ಶ್ರೀನಗರ: ಜಮ್ಮು ಕಾಶ್ಮೀರದ ಪ್ರತ್ಯೇಕತಾವಾದಿಗಳಲ್ಲಿ ಅಚಾನಕ್ ಪರಿವರ್ತನೆ ಕಂಡು ಬರುತ್ತಿದೆ. ಮಿರ್ವಾಝ್ ಉಮರ್ ಫಾರೂಖ್ ನೇತೃತ್ವದ ಹುರಿಯತ್ ಕಾನ್ಫರೆನ್ಸ್ ಎಂಬ ಪ್ರತ್ಯೇಕತಾವಾದಿ ಸಂಘಟನೆಯು ಕಾಶ್ಮೀರಿ ಪಂಡಿತರನ್ನು ವಾಪಾಸ್ ಕರೆ ತರುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನವನ್ನು ನಡೆಸಲು ಯೋಜನೆ ರೂಪಿಸಿದೆ.
1989ರ ಹಿಂಸಾಚಾರದಿಂದಾಗಿ ಕಾಶ್ಮೀರವನ್ನು ಬಿಟ್ಟು ಪಲಾಯನ ಮಾಡಿರುವ ಕಾಶ್ಮೀರಿ ಪಂಡಿತರನ್ನು ಮತ್ತೆ ಕರೆತರುವ ಸಲುವಾಗಿ ಸಮಿತಿಯೊಂದನ್ನು ರಚಿಸಲು ಹುರಿಯತ್ ಕಾನ್ಫರೆನ್ಸ್ ನಿರ್ಧರಿಸಿದೆ. ವಾಪಾಸ್ ಕರೆ ತರುವ ಪ್ರಕ್ರಿಯೆಯನ್ನು ಸಫಲಗೊಳಿಸುವ ಸಲುವಾಗಿ ಕಣಿವೆಯಲ್ಲಿ ಈಗಲೂ ವಾಸಿಸುತ್ತಿರುವ ಕಾಶ್ಮೀರಿ ಪಂಡಿತರು, ಕಾಶ್ಮೀರಿ ನಾಗರಿಕರು ಮತ್ತು ಹುರಿಯತ್ ಕಾನ್ಫರೆನ್ಸ್ ಸದಸ್ಯರನ್ನು ಈ ಸಮಿತಿ ಒಳಗೊಳ್ಳಲಿದೆ.
“ಕಾಶ್ಮೀರಿ ಪಂಡಿತರ ವಾಪಾಸ್ಸಾತಿ ಮಾನವೀಯ ಸಮಸ್ಯೆಯಾಗಿದೆ ಮತ್ತು ಎಲ್ಲರನ್ನೂ ಒಳಗೊಳ್ಳುವ ಪರಿಕಲ್ಪನೆಯಾಗಿದೆ. ವಾಸ್ತವವಾಗಿ, ವಿಶ್ವಾಸವನ್ನು ಬೆಳೆಸಲು ನಾವು ಕಾಶ್ಮೀರಿ ಪಂಡಿತರು ಮತ್ತು ನಾಗರಿಕ ಸಮಾಜದೊಂದಿಗೆ ಕೆಲಸ ಮಾಡಲು ನಿರ್ಧರಿಸಿದ್ದೇವೆ. ಇದಕ್ಕಾಗಿ ಅಂತರ್ ಸಮುದಾಯದ ಸಂವಹನ ಬಹಳ ಮುಖ್ಯ” ಎಂದು ಫಾರೂಕ್ ಹೇಳಿದ್ದಾರೆ.
ಈ ಸಮಿತಿಯಲ್ಲಿ ನಾವು ಭಾಗಿಯಾಗಲಿದ್ದೇವೆ ಎಂದು ಪಂಡಿತ ನಾಯಕ ಸತೀಶ್ ಮಹಲ್ದಾರ್ ಸ್ಪಷ್ಟಪಡಿಸಿದ್ದಾರೆ. “ಹೌದು, ನಾವು ಸಮಿತಿಯ ಭಾಗವಾಗಲಿದ್ದೇವೆ. ಮಿರ್ವಾಝ್ ಕಾಶ್ಮೀರದ ನಾಯಕನಾಗಿದ್ದಾರೆ ಮತ್ತು ನಾವು ಕಾಶ್ಮೀರದ ದೇಹ ಮತ್ತು ಆತ್ಮವಾಗಿದ್ದೇವೆ. ಒಟ್ಟಾಗಿ, ನಾವು ಶಾಂತಿಗಾಗಿ, ಕಾಶ್ಮೀರಿ ಪಂಡಿತರ ಪುನರ್ವಸತಿಗಾಗಿ ಹೋರಾಡಲಿದ್ದೇವೆ. 1990ರಲ್ಲಿ ನಡೆದ ಘಟನೆಗಳಿಗೆ ಮಿರ್ವಾಝ್ ವಿಷಾದ ವ್ಯಕ್ತಪಡಿಸಿದ್ದಾರೆ ಮತ್ತು ಕಾಶ್ಮೀರಿ ಪಂಡಿತರು ವಾಪಾಸ್ಸಾಗಬೇಕು ಎಂಬುದು ಎಲ್ಲರ ಬಯಕೆ ಎಂದು ಹೇಳಿದ್ದಾರೆ” ಎಂದು ಸತೀಶ್ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.