ನವದೆಹಲಿ: ಶೀಘ್ರದಲ್ಲೇ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ರೈಲು ‘ವಂದೇ ಭಾರತ್ ಎಕ್ಸ್ಪ್ರೆಸ್’ ದೆಹಲಿ ಮತ್ತು ಜಮ್ಮು ಕಾಶ್ಮೀರದ ಕಾತ್ರಾ ನಡುವೆ ಸಂಚರಿಸಲಿದೆ. ಇದರಿಂದ ವೈಷ್ಣೋದೇವಿಗೆ ತೆರಳುವ ಭಕ್ತಾದಿಗಳಿಗೆ ಇದರಿಂದ ಸಾಕಷ್ಟು ಪ್ರಯೋಜನವಾಗಲಿದೆ.
ದೆಹಲಿ ಮತ್ತು ಕಾತ್ರಾ ನಡುವೆ ‘ವಂದೇ ಭಾರತ್ ಎಕ್ಸ್ಪ್ರೆಸ್’ ಅನ್ನು ಓಡಿಸುವ ನಿರ್ಧಾರವನ್ನು ಇತ್ತೀಚಿಗಷ್ಟೇ ತೆಗೆದುಕೊಳ್ಳಲಾಗಿದೆ ಮತ್ತು ಶೀಘ್ರದಲ್ಲೇ ಟ್ರಯಲ್ ರನ್ ನಡೆಯುವ ನಿರೀಕ್ಷೆ ಇದೆ. ಒಂದು ಬಾರಿ ಇದರ ಪ್ರಯಾಣ ಅಧಿಕೃತವಾಗಿ ಆರಂಭವಾದರೆ ದೆಹಲಿಯಿಂದ ಕಾತ್ರಾಗೆ ಕೇವಲ 8 ಗಂಟೆಗಳಲ್ಲಿ ತಲುಪಬಹುದು. ಪ್ರಸ್ತುತ ರೈಲಿನ ಮೂಲಕ ದೆಹಲಿಯಿಂದ ಕಾತ್ರಾಗೆ ಪ್ರಯಾಣಿಸಲು 10 ರಿಂದ 12 ಗಂಟೆಗಳು ಬೇಕಾಗುತ್ತವೆ.
ಟ್ರಯಲ್ ರನ್ ಮುಗಿದು ಗಂಟೆಗೆ 130 ಕಿಮೀ ಓಡುವ ವಂದೇ ಭಾರತ್ ಎಕ್ಸ್ಪ್ರೆಸ್ ಪ್ರಯಾಣವನ್ನು ಆರಂಭಿಸಿದರೆ, ಅಂಬಾಲ, ಲುಧಿಯಾನ ಮತ್ತು ಜಮ್ಮು ತವಿಗಳಲ್ಲಿ ನಿಲುಗಡೆಯಾಗಿ ಕೊನೆಗೆ ಕಾತ್ರಾ ರೈಲು ನಿಲ್ದಾಣವನ್ನು ತಲುಪಲಿದೆ. ಪ್ರತಿ ನಿಲ್ದಾಣದಲ್ಲೂ ಕೇವಲ 2 ನಿಮಿಷಗಳ ಕಾಲ ಇದು ನಿಲುಗಡೆಯಾಗಲಿದೆ.
ಪ್ರಸ್ತುತ ವಂದೇ ಎಕ್ಸ್ಪ್ರೆಸ್ ರೈಲು ದೆಹಲಿ ಮತ್ತು ವಾರಣಾಸಿ ನಡುವೆ ಸಂಚರಿಸುತ್ತಿದ್ದು, ಜನರಿಂದ ಭಾರೀ ಪ್ರತಿಕ್ರಿಯೆಯನ್ನು ಪಡೆದುಕೊಂಡಿದೆ. ಒಂದೇ ವರ್ಷದಲ್ಲಿ ಈ ರೈಲಿನ ಉತ್ಪಾದನಾ ವೆಚ್ಚ ಮರುಗಳಿಕೆಯಾಗಲಿದೆ ಎಂದು ಅಧಿಕಾರಿಗಳು ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.