ನವದೆಹಲಿ: ಭಾರತದ ಅಭಿವೃದ್ಧಿಗೆ ಪ್ರೇರಣೆ ಮತ್ತು ಕೊಡುಗೆ ನೀಡಿದ ಅನೇಕ ಶ್ರೇಷ್ಠರ ಪರಂಪರೆಯನ್ನು ಭಾರತ ಹೊಂದಿದೆ. ಈ ಮಹಾನ್ ಶ್ರೇಷ್ಠರ ಕೊಡುಗೆಗಳನ್ನು ಗುರುತಿಸುವ ಸಲುವಾಗಿ ಪದ್ಮ ಪ್ರಶಸ್ತಿಗಳನ್ನು ನೀಡಲಾಗುತ್ತದೆ. ಪದ್ಮ ಅವಾರ್ಡ್ಸ್ -2020 ಗಾಗಿ ಆನ್ಲೈನ್ ನಾಮನಿರ್ದೇಶನಗಳು / ಶಿಫಾರಸುಗಳು ಮೇ 1, 2019 ರಂದು ಪ್ರಾರಂಭವಾಗಿದ್ದು, 2019 ಸೆಪ್ಟೆಂಬರ್ 15ರವರೆಗೆ ಮುಂದುವರೆಯಲಿದೆ.
ಪದ್ಮ ಪೋರ್ಟಲ್ https://padmaawards.gov.in ನಲ್ಲಿ ಮಾತ್ರ ಪದ್ಮ ಪ್ರಶಸ್ತಿಗಳ ನಾಮನಿರ್ದೇಶನಗಳು / ಶಿಫಾರಸುಗಳನ್ನು ಆನ್ಲೈನ್ನಲ್ಲಿ ಸ್ವೀಕರಿಸಲಾಗುತ್ತದೆ.
ಪದ್ಮ ಪ್ರಶಸ್ತಿಗಳು ಸಾಧಕರ ‘ವಿಭಿನ್ನ ಕಾರ್ಯ’ ವನ್ನು ಗುರುತಿಸುತ್ತವೆ. ಎಲ್ಲಾ ಕ್ಷೇತ್ರಗಳಲ್ಲಿ ವಿಶಿಷ್ಟ ಮತ್ತು ಅಸಾಧಾರಣ ಸಾಧನೆಗಳನ್ನು, ಸೇವೆಗಳನ್ನು ಮಾಡಿದವರಿಗೆ ಇದನ್ನು ಪ್ರದಾನಿಸಲಾಗುತ್ತದೆ. ಜನಾಂಗ, ಉದ್ಯೋಗ, ಸ್ಥಾನ ಅಥವಾ ಲಿಂಗ ಭೇದವಿಲ್ಲದ ಎಲ್ಲಾ ಸಾಧಕ ವ್ಯಕ್ತಿಗಳು ಈ ಪ್ರಶಸ್ತಿಗಳಿಗೆ ಅರ್ಹರಾಗಿದ್ದಾರೆ.
ಆದರೆ ವೈದ್ಯರು ಮತ್ತು ವಿಜ್ಞಾನಿಗಳನ್ನು ಹೊರತುಪಡಿಸಿ ಪಿಎಸ್ಯು (ಪಬ್ಲಿಕ್ ಸೆಕ್ಟರ್ ಅಂಡರ್ ಟೇಕಿಂಗ್ಸ್)ಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಸರ್ಕಾರಿ ನೌಕರರು ಪದ್ಮ ಪ್ರಶಸ್ತಿಗಳಿಗೆ ಅರ್ಹರಲ್ಲ.
ಪ್ರತಿಭಾವಂತ ವ್ಯಕ್ತಿಗಳನ್ನು ಗುರುತಿಸಲು ಸರ್ವ ಪ್ರಯತ್ನಗಳನ್ನು ಮಾಡುವಂತೆ ಎಲ್ಲಾ ಸರ್ಕಾರಿ ಇಲಾಖೆಗಳಿಗೆ ಕೋರಲಾಗಿದೆ. ಪ್ರತಿಭಾವಂತ ವ್ಯಕ್ತಿಗಳು, ಸಮಾಜದ ದುರ್ಬಲ ವರ್ಗದವರು, ಎಸ್ಸಿ ಮತ್ತು ಎಸ್ಟಿಗಳು, ದಿವ್ಯಾಂಗ ವ್ಯಕ್ತಿಗಳು ಮತ್ತು ಸಮಾಜಕ್ಕೆ ನಿಸ್ವಾರ್ಥ ಸೇವೆ ಮಾಡಿದ ಅರ್ಹ ವ್ಯಕ್ತಿಗಳನ್ನು ಗುರುತಿಸಲು ಪ್ರಯತ್ನಿಸಬೇಕು ಎಂದು ವಿನಂತಿಸಲಾಗಿದೆ.
ದೇಶದ ಯಾವುದೇ ನಾಗರಿಕರು ಕೂಡ ಯಾವುದೇ ಸಾಧಕರ ಹೆಸರನ್ನು ನಾಮನಿರ್ದೇಶನ ಮಾಡಬಹುದು. ತನ್ನ ಹೆಸರನ್ನು ಕೂಡ ನಾಮನಿರ್ದೇಶನ ಮಾಡಿಕೊಳ್ಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.