ನವದೆಹಲಿ: ನರೇಂದ್ರ ಮೋದಿಯವರ ಎರಡನೆಯ ಅವಧಿಯ ಮೊದಲ ಬಜೆಟ್ ಅನ್ನು ಇಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡನೆಗೊಳಿಸಲಿದ್ದು, ದೇಶದ ಜನರಲ್ಲಿ ಭಾರೀ ನಿರೀಕ್ಷೆಗಳನ್ನು ಹುಟ್ಟು ಹಾಕಿದೆ. 5 ವರ್ಷಗಳಲ್ಲೇ ಕುಸಿತವನ್ನು ಕಂಡಿರುವ ಆರ್ಥಿಕತೆಯನ್ನು ಮೇಲೆತ್ತುವ ಸಲುವಾಗಿ ಅವರು ಖರ್ಚು ಹೆಚ್ಚಳ ಮಾಡುವ ಮತ್ತು ಉದ್ಯಮದ ಮೇಲೆ ತೆರಿಗೆ ಕಡಿತ ವಿಧಿಸುವ ನಿರೀಕ್ಷೆ ಮಾಡಲಾಗಿದೆ.
ನಿರ್ಮಲಾ ಸೀತಾರಾಮನ್ ಅವರು ದೇಶದ ಮೊದಲ ಪೂರ್ಣಾವಧಿಯ ಮಹಿಳಾ ಹಣಕಾಸು ಸಚಿವೆಯಾಗಿದ್ದು, ಎರಡನೇ ಅವಧಿಯ ಮೋದಿ ಸರ್ಕಾರದ ಪ್ರಮುಖ ಆದ್ಯತೆಗಳ ಬಗ್ಗೆ ಇಂದು ಅವರು ವಿಸ್ತೃತ ವಿವರಣೆಯನ್ನು ನೀಡಲಿದ್ದಾರೆ, ಸುಧಾರಣೆಗಳನ್ನು ಪುನರಾರಂಭಗೊಳಿಸುವ ಮತ್ತು ಸರ್ಕಾರದ ಎದುರಿರುವ ಸವಾಲುಗಳನ್ನು ಮೆಟ್ಟಿ ನಿಲ್ಲುವ ನಿಟ್ಟಿನಲ್ಲಿ ಬಜೆಟ್ ಅನ್ನು ಅವರು ಉಪಯೋಗಿಸಿಕೊಳ್ಳಲಿದ್ದಾರೆ.
ರೈಲ್ವೇ, ರಸ್ತೆ ನಿರ್ಮಾಣ ಸೇರಿದಂತೆ ಮೂಲಸೌಕರ್ಯಗಳ ಮೇಲೆ ಸರ್ಕಾರ ಖರ್ಚನ್ನು ಹೆಚ್ಚಿಸುವ ಮೂಲಕ ಆರ್ಥಿಕತೆಯನ್ನು ಬಲಪಡಿಸಲು ಅವರು ಮುಂದಾಗುತ್ತಾರೆ ಎಂದು ನಂಬಲಾಗಿದೆ. ದೇಶದ ಪ್ರಗತಿ ಮತ್ತು ಉದ್ಯೋಗ ನಿರ್ಮಾಣಕ್ಕೂ ಅವರು ಹೆಚ್ಚಿನ ಆದ್ಯತೆ ನೀಡುವ ನಿರೀಕ್ಷೆ ಇದೆ. ಆದಾಯ ತೆರಿಗೆ ವಿನಾಯಿತಿ ಮೂಲಕ ಮಧ್ಯಮವರ್ಗದ ಜನರಿಗೆ ನಿರಾಳತೆ ತಂದು ಕೊಡುವ ಕ್ರಮಗಳನ್ನು ಅವರು ಘೋಷಣೆ ಮಾಡಬಹುದು, ಕೃಷಿ ಮತ್ತು ಆರೋಗ್ಯ ಕ್ಷೇತ್ರಗಳಲ್ಲಿ, ಸಾಮಾಜಿಕ ಕ್ಷೇತ್ರಗಳಲ್ಲಿ ಸರ್ಕಾರದ ವ್ಯಯವನ್ನು ಹೆಚ್ಚಳಗೊಳಿಸಬಹುದು ಎಂಬ ನಿರೀಕ್ಷೆ ಇದೆ.
ಅರ್ಥಶಾಸ್ತ್ರಜ್ಞರ ಪ್ರಕಾರ, ವ್ಯಯವನ್ನು ತಗ್ಗಿಸದೆ ಬೆಳವಣಿಗೆಯನ್ನು ಉತ್ತೇಜಿಸುವ ಕ್ರಮಗಳನ್ನು ಪ್ರಕಟಿಸಬೇಕಾಗಿದೆ. ನಿನ್ನೆ ಮಂಡಿಸಲಾದ ತನ್ನ ಆರ್ಥಿಕ ಸಮೀಕ್ಷೆಯಲ್ಲಿ, ಆರ್ಥಿಕತೆಯು ಈ ವರ್ಷ ಶೇಕಡಾ 7 ಕ್ಕೆ ಏರಿಕೆಯಾಗಲಿದೆ ಎಂದು ಸರ್ಕಾರವು ನಿರೀಕ್ಷಿಸಿದೆ. ಆದರೆ 2025 ರ ವೇಳೆಗೆ ತನ್ನ ಆರ್ಥಿಕತೆಯನ್ನು ದ್ವಿಗುಣಗೊಳಿಸಲು ಮತ್ತು 5 ಟ್ರಿಲಿಯನ್ ಆರ್ಥಿಕತೆಯಾಗಿ ಹೊರಹೊಮ್ಮುವ ಗುರಿಯನ್ನು ತಲುಪಲು ಸರ್ಕಾರ ಯೋಜನೆಯ ರೂಪುರೇಶೆ ಸಿದ್ಧಪಡಿಸುವ ಅಗತ್ಯವಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.