ನವದೆಹಲಿ: ಕಳೆದ ಫೆಬ್ರವರಿ 26 ರಂದು ಭಾರತೀಯ ವಾಯುಸೇನೆಯು ಪಾಕಿಸ್ಥಾನದ ಬಾಲಕೋಟ್ ಮೇಲೆ ವೈಮಾನಿಕ ದಾಳಿಯನ್ನು ನಡೆಸಿದ ಹಿನ್ನಲೆಯಲ್ಲಿ, ಲಷ್ಕರ್ ಇ ಮೊಹಮ್ಮದ್ ಮತ್ತು ಲಷ್ಕರ್ ಇ ತೊಯ್ಬಾ ಉಗ್ರ ಸಂಘಟನೆಗಳು ಬಲವಂತವಾಗಿ ತಮ್ಮ ಶಿಬಿರಗಳನ್ನು ನೆರೆಯ ಅಫ್ಘಾನಿಸ್ಥಾನಕ್ಕೆ ಸ್ಥಳಾಂತರ ಮಾಡಿವೆ ಎಂದು ಮೂಲಗಳು ತಿಳಿಸಿವೆ.
ಎರಡು ಭಯೋತ್ಪಾದಕ ಸಂಘಟನೆಗಳು ತಮ್ಮ ಜನರಿಗೆ ಉಗ್ರ ತರಬೇತಿಯನ್ನು ನೀಡುವ ಸಲುವಾಗಿ ಅಫ್ಘಾನ್ ಭಯೋತ್ಪಾದಕ ಸಂಘಟನೆಗಳಾದ ಹಕ್ಕಾನಿ ನೆಟ್ವರ್ಕ್ ಮತ್ತು ಅಫಘಾನ್ ತಾಲಿಬಾನ್ ಜೊತೆ ಸೇರಿಕೊಂಡಿವೆ ಎಂದು ವರದಿಗಳು ತಿಳಿಸಿವೆ. ಪಾಕಿಸ್ಥಾನ ಉಗ್ರರಿಗೆ ತರಬೇತಿ ನೀಡಲು ಸುರಕ್ಷಿತ ನೆಲೆಯಲ್ಲ ಎಂಬುದನ್ನು ಮನಗಂಡು ಇವುಗಳು ತಮ್ಮ ಶಿಬಿರವನ್ನು ಅಫ್ಘಾನ್ಗೆ ಸ್ಥಳಾಂತರಿಸಿವೆ.
ಫೈನಾನ್ಶಿಯಲ್ ಆ್ಯಕ್ಷನ್ ಟಾಸ್ಕ್ ಫೋರ್ಸ್ (ಎಫ್ಎಟಿಎಫ್) ಕಪ್ಪುಪಟ್ಟಿಗೆ ಸೇರುವ ಆತಂಕವನ್ನು ಎದುರಿಸುತ್ತಿರುವ ಕಾರಣ ಪಾಕಿಸ್ಥಾನವು ತನ್ನ ಮುಖ ಉಳಿಸಿಕೊಳ್ಳಲು ತನ್ನ ನೆಲದಲ್ಲಿ ಬೀಡು ಬಿಟ್ಟಿರುವ ಜಮಾತ್-ಉದ್-ದವಾ ಮುಖ್ಯಸ್ಥ ಹಫೀಜ್ ಸಯೀದ್ ಮತ್ತು ಇತರ ಭಯೋತ್ಪಾದಕರ ಮೇಲೆ ಕ್ರಮವನ್ನು ಜರುಗಿಸಿವೆ ಎಂದ ವರದಿ ಹೇಳಿವೆ.
ಭಯೋತ್ಪಾದಕ ಶಿಬಿರಗಳನ್ನು ಸ್ಥಳಾಂತರ ಮಾಡಿರುವುದು ಕೂಡ ಕಪ್ಪು ಪಟ್ಟಿಗೆ ಸೇರದಂತೆ ಮಾಡುವ ಪಾಕಿಸ್ಥಾನದ ಇನ್ನೊಂದು ತಂತ್ರ ಆಗಿರಲೂಬಹುದು. ಈ ಬೆಳವಣಿಗೆಯಿಂದ ಕಾಬೂಲ್ ಮತ್ತು ಕಂದಹಾರ್ನಲ್ಲಿನ ಭಾರತೀಯ ರಾಯಭಾರ ಕಛೇರಿಗಳನ್ನು ಹೈಅಲರ್ಟ್ನಲ್ಲಿ ಇಡಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.