ಶ್ರೀನಗರ: ಹಸಿರು ಪರಿಸರವನ್ನು ಸೃಷ್ಟಿಸಲು ಮುಂದಾಗಿರುವ ಸರ್ಕಾರ, ಪರಿಸರ ಸ್ನೇಹಿ ಅಭಿಯಾನವನ್ನು ಹಮ್ಮಿಕೊಳ್ಳುವತ್ತ ಹೆಜ್ಜೆ ಹಾಕಿದೆ. ಈ ಮೂಲಕ ಜನರಿಗೆ ಗಿಡಗಳನ್ನು ನೆಡಲು ಉತ್ತೇಜನವನ್ನು ನೀಡುತ್ತಿದೆ. ಹಸಿರು ಸಂರಕ್ಷಣೆಯ ಗುರಿಯನ್ನು ಸಾಧಿಸುವ ಪ್ರಯತ್ನದಲ್ಲಿರುವ ಜಮ್ಮು ಮತ್ತು ಕಾಶ್ಮೀರ ರಾಜ್ಯವು ಜೂನ್ 2020 ರ ವೇಳೆಗೆ 50 ಲಕ್ಷ ಮರಗಳನ್ನು ನೆಡಲು ನಿರ್ಧರಿಸಿದೆ.
ಅಲ್ಲಿನ ರಾಜ್ಯಪಾಲ ಸತ್ಯಪಾಲ್ ಮಲಿಕ್ ಅವರ ಅಧ್ಯಕ್ಷತೆಯಲ್ಲಿ ಸಭೆ ಸೇರಿದ್ದ ರಾಜ್ಯ ಆಡಳಿತ ಮಂಡಳಿ (ಎಸ್ಎಸಿ)ಯು, ‘ಹಸಿರು ಜಮ್ಮು ಕಾಶ್ಮೀರ’ ಅಭಿಯಾನಕ್ಕೆ ಜುಲೈ 8 ರಿಂದ ಪ್ರಾರಂಭವನ್ನು ನೀಡಲು ನಿರ್ಧರಿಸಿದೆ. ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಇಲಾಖೆಯು, ನಾಗರಿಕ ಸಮಾಜ, ಶೈಕ್ಷಣಿಕ ಮತ್ತು ಇತರ ಸಂಸ್ಥೆಗಳ ಭಾಗವಹಿಸುವಿಕೆಯೊಂದಿಗೆ ಈ ಬೃಹತ್ ಅರಣ್ಯೀಕರಣ ಆಂದೋಲವನ್ನು ಆಯೋಜನೆಗೊಳಿಸಲಿದೆ. ಪರಿಸರ ವಿಜ್ಞಾನ ವಿಭಾಗವು ಅವನತಿ ಹೊಂದಿದ ಅರಣ್ಯ ಭೂಮಿಗಳಲ್ಲಿ ಅತಿಕ್ರಮಣದಿಂದ ಹಿಂಪಡೆಯಲಾದ ಭೂಮಿಗಳಲ್ಲಿ, ರಸ್ತೆಬದಿಗಳಲ್ಲಿ ಗಿಡ ನೆಡಲಿದೆ.
ಮೊದಲ ಹಂತದಲ್ಲಿ ಗಿಡ ನೆಡುವ ಅಭಿಯಾನವನ್ನು ಜಮ್ಮು ಪ್ರದೇಶದಲ್ಲಿ ಮಾತ್ರ ಹಮ್ಮಿಕೊಳ್ಳಲಾಗುತ್ತದೆ. 2300 ಹೆಕ್ಟೇರ್ಗಿಂತ ಹೆಚ್ಚಿನ ಭೂಮಿಯಲ್ಲಿ ಸುಮಾರು 9 ಲಕ್ಷ ಮರಗಳನ್ನು ಈ ಮಳೆಗಾದಲ್ಲಿ ನೆಡಲು ಯೋಜಿಸಲಾಗಿದೆ. ಜಮ್ಮು, ಸಾಂಬಾ, ಕತುವಾ, ನೌಶೇರಾ, ಬಿಲ್ಲಾವರ್, ರಜೌರಿ, ರೇಸಿ, ಉಧಮಪುರ್, ರಾಮನಗರ್ ಮತ್ತು ರಂಬಾನ್ ಮುಂತಾದ ಕಡೆಗಳಲ್ಲಿ ಗಿಡ ನೆಡಲು ಸಿದ್ಧತೆ ಮಾಡುವಂತೆ ಅಧಿಕಾರಿಗಳಿಗೆ ಅರಣ್ಯ ಇಲಾಖೆ ಸೂಚನೆಯನ್ನು ನೀಡಿದೆ.
2020ರ ಒಳಗೆ 50 ಲಕ್ಷ ಮರಗಳನ್ನು ಬೆಳೆಸುವ ಗುರಿಯನ್ನು ಈ ಅಭಿಯಾನ ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.