ಶ್ರೀನಗರ: ಜಮ್ಮು ಕಾಶ್ಮೀರದ ಪ್ರಸಿದ್ಧ ಯಾತ್ರಾಕ್ಷೇತ್ರ ಅಮರನಾಥಕ್ಕೆ ತೆರಳಲು ಯಾತ್ರಾರ್ಥಿಗಳು ಸಜ್ಜಾಗಿದ್ದಾರೆ. ಈ ಹಿನ್ನಲೆಯಲ್ಲಿ ಯಾತ್ರಾರ್ಥಿಗಳಿಗಾಗಿ ಅಮರನಾಥ ದೇಗುಲ ಮಂಡಳಿಯು ಹೊಸ ಮೊಬೈಲ್ ಆ್ಯಪ್ ಅನ್ನು ಬಿಡುಗಡೆಗೊಳಿಸಿದೆ.
ಎಲೆಕ್ಟ್ರಾನಿಕ್ಸ್ & ಇನ್ಫಾರ್ಮೇಶನ್ ಟೆಕ್ನಾಲಜಿ ಸಚಿವಾಲಯದಡಿಯಲ್ಲಿನ ನ್ಯಾಷನಲ್ ಇ-ಗವರ್ನೆನ್ಸ್ ಡಿವಿಶನ್ (NeGD) ಈ ಆ್ಯಪ್ ಅನ್ನು ವಿನ್ಯಾಸಪಡಿಸಿದೆ. ಈ ಆ್ಯಪ್ ಯಾತ್ರಿಕರಿಗೆ ಯಾತ್ರೆಯನ್ನು ಪ್ರಾರಂಭಿಸುವ ಬಗ್ಗೆ, ಯಾತ್ರೆಯುದ್ದಕ್ಕೂ ಒದಗಿಸಲಾಗುವ ಸೌಲಭ್ಯಗಳ ಬಗ್ಗೆ, ಹವಮಾನ ಮಾಹಿತಿ, ಯಾತ್ರೆಯಲ್ಲಿ ಏನು ಮಾಡಬೇಕು ಮತ್ತು ಮಾಡಬಾರದು ಎಂಬ ಬಗ್ಗೆ, ಆರೋಗ್ಯ ಮಾಹಿತಿ, ಇತರ ಮಾಹಿತಿ ಮತ್ತು ಸಲಹೆಗಳ ಬಗ್ಗೆ, ಸಾಮಾನ್ಯ ವಿಚಾರಣೆಗಳ ಬಗ್ಗೆ, ಆನ್ ಲೈನ್ ಹೆಲಿ ಟಿಕೆಟ್ ಬುಕ್ಕಿಂಗ್ ಬಗ್ಗೆ ಸಂಪೂರ್ಣ ವರದಿಯನ್ನು ನೀಡುತ್ತದೆ.
ಇದನ್ನು ಹೊರತುಪಡಿಸಿ ಆ್ಯಪ್ SOS ಕಾಲ್ ಅಲರ್ಟ್ ಸಿಸ್ಟಮ್, ಯಾತ್ರಿಕರ ಲೈವ್ ಟ್ರ್ಯಾಂಕಿಂಗ್, ಪುಶ್ ನೋಟಿಫಿಕೇಶನ್ಗಳನ್ನು ಇದು ತೋರಿಸುತ್ತದೆ. ಯಾತ್ರೆ ಅನುಮತಿ ಅರ್ಜಿ ಸಂಖ್ಯೆಯ ಮೂಲಕ ಯಾತ್ರಿಕರು ಈ ಆ್ಯಪ್ ಗೆ ಲಾಗಿನ್ ಆಗಬಹುದು. ಡಿವೈಸ್ ಲೊಕೇಶನ್ ಅನ್ನು ಅಸೆಸ್ ಮಾಡುವ ಮೂಲಕ ಈ ಆ್ಯಪ್ ಗೆ ಲೈವ್ ಟ್ರ್ಯಾಂಕಿಂಗ್ ಅವಕಾಶ ಒದಗಿಸಬಹುದು. ಯಾತ್ರಿಕರ ಪತ್ತೆ ಕಾರ್ಯ ಮಾಡಲು ಈ ಆ್ಯಪ್ ದೇಗುಲ ಮಂಡಳಿಗೆ ಸಹಾಯ ಮಾಡಲಿದೆ.
ಗೂಗಲ್ ಪ್ಲೇ ಸ್ಟೋರಿನ ಮೂಲಕ ‘ಶ್ರೀ ಅಮರನಾಥಜೀ ಯಾತ್ರ’ ಎಂಬ ಹೆಸರಿನ ಈ ಆ್ಯಪ್ ಅನ್ನು ಯಾತ್ರಿಕರು ಈ ಲಿಂಕ್ http://play.google.com/store/apps/details?id=com.ncog.shriamarnath&hl=IT. ಡೌನ್ ಲೋಡ್ ಮಾಡಿಕೊಳ್ಳಬಹುದು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.