ನವದೆಹಲಿ: 2019 ರ ಮೇ ತಿಂಗಳಲ್ಲಿ ದೇಶದ 1,606 ರೈಲು ನಿಲ್ದಾಣಗಳಲ್ಲಿ ಸುಮಾರು 2.35 ಕೋಟಿ ಜನರು ರೈಲ್ವೈರ್ ಹೈಸ್ಪೀಡ್ ವೈಫೈ ಸೇವೆಯನ್ನು ಬಳಸಿದ್ದಾರೆ ಎಂದು ರೈಲ್ಟೆಲ್ ತಿಳಿಸಿದೆ. ಉಚಿತ ಹೈಸ್ಪೀಡ್ ವೈರ್ಲೆಸ್ ಇಂಟರ್ನೆಟ್ ಸೇವೆಯನ್ನು ಉಳಿದ 4,791 ನಿಲ್ದಾಣಗಳಿಗೆ ಈ ವರ್ಷದೊಳಗೆ ವಿಸ್ತರಿಸುವುದಾಗಿ ಸಂಸ್ಥೆ ತಿಳಿಸಿದೆ.
ಟೈಯರ್ 2 ನಗರಗಳಲ್ಲಿನ ರೈಲು ನಿಲ್ದಾಣಗಳಿಗೆ ಹೋಲಿಸಿದರೆ, ಕೊಲ್ಕತ್ತಾ, ದೆಹಲಿ ಮತ್ತು ಮುಂಬೈನಂತಹ ಟೈಯರ್ 1 ಮೆಟ್ರೊಪೊಲಿಸಸ್ ನಗರಗಳಲ್ಲಿನ ರೈಲು ನಿಲ್ದಾಣಗಳಲ್ಲಿ ಹೆಚ್ಚಿನ ಸಂಖ್ಯೆಯ ಜನರು ಯೂಸರ್ಸ್ ಲಾಗಿನ್ ಮತ್ತು ಡಾಟಾ ಬಳಕೆಗೆ ನೋಂದಾಯಿಸಿಕೊಂಡಿದ್ದಾರೆ ಎಂದು ಭಾರತೀಯ ರೈಲ್ವೆಯ ಡಿಜಿಟಲ್ ಅಂಗ ರೈಲ್ಟೆಲ್ ಬಹಿರಂಗಪಡಿಸಿದೆ. ಹೌರಾ ನಿಲ್ದಾಣವೊಂದೇ ಮೇ ತಿಂಗಳಲ್ಲಿ 4.9 ಲಕ್ಷ ಯೂಸರ್ಸ್ ಲಾಗಿನ್ಗಳನ್ನು ಕಂಡಿದೆ.
ಬಳಕೆದಾರರು ಸರಾಸರಿ 30 ನಿಮಿಷಗಳ ಕಾಲ 343 ಎಂಬಿ ಡಾಟಾವನ್ನು ಬಳಕೆ ಮಾಡಿದ್ದಾರೆ, ಇದು ದೇಶದ 3 ಜಿ ಸಂಪರ್ಕಕ್ಕಿಂತ ಹೆಚ್ಚಿನದಾಗಿದೆ, 3ಜಿಯಲ್ಲಿ ದಿನಕ್ಕೆ ಪ್ರತಿ ಬಳಕೆದಾರರಿಗೆ ಸುಮಾರು 30 ಎಂಬಿ ಡಾಟಾವನ್ನು ಬಳಕೆ ಮಾಡುತ್ತಾರೆ ಎಂದು ರೈಲ್ ಟೆಲ್ ಹೇಳಿದೆ.
“ರೈಲ್ ಟೆಲ್ ಉಚಿತ ಮತ್ತು ವೇಗದ ವೈಫೈ ಒದಗಿಸುವ ಮೂಲಕ ಡಿಜಿಟಲ್ ವಿಭಜನೆಯನ್ನು ನಿವಾರಿಸಲು ಪ್ರಯತ್ನಿಸಿದೆ, ಇದು ಇಂಟರ್ನೆಟ್ ಅನುಭವದ ಅಂತರ ನೀಗಿಸುವ ಸೇತುವೆಯಾಗಿ ಕಾರ್ಯನಿರ್ವಹಣೆ ಮಾಡುತ್ತಿದೆ, ಇಲ್ಲಿ ಲಕ್ಷಾಂತರ ಬಳಕೆದಾರರು ಮೊದಲ ಬಾರಿಗೆ ವೇಗದ ಇಂಟರ್ನೆಟ್ ಅನುಭವ ಪಡೆಯುತ್ತಿದ್ದಾರೆ” ಎಂದು ರೈಲ್ ಟೆಲ್ ಸಿಎಂಟಿ ಪುನೀತ್ ಚಾವ್ಲಾ ಹೇಳಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.