ತಿರುಪತಿ: ಆಂಧ್ರಪ್ರದೇಶದ ತಿರುಪತಿಯ ರೆನಿಗುಂಟಾ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ 1 MWpನ ಸೌರ ವಿದ್ಯುತ್ ಸ್ಥಾವರವನ್ನು ಜುಲೈ 2 ರಂದು ವಿಮಾನ ನಿಲ್ದಾಣ ಪ್ರಾಧಿಕಾರ (ಎಎಐ) ಉದ್ಘಾಟನೆಗೊಳಿಸಿದೆ. ಈ ಮೂಲಕ ಈ ದೇಗುಲ ನಗರಿಯು ಸೌರಶಕ್ತಿ ಚಾಲಿತ ಭಾರತೀಯ ವಿಮಾನ ನಿಲ್ದಾಣಗಳ ಕ್ಲಬ್ಗೆ ಸೇರ್ಪಡೆಗೊಂಡಿದೆ. ಕೊಚ್ಚಿನ್, ವಿಜಯವಾಡ ಮತ್ತು ತಿರುವನಂತಪುರ ವಿಮಾನನಿಲ್ದಾಣ ಈಗಾಗಲೇ ಈ ಕ್ಲಬ್ನಲ್ಲಿ ಇದೆ.
ದಕ್ಷಿಣ ಭಾರತದಾದ್ಯಂತ ಇರುವ ತನ್ನ ಎಲ್ಲಾ ವಿಮಾನ ನಿಲ್ದಾಣಗಳನ್ನು ಮೂರು ವರ್ಷಗಳೊಳಗೆ ಸಂಪೂರ್ಣ ಸೌರಶಕ್ತಿಯ ಮೂಲಕ ಕಾರ್ಯನಿರ್ವಹಿಸುವಂತೆ ಮಾಡುವ ಗುರಿಯನ್ನು ವಿಮಾನ ನಿಲ್ದಾಣ ಪ್ರಾಧಿಕಾರ ಹೊಂದಿದೆ. ಇದರ ಭಾಗವಾಗಿ ತಿರುಪತಿ ವಿಮಾನನಿಲ್ದಾಣವನ್ನು ಸೌರಶಕ್ತಿಗೆ ಒಳಪಡಿಸಿದೆ. ಶೀಘ್ರದಲ್ಲೇ ಹುಬ್ಬಳ್ಳಿ ಮತ್ತು ಕಡಪಾ ವಿಮಾನ ನಿಲ್ದಾಣಗಳಲ್ಲಿ 8 ಮೆಗಾವ್ಯಾಟ್ ಸೌರಶಕ್ತಿ ಘಟಕಗಳನ್ನು ಸ್ಥಾಪಿಸಲು ಸಜ್ಜಾಗಿದೆ.
ವಿಮಾನನಿಲ್ದಾಣದ ರನ್ ವೇ ಸೇರಿದಂತೆ ಸುಮಾರು ನಾಲ್ಕು ಎಕರೆ ವಿಸ್ತೀರ್ಣದ ನೆಲದಲ್ಲಿ ಸೌರ ಸ್ಥಾವರವನ್ನು ಸ್ಥಾಪಿಸಲಾಗಿದ್ದು, ಇದರಿಂದ ಅತ್ಯಂತ ಪ್ರಖರವಾದ ತಾಪಮಾನವನ್ನು ಹೊಂದಿರುವ ತಿರುಪತಿಗೆ ಹೆಚ್ಚಿನ ಅನುಕೂಲವಾಗಲಿದೆ.
ಹೊಸದಾಗಿ ನಿರ್ಮಿಸಲಾದ ಸ್ಥಾವರದಿಂದ ವಿಮಾನ ನಿಲ್ದಾಣದ ಶೇ.75ರಷ್ಟು ವಿದ್ಯುತ್ ಅಗತ್ಯ ಪೂರೈಯಾಗುತ್ತದೆ ಎಂಬ ನಿರೀಕ್ಷೆಯಿದೆ. ಪ್ರಸ್ತುತ ಈ ವಿಮಾನನಿಲ್ದಾಣ ರಾತ್ರಿ ವೇಳೆಯಲ್ಲಿ ಕಾರ್ಯಾಚರಿಸುವುದಿಲ್ಲ.
ಪ್ರಾಧಿಕಾರ ಈ ವಿಮಾನ ನಿಲ್ದಾಣವನ್ನು ವಿಸ್ತರಿಸುವ ಬಗ್ಗೆ ಚಿಂತನೆ ನಡೆಸಿದ್ದು, ಶೀಘ್ರದಲ್ಲೇ ಅದನ್ನು 24×7 ಅವಧಿ ಕಾರ್ಯಾಚರಿಸುವಂತೆ ಮಾಡುವ ಗುರಿಯನ್ನು ಹೊಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.