ಲಕ್ನೋ: ಸಕ್ರಮ ಗೋ ಸಾಗಾಣೆದಾರರಿಗೆ ಸರ್ಟಿಫಿಕೇಟ್ಗಳನ್ನು ಮತ್ತು ಸೂಕ್ತ ರಕ್ಷಣೆಗಳನ್ನು ಒದಗಿಸುವಂತೆ ಉತ್ತರಪ್ರದೇಶದ ಸಿಎಂ ಯೋಗಿ ಆದಿತ್ಯನಾಥ ಅವರು ತಮ್ಮ ರಾಜ್ಯದ ಗೋ ಸೇವಾ ಆಯೋಗಕ್ಕೆ ಸೂಚಿಸಿದ್ದಾರೆ. ಗೋ ಸಾಗಾಣೆದಾರರ ಸುರಕ್ಷತೆಗಾಗಿ ಮತ್ತು ಅಕ್ರಮ ಗೋ ಸಾಗಾಣೆಗೆ ಕಡಿವಾಣವನ್ನು ಹಾಕುವ ಸಲುವಾಗಿ ಈ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ.
ಗೋ ಸೇವಾ ಆಯೋಗದ ಸಭೆಯಲ್ಲಿ ಈ ಸೂಚನೆಯನ್ನು ನೀಡಲಾಗಿದ್ದು, ಗೋವುಗಳ ಸುರಕ್ಷತೆ ಮತ್ತು ಭದ್ರತೆಗೆ ಹೆಚ್ಚಿನ ಆದ್ಯತೆಯನ್ನು ನೀಡುವಂತೆ ತಿಳಿಸಲಾಗಿದೆ. ಗೋವುಗಳ ಕಲ್ಯಾಣಕ್ಕಾಗಿ ಗೋ ಶಾಲೆಗಳನ್ನು ಹಣಕಾಸು ವಿಷಯದಲ್ಲಿ ಸ್ವಾವಲಂಬಿಯನ್ನಾಗಿಸಬೇಕು ಎಂದು ಅವರು ಸೂಚಿಸಿದ್ದಾರೆ.
“ಗೊಬ್ಬರಗಳ ತಯಾರಿಕೆ ಮತ್ತು ಗೋಮೂತ್ರ ಸಂಗ್ರಹಣೆಯ ಕಾರ್ಯಗಳು ಗೋಶಾಲೆಗಳಲ್ಲಿ ನಡೆಯಬೇಕು. ಇವುಗಳನ್ನು ಮಾರಾಟ ಮಾಡಬಹುದು. ಗೋವಿನಿಂದಾಗುವ ಇತರ ವಸ್ತುಗಳನ್ನೂ ಮಾರಾಟ ಮಾಡಬಹುದಾಗಿದೆ” ಎಂದಿದ್ದಾರೆ.
ಪಶ್ಚಿಮ ಯುಪಿ, ಹರಿಯಾಣ ಮತ್ತು ರಾಜಸ್ಥಾನದ ಗ್ರಾಮೀಣ ಪ್ರದೇಶಗಳಲ್ಲಿ ಗೋವು ಕಳ್ಳತನ ಮತ್ತು ಕಳ್ಳಸಾಗಣೆ ಘಟನೆಗಳು ಭಾರೀ ಪ್ರಮಾಣದಲ್ಲಿ ವರದಿಯಾಗುತ್ತಿದ್ದು, ಜಾನುವಾರು ಕಳ್ಳಸಾಗಣೆ ಮಾಫಿಯಾದಿಂದಾಗಿ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಹೀಗಾಗಿ ಯೋಗಿ ಅವರು ಕಾನೂನಾತ್ಮಕ ಗೋ ಸಾಗಾಣೆದಾರರಿಗೆ ಸರ್ಟಿಫಿಕೇಟ್ ಮತ್ತು ರಕ್ಷಣೆ ಒದಗಿಸುತ್ತಿರುವುದು ಸ್ವಾಗತಾರ್ಹ ಬೆಳವಣಿಗೆಯಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.