ನವದೆಹಲಿ: ಎಪ್ರಿಲ್ 1 ಮೂರ್ಖರ ದಿನ ಎಂದು ಎಲ್ಲರಿಗೂ ತಿಳಿದ ವಿಷಯ. ಇದೇ ದಿನವನ್ನು ಈಗ ಎಎಪಿ ಪಕ್ಷದ ವಿರೋಧಿಗಳು ‘ಕೇಜ್ರಿವಾಲ್ ದಿವಸ್’ ಆಗಿ ಆಚರಿಸುತ್ತಿದ್ದಾರೆ. ಈ ಬಗೆಗೆ ದೆಹಲಿಯಾದ್ಯಂದ ಬ್ಯಾನರ್ಗಳನ್ನು ಹಾಕಿದ್ದಾರೆ.
ಭಗತ್ ಸಿಂಗ್ ಕ್ರಾಂತಿ ಸೇನ್ ಎಂಬ ಸಂಘಟನೆ ಈ ಕಾರ್ಯವನ್ನು ಮಾಡಿದ್ದು ಅಲ್ಲಲ್ಲಿ ಬ್ಯಾನರ್ಗಳನ್ನು ಹಾಕಿ’ಎಪ್ರಿಲ್ 1 ಕೇಜ್ರಿವಾಲ್ ದಿವಸದ ಶುಭಾಶಯಗಳು’ ಎಂದು ಕೇಜ್ರಿವಾಲ್ ದೆಹಲಿ ಜನತೆಗೆ ವಿಶ್ ಮಾಡುವಂತೆ ಬಿಂಬಿಸಿದ್ದಾರೆ.
ಇದರಲ್ಲಿ ಕೇಜ್ರಿವಾಲ್ ರಾಜ್ಘಾಟ್ನಲ್ಲಿ ಕೂತಿರುವ ಇಮೇಜ್ನ್ನು ಹಾಕಲಾಗಿದೆ. ಮಂಗಳವಾರ ರಾತ್ರಿ ಈ ಬ್ಯಾನರ್ಗಳನ್ನು ಅಂಟಿಸಲಾಗಿದೆ. ಆಂತರಿಕ ಬಿಕ್ಕಟ್ಟಿನಿಂದ ತೊಳಲಾಡುತ್ತಿರುವ ಎಎಪಿ ಮತ್ತು ಕೇಜ್ರಿವಾಲ್ ಅವರಿಗೆ ಟಾಂಗ್ ನೀಡುವುದಕ್ಕಾಗಿ ಇಂತಹ ಪೋಸ್ಟರ್ ರಚಿಸಲಾಗಿದೆ.
ಸಿಎಂ ಸ್ಥಾನದಲ್ಲಿರುವ ವ್ಯಕ್ತಿಯ ಬಗ್ಗೆ ಈ ರೀತಿಯ ಪೋಸ್ಟರ್ಗಳನ್ನು ಅಂಟಿಸಿ ಅಪಹಾಸ್ಯ ಮಾಡುವುದು ಸಮಂಜಸದ ಕಾರ್ಯವಲ್ಲ ಎಂಬುದನ್ನು ನಾಗರಿಕರಾದವರು ಅರ್ಥೈಸಿಕೊಳ್ಳಬೇಕಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.