ನವದೆಹಲಿ: ಯುಕೆ ಮತ್ತು ಭಾರತದ ಸಂಬಂಧ ವೃದ್ಧಿಯಲ್ಲಿ ಪ್ರಮುಖ ಪಾತ್ರವನ್ನು ವಹಿಸುತ್ತಿರುವ 100 ಪ್ರಭಾವಿ ಮಹಿಳೆಯರ ಪಟ್ಟಿಯಲ್ಲಿ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರೂ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬ್ರಿಟನ್ನಿನ ಹಿರಿಯ ಸಂಪುಟ ಸಚಿವೆ ಪೆನ್ನು ಮೊರ್ಡಂಟ್ ಅವರು ಕೂಡ ಈ ಪಟ್ಟಿಯಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ.
“ಇಂಗ್ಲೆಂಡ್-ಭಾರತ ಸಂಬಂಧ: 100 ಪ್ರಭಾವಿ ಮಹಿಳೆಯರು” ಪಟ್ಟಿಯಲ್ಲಿ ನಿರ್ಮಲಾ ಅವರು ಸ್ಥಾನವನ್ನು ಪಡೆದುಕೊಂಡಿದ್ದಾರೆ.
ಸೋಮವಾರ ‘ಇಂಡಿಯಾ ಡೇ’ ಅನ್ನು ಬ್ರಿಟಿಷ್ ಸಂಸತ್ತು ಆಚರಿಸಿದ್ದು, ಈ ವೇಳೆ ಯುಕೆ ಗೃಹ ಸಚಿವ ಸಾಝಿದ್ ಜಾವಿದ್ ಈ ಪಟ್ಟಿಯನ್ನು ಪ್ರಕಟಗೊಳಿಸಿದರು.
ಅಲ್ಲಿನ ಕಾರ್ಪೋರೇಟ್ ವ್ಯವಹಾರಗಳ ಸಚಿವರು ಈ ವೇಳೆ ನಿರ್ಮಲಾ ಸೀತಾರಾಮನ್ ಅವರ ಸಾಧನೆಯನ್ನು ಕೊಂಡಾಡಿದ್ದು, ಭಾರತದ ಮಾಜಿ ರಕ್ಷಣಾ ಸಚಿವೆಯಾಗಿ ಮತ್ತು ಈಗಿನ ವಿತ್ತ ಸಚಿವೆಯಾಗಿ ಸೀತಾರಾಮನ್ ಅವರು ದ್ವಿಪಕ್ಷೀಯ ಸಂಬಂಧ ವೃದ್ಧಿಯನ್ನು ಮಹತ್ವದ ಪಾತ್ರವನ್ನು ವಹಿಸುತ್ತಿರುವ ಪ್ರಭಾವಿ ಮಹಿಳೆ ಎಂದಿದ್ದಾರೆ.
“ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ನಲ್ಲಿ ಅಧ್ಯಯನ ಮಾಡಿ ಮತ್ತು ತನ್ನ ವೃತ್ತಿ ಜೀವನದ ಆರಂಭದಲ್ಲಿ ಯುಕೆಯಲ್ಲಿ ಕೆಲಸ ಮಾಡಿರುವ ಸೀತಾರಾಮನ್ ಅವರು, ತನ್ನ ಇತರ ಸಹೋದ್ಯೋಗಿಗಳಿಗಿಂತ ಹೆಚ್ಚು ಯುಕೆಗೆ ಪರಿಚಿತರಾಗಿದ್ದಾರೆ” ಎಂದು ಯುಕೆ ಮೂಲದ ಮೀಡಿಯಾ ಹೌಸ್ ಬಿಡುಗಡೆ ಮಾಡಿದ ಪವರ್ ಲಿಸ್ಟ್ನಲ್ಲಿ ಹೇಳಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.