್ಸ್ ವಾಯುಪಡೆಗೆ ಸೇರ್ಪಡೆಗೊಳ್ಳುವುದರಿಂದ ಅದರ ಕಾರ್ಯತಾಂತ್ರಿಕ ಏರ್ಲಿಫ್ಟ್ ಸಾಮರ್ಥ್ಯದಲ್ಲಿ ಭಾರಿ ವೃದ್ಧಿಯಾಗಲಿದೆ. ಚಿನೂಕ್ಸ್ ವಾಯುಸೇನೆಯ ಚಂಡೀಗಢ ವಾಯುನೆಲೆಯಲ್ಲಿ ನಿಯೋಜನೆಗೊಳ್ಳಲಿದೆ. ಸಿಯಾಚಿನ್ ಗ್ಲೇಸಿಯರ್ ಮತ್ತು ಲಡಾಖ್ನಲ್ಲಿನ ಚೀನಾದೊಂದಿಗಿನ ವಾಸ್ತವ ನಿಯಂತ್ರಣ ರೇಖೆಯನ್ನು ಇದು ನೋಡಿಕೊಳ್ಳಲಿದೆ.
ಚಿನೂಕ್ಸ್ಗಾಗಿ ಭಾರತವು ಯುಎಸ್ ಜೊತೆ ಒಪ್ಪಂದಕ್ಕೆ ಸಹಿ ಹಾಕಿದ ನಂತರ, ಬೋಯಿಂಗ್ ಸಂಸ್ಥೆಯಿಂದ ಚಿನೂಕ್ಸ್ಗಳ ಹಾರಾಟದ ಬಗ್ಗೆ ತರಬೇತಿಯನ್ನು ಪಡೆಯುವ ಸಲುವಾಗಿ ನಾಲ್ಕು ಐಎಎಫ್ ಹೆಲಿಕಾಪ್ಟರ್ ಪೈಲಟ್ಗಳನ್ನು ಮತ್ತು ಫ್ಲೈಟ್ ಎಂಜಿನಿಯರ್ಗಳನ್ನು ಅಮೆರಿಕದ ಡೆಲವೇರ್ಗೆ ಕಳುಹಿಸಲಾಗಿದೆ.
ಫಿಲಡೆಲ್ಫಿಯಾದ ಬೋಯಿಂಗ್ ಸೌಲಭ್ಯದಲ್ಲಿ ನಡೆದ ‘ಭಾರತ-ಚಿನೂಕ್ ವರ್ಗಾವಣೆ ಸಮಾರಂಭ’ದ ಸಂದರ್ಭದಲ್ಲಿ 2019ರ ಫೆಬ್ರವರಿ 2ರಂದು ಮೊದಲ ಚಿನೂಕ್ ಅನ್ನು ಅಧಿಕೃತವಾಗಿ ಭಾರತಕ್ಕೆ ಹಸ್ತಾಂತರಿಸಲಾಗಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.