ನವದೆಹಲಿ: ಗೃಹ ಸಚಿವ ಅಮಿತ್ ಶಾ ಅವರನ್ನು ಕೊಲೆ ಆರೋಪಿ ಎಂದು ಹೇಳಿದ್ದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ ಅವರಿಗೆ ಈಗ ಸಂಕಷ್ಟ ಎದುರಾಗಿದೆ. ಅಹ್ಮದಾಬಾದ್ ನ್ಯಾಯಾಲಯ ಅವರಿಗೆ ಸಮನ್ಸ್ ಜಾರಿಗೊಳಿಸಿದ್ದು, ವಿಚಾರಣೆಗೆ ಆಗಮಿಸುವಂತೆ ತಿಳಿಸಿದೆ.
ಕಳೆದ ಎಪ್ರಿಲ್ ತಿಂಗಳಲ್ಲಿ ಚುನಾವಣಾ ಸಮಾವೇಶದಲ್ಲಿ ಮಾತನಾಡಿದ್ದ ರಾಹುಲ್ ಗಾಂಧಿ ಅವರು ಸಭಿಕರ ಚಪ್ಪಾಳೆಯನ್ನು ಗಿಟ್ಟಿಸುವ ಸಲುವಾಗಿ ಅಮಿತ್ ಶಾ ಅವರನ್ನು ಕೊಲೆ ಆರೋಪಿ ಎಂದು ಕರೆದಿದ್ದರು. “ಕೊಲೆ ಆರೋಪಿಯಾಗಿರುವ ಶಾ ಎಂತಹ ಮಹಾನ್ ವ್ಯಕ್ತಿ’ ಎಂದಿದ್ದರು.
ಈ ಹೇಳಿಕೆಯನ್ನು ಖಂಡಿಸಿರುವ ಶಾ, ರಾಹುಲ್ ವಿರುದ್ಧ ನ್ಯಾಯಾಲಯದಲ್ಲಿ ಮಾನನಷ್ಟ ಮೊಕದ್ದಮೆಯನ್ನು ಹೂಡಿದ್ದರು. ರಾಹುಲ್ ಅವರ ಕಾನೂನಿನ ಜ್ಞಾನವನ್ನು ಪ್ರಶ್ನಿಸಿದ್ದ ಶಾ, ನನ್ನ ಮೇಲೆ ರಾಜಕೀಯ ಕುತಂತ್ರಕ್ಕಾಗಿ ಹೂಡಲಾಗಿದ್ದ ನಕಲಿ ಪ್ರಕರಣಗಳು ಖುಲಾಸೆಗೊಂಡಿವೆ ಎಂದಿದ್ದರು.
“ನನ್ನ ವಿರುದ್ಧ ಹೂಡಲಾದ ನಕಲಿ ಪ್ರಕರಣದಿಂದ ನಾನು ಅವಮಾನಿಸಲ್ಪಟ್ಟಿದ್ದೇನೆ ಮತ್ತು ಇದು ರಾಜಕೀಯ ಪ್ರೇರಿತ ಆರೋಪವಾಗಿತ್ತು. ಯಾವುದೇ ಪುರಾವೆಗಳಿಲ್ಲ ಎಂದು ನ್ಯಾಯಾಲಯವು ಪ್ರಕರಣಗಳನ್ನು ಈಗಾಗಲೇ ಖುಲಾಸೆ ಮಾಡಿದೆ. ರಾಹುಲ್ ಗಾಂಧಿಯವರ ಕಾನೂನು ಜ್ಞಾನದ ಬಗ್ಗೆ ನಾನು ಯಾವುದೇ ಪ್ರತಿಕ್ರಿಯೆಯನ್ನು ನೀಡಲು ಬಯಸುವುದಿಲ್ಲ “ಎಂದು ಅಮಿತ್ ಶಾ ಹೇಳಿದ್ದಾರೆ
ಪತ್ರಕರ್ತೆ ಗೌರಿ ಲಂಕೇಶ್ ಅವರ ಹತ್ಯೆಯನ್ನು ಬಿಜೆಪಿ-ಆರ್ಎಸ್ಎಸ್ ಜೊತೆಗೆ ಲಿಂಕ್ ಮಾಡಿದ ಆರೋಪದ ಮೇಲೆ ಆರ್ಎಸ್ಎಸ್ ಕಾರ್ಯಕರ್ತರೊಬ್ಬರು ಮಾನಹಾನಿ ಪ್ರಕರಣವನ್ನು ರಾಹುಲ್ ವಿರುದ್ಧ ದಾಖಲಿಸಿದ್ದರು, ಈ ಸಂಬಂಧ ರಾಹುಲ್ ಗಾಂಧಿ ಇತ್ತೀಚಿಗಷ್ಟೇ ಮುಂಬೈ ನ್ಯಾಯಾಲಯಕ್ಕೆ ಹಾಜರಾಗಿದ್ದರು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.