ಹೌರಾ: ಕೋಲ್ಕತ್ತಾದ ಹೌರಾದ ರಸ್ತೆಯಲ್ಲಿ ಮಂಗಳವಾರ ರಾತ್ರಿಯಿಂದ ಇಂದು ಬೆಳಗ್ಗಿನವರೆಗೆ ಹನುಮಾನ್ ಚಾಲಿಸವನ್ನು ಪಠಿಸುತ್ತಾ ಬಿಜೆಪಿ ಯುವ ಘಟಕದ ಸದಸ್ಯರು ಧರಣಿ ಕುಳಿತಿದ್ದಾರೆ. ಶುಕ್ರವಾರದ ಮುಸ್ಲಿಮರ ನಮಾಝಿಗಾಗಿ ರಸ್ತೆಯನ್ನು ಬ್ಲಾಕ್ ಮಾಡುವುದನ್ನು ವಿರೋಧಿಸಿ ಈ ಪ್ರತಿಭಟನೆಯನ್ನು ನಡೆಸಲಾಗಿದೆ.
“ಮಮತಾ ಬ್ಯಾನರ್ಜಿಯವರ ಆಡಳಿತದಲ್ಲಿ ನಾವು ಗ್ರ್ಯಾಂಡ್ ಟ್ರಂಕ್ ರಸ್ತೆಗಳನ್ನು ಕಂಡಿದ್ದೇವೆ ಮತ್ತು ಕೆಲವು ರಸ್ತೆಗಳು ಶುಕ್ರವಾರದ ನಮಾಝಿಗಾಗಿ ಬಂದ್ ಆಗುತ್ತದೆ. ಇದರಿಂದಾಗಿ ಅಂಬ್ಯುಲೆನ್ಸ್ ಸಿಕ್ಕಿ ಹಾಕಿಕೊಂಡು ರೋಗಿಗಳು ಸಾಯುತ್ತಾರೆ, ಮಕ್ಕಳು ಶಾಲೆಗೆ ಸೇರಲು ಪರದಾಡುತ್ತಾರೆ, ಇತರರು ಕಛೇರಿಗೆ ತೆರಳಲು ಪರದಾಡುತ್ತಾರೆ” ಎಂದು ಬಿಜೆಪಿ ಯುವ ಘಟಕದ ಅಧ್ಯಕ್ಷ ಒಪಿ ಸಿಂಗ್ ತಿಳಿಸಿದ್ದಾರೆ.
ಈ ರೀತಿಯ ವ್ಯವಸ್ಥೆ ಮುಂದುವರೆಯುವ ತನಕ ನಾವು ಪ್ರತಿ ಮಂಗಳವಾರ ಹನುಮಾನ್ ದೇಗುಲದ ಸಮೀಪದ ರಸ್ತೆಗಳಲ್ಲಿ ಕುಳಿತು ಹನುಮಾನ್ ಚಾಲಿಸವನ್ನು ಪಠಿಸುತ್ತೇವೆ ಎಂದಿದ್ದಾರೆ.
ರಸ್ತೆಗಳಲ್ಲಿ ಮುಸ್ಲಿಮರು ನಮಾಝ್ ಮಾಡುವುದರಿಂದ ಸಾಮಾನ್ಯ ನಾಗರಿಕರಿಗೆ ತೀವ್ರ ಸ್ವರೂಪದ ತೊಂದರೆಗಳಾಗುತ್ತವೆ ಎಂಬುದು ತಿಳಿದಿದ್ದರೂ ಕೂಡ ಸರ್ಕಾರಗಳು ಇದಕ್ಕೆ ಅನುವು ಮಾಡಿಕೊಡುತ್ತಿರುವುದಕ್ಕೆ ನಾಗರಿಕರಿಂದಲೂ ಭಾರೀ ವಿರೋಧಗಳು ವ್ಯಕ್ತವಾಗುತ್ತಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.