ನವದೆಹಲಿ: 1.3 ಬಿಲಿಯನ್ ಭಾರತೀಯರ ಡಾಟಾ ಬೇಸ್ ಹೊಂದಿರುವ, ಪೌರತ್ವ ಕಾರ್ಡ್ ನೀಡಲು ಬಳಸಿಕೊಳ್ಳಲಾಗುವ ನ್ಯಾಷನಲ್ ಪಾಪ್ಯುಲೇಶನ್ ರಿಜಿಸ್ಟಾರ್(ರಾಷ್ಟ್ರೀಯ ಜನಸಂಖ್ಯಾ ನೋಂದಣಿ)ಯನ್ನು ಆಧಾರ್ ಕಾರ್ಡ್, ಪಾಸ್ ಪೋರ್ಟ್, ಡ್ರೈವಿಂಗ್ ಲೈಸೆನ್ಸ್, ಮೊಬೈಲ್ ಮತ್ತು ವೋಟರ್ ಕಾರ್ಡ್ ಮತ್ತು 2021ರ ಸೆನ್ಸಸ್ ನೊಂದಿಗೆ ಅಪ್ ಗ್ರೇಡ್ ಮಾಡಲು ನಿರ್ಧರಿಸಲಾಗಿದೆ.
ಈ ಪ್ರಕ್ರಿಯೆಗೆ ಸಿದ್ಧತೆಗಳನ್ನು ಆರಂಭಿಸುವಂತೆ ಕೇಂದ್ರ ಗೃಹ ಸಚಿವಾಲಯವು ಭಾರತದ ರಿಜಿಸ್ಟರ್ ಜನರಲ್ ಅವರಿಗೆ ಸೂಚನೆಯನ್ನು ನೀಡಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಎನ್ಪಿಆರ್ನ 20-ಪಾಯಿಂಟ್ಗಳ ಡಾಟಾಬೇಸ್ಗೆ ಹೆಚ್ಚುವರಿಯಾಗಿ ಪ್ರತಿ ವ್ಯಕ್ತಿಗೂ ಸುಮಾರು 15 ಡಾಟಾ ಪಾಯಿಂಟ್ಗಳನ್ನು ಸೇರಿಸಲಾಗುವುದು. ಆಧಾರ್, ಪಾಸ್ಪೋರ್ಟ್, ಡ್ರೈವಿಂಗ್ ಲೈಸೆನ್ಸ್ ವಿವರಗಳನ್ನು ಬಹಿರಂಗಪಡಿಸುವುದು ಸ್ವಯಂಪ್ರೇರಿತವಾಗಿದೆ ಮತ್ತು ಅದು ವ್ಯಕ್ತಿಯ ನಿರ್ಧಾರಕ್ಕೆ ಬಿಟ್ಟಿರುತ್ತದೆ. ಈ ಡಾಟಾವನ್ನು ನೀಡಲೇ ಬೇಕು ಎಂಬ ಕಡ್ಡಾಯವಿಲ್ಲ ಎಂದಿದ್ದಾರೆ.
ಕಳೆದ ವಾರ ಸಚಿವಾಲಯದ ಸಭೆಯಲ್ಲಿ ಈ ವಿಷಯವನ್ನು ಚರ್ಚಿಸಲಾಗಿದೆ. 150 ಕ್ಕೂ ಹೆಚ್ಚು ಜನಸಂಖ್ಯಾಶಾಸ್ತ್ರಜ್ಞರು, ಸಂಶೋಧಕರು, ವಿವಿಧ ಸಚಿವಾಲಯಗಳ ಮತ್ತು ರಾಜ್ಯ ಸರ್ಕಾರಗಳ ಡಾಟಾ ಬಳಕೆದಾರರು ಈ ಸಭೆಯಲ್ಲಿ ಭಾಗವಹಿಸಿದ್ದರು.
2021ರ ಜನಗಣತಿ ಮತ್ತು ಎನ್ಪಿಆರ್ ಡಾಟಾಬೇಸ್ ಅನ್ನು ನವೀಕರಿಸಲು ಕಾಗದದ ದಾಖಲೆಯ ಬದಲು ಮೊಬೈಲ್ ಫೋನ್ಗಳನ್ನು ಬಳಸಲಾಗುತ್ತಿದೆ. ಎರಡಕ್ಕೂ ಸಂಬಂಧಿಸಿದ ಡಾಟಾವನ್ನು ಹೊಸದಾಗಿ ಅಭಿವೃದ್ಧಿಪಡಿಸಿದ ಮೊಬೈಲ್ ಅಪ್ಲಿಕೇಶನ್ ಮೂಲಕ ಸಂಗ್ರಹಿಸಲಾಗುತ್ತದೆ, ಅದನ್ನು ಶಾಲಾ ಶಿಕ್ಷಕರ ಫೋನ್ಗಳಲ್ಲಿ ಇನ್ ಸ್ಟಾಲ್ ಮಾಡಲಾಗುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಭಾರತವು ಜನಗಣತಿ ಮತ್ತು ಎನ್ಪಿಆರ್ ಅಪ್ಡೇಟ್ಗಾಗಿ ಸುಮಾರು 3 ಮಿಲಿಯನ್ ಜನರನ್ನು ಬಳಸಿಕೊಳ್ಳಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.