ಒಸಕ: ಜಿ20 ಶೃಂಗಸಭೆಯಲ್ಲಿ ಪಾಲ್ಗೊಳ್ಳುವ ಸಲುವಾಗಿ ಜಪಾನಿನ ಒಸಕ ನಗರಕ್ಕೆ ತೆರಳಿರುವ ಪ್ರಧಾನಿ ನರೇಂದ್ರ ಮೋದಿಯವರು ಗುರುವಾರ ಜಪಾನ್ ಪ್ರಧಾನಿ ಶೀಂಜೋ ಅಬೆ ಅವರೊಂದಿಗೆ ಮಾತುಕತೆಯನ್ನು ನಡೆಸಿದ್ದಾರೆ. ಈ ವೇಳೆ ಭಾರತ-ಜಪಾನ್ ಸಂಬಂಧಕ್ಕೆ ಸಂಬಂಧಿಸಿದ ಹಲವಾರು ವಿಷಯಗಳ ಬಗ್ಗೆ ಉಭಯ ನಾಯಕರು ಚರ್ಚೆ ನಡೆಸಿದ್ದಾರೆ.
ಈ ಬಗ್ಗೆ ಟ್ವಿಟ್ ಮಾಡಿರುವ ಪ್ರಧಾನಿ ಕಾರ್ಯಾಲಯ, “ಸೌಹಾರ್ದತೆ ಮತ್ತು ಉಜ್ವಲ ಭವಿಷ್ಯದ ಭರವಸೆಯಿಂದ ಸ್ನೇಹ ನಿರೂಪಿಸಲ್ಪಟ್ಟಿದೆ. ಪ್ರಧಾನ ಮಂತ್ರಿಗಳಾದ ನರೇಂದ್ರಮೋದಿ ಮತ್ತು ಅಬೆಶಿಂಜೊ ಅವರು ಒಸಾಕಾದಲ್ಲಿ ಮಾತುಕತೆ ನಡೆಸಿದ್ದಾರೆ. ಜಪಾನ್ನ ರೀವಾ ಯುಗ ಪ್ರಾರಂಭದ ನಂತರ ನಾಯಕರ ನಡುವೆ ನಡೆಯುತ್ತಿರುವ ಮೊದಲ ಸಭೆ ಇದಾಗಿದೆ. ಭಾರತ-ಜಪಾನ್ ಸಂಬಂಧಗಳ ಹಲವು ಅಂಶಗಳ ಬಗ್ಗೆ ಚರ್ಚಿಸಲಾಯಿತು” ಎಂದಿದೆ.
ಮುಂಬೈ-ಅಹಮದಾಬಾದ್ ಹೈಸ್ಪೀಡ್ ರೈಲು ಮತ್ತು ವಾರಣಾಸಿಯಲ್ಲಿ ಕನ್ವೆನ್ಷನ್ ಸೆಂಟರ್ ಸ್ಥಾಪನೆಯ ಕಾಮಗಾರಿಗಳ ಬಗ್ಗೆಯೂ ಉಭಯ ನಾಯಕರ ನಡುವೆ ವಿಸ್ತೃತವಾದ ಚರ್ಚೆ ನಡೆದಿದೆ ಎನ್ನಲಾಗಿದೆ.
ಜಾಗತಿಕ ವ್ಯಾಪಾರ ಮತ್ತು ಹವಮಾನ ಬದಲಾವಣೆಯ ಬಗ್ಗೆಯೂ ನಾಯಕರು ಮಾತುಕತೆ ನಡೆಸಿದ್ದಾರೆ.
ಜಪಾನ್, ಭಾರತ ಮತ್ತು ಯುಎಸ್ ನಡುವಿನ ತ್ರಿಪಕ್ಷೀಯ ಸಭೆಗಾಗಿ ಎರಡೂನಾಯಕರು ನಾಳೆ ಮತ್ತೆ ಭೇಟಿಯಾಗಲಿದ್ದಾರೆ. ಇಂಡೋ-ಪೆಸಿಫಿಕ್ ಕಾರ್ಯಕ್ರಮ ಬಗ್ಗೆ ಸಂಕ್ಷಿಪ್ತ ಚರ್ಚೆ ಈ ವೇಳೆ ನಡೆಯಲಿದೆ ಎಂದು ವಿದೇಶಾಂಗ ಕಾರ್ಯದರ್ಶಿ ಹೇಳಿದ್ದಾರೆ.
A friendship characterised by warmth and the promise of a bright future.
Prime Ministers @narendramodi and @AbeShinzo hold talks in Osaka, the first such meeting between these leaders since the start of Japan’s Reiwa era.
Many aspects of India-Japan relations were discussed. pic.twitter.com/59CiuBHZWA
— PMO India (@PMOIndia) June 27, 2019
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.