ಇಂದು ಜುಲೈ 1 ರಂದು ಕರ್ನಾಟಕದಲ್ಲಿ ಪತ್ರಿಕಾ ದಿನವನ್ನಾಗಿ ಆಚರಿಸಲು ಒಂದು ವಿಷೇಶ ಕಾರಣವಿದೆ. ಕನ್ನಡ ಮೊದಲ ಪ್ರತಿಕೆ ಮಂಗಳೂರು ಸಮಾಚಾರ ಪ್ರಾರಂಭವಾದದ್ದು ಜುಲೈ1 1843 ರಂದು.
ರೆ. ಹರ್ಮನ್ ಮೊಗ್ಲಿಂಗ್ ಅವರನ್ನು ಕರ್ನಾಟಕದ ಕನ್ನಡ ಪ್ರತಿಕಾರಂಗದ ಜನಕ ಎಂದರೂ ತಪ್ಪಾಗದು. ಅವರೇ ಮಂಗಳೂರು ಸಮಾಚಾರವನ್ನು ಪ್ರಾರಂಭಿಸಿ ಅದರ ಸಂಪಾದಕರಾಗಿ ಕಾರ್ಯನಿರ್ವಹಿಸಿದವರು. ಇಂದಿನಿಂದ 172 ವರ್ಷಗಳ ಮಂಚೆ ಮಂಗೂಳೂರು ಸಮಾಚಾರ ಜನ್ಮತಾಳಿತು.
ಬಾಷನ್ ಮಿಷನಿನ ಪಾದ್ರಿ ಮತ್ತು ಪ್ರಚಾರಕರಾಗಿ ಬಂದ ರೆ. ಹರ್ಮನ್ ಮೊಗ್ಲಿಂಗ್ ಅವರು ಕನ್ನಡ ಭಾಷೆಯ ಸೆಳೆತಕ್ಕೊಳಗಾಗಿದ್ದರು. ಆದುದರಿಂದ ಅವರು ಕನ್ನಡದ ಮೊದಲ ಪಾಕ್ಷಿಕ ನಾಲ್ಕು ಪುಟದ ಪತ್ರಿಕೆಯನ್ನು ಹುಟ್ಟುಹಾಕಿದ್ದು.
ತನ್ನ ಪತ್ರಿಕೆಯಲ್ಲಿ ಮಂಗಳೂರಿನ ಪ್ರಾದೇಶಿಕ ಸುದ್ದಿಗಳು, ಭಾರತದ ಜನಸಂಖ್ಯೆ ಮತ್ತು ಈಷ್ಟ್ ಇಂಡಿಯಾ ಕಾನೂನು ಮತ್ತು ನಿಯುಮಾವಳಿಗಳು ಹಾಗೂ ಪುರಂದರದಾಸರ ಸಾಹಿತ್ಯ, ನೀತಿ ಕಥೆಗಳು ಪ್ರಕಟವಾಗುತ್ತಿದ್ದವು. ಅಲ್ಲದೇ ಆ ಸಂದರ್ಭದಲ್ಲಿ ಬ್ಲಾಕ್ ಮೂಲಕ ಪ್ರಕಟಿಸಲಾಗುತ್ತಿತು. ಕೆಲ ದಿನಗಳಲ್ಲಿ ಈ ಪತ್ರಿಕೆಗೆ ಭಾರಿ ಬೇಡಿಕೆಯೂ ಬಂತು.
1844ರಲ್ಲಿ ಮಂಗಳೂರು ಸಮಾಚಾರವು ತನ್ನ ಭಾರಿ ಬೇಡಿಕೆಯಿಂದಾಗಿ ಕರ್ನಾಟಕದಾದ್ಯಂತ ತಲುಪುವ ಸಲುವಾಗಿ ಬಳ್ಳಾರಿಗೆ ಸ್ಥಳಾಂತರ ಗೊಂಡು ಕರ್ನಾಟಕ ಸಮಾಚಾರ ಎಂದು ನಾಮಕರಣಗೊಂಡಿತು. ಮೇ 1 ,1844ರಂದು ಕರ್ನಾಟಕ ಸಮಾಚಾರದ ಮೊದಲಪ್ರತಿ ಬಿಡುಗಡೆಗೊಂಡಿತು, ಇದು ಮಂಗಳೂರು ಸಮಾಚಾರದ 15ನೇ ಸಂಚಿಕೆಯೂ ಹೌದು. ಕರ್ನಾಟಕ ಸಮಾಚಾರವು ಲೆಟರ್ ಪ್ರೆಸ್ ಮೂಲಕ ಮುದ್ರಣಗೊಂಡ ಮೊದಲ ಕನ್ನಡ ಪತ್ರಿಕೆ ಎಂಬ ಖ್ಯಾತಿಗೂ ಪಾತ್ರವಾಗಿದೆ. ಆದರೆ ಕರ್ನಾಟಕ ಸಾಮಾಚಾರದ ಕೇವಲ 3 ಸಂಚಿಕೆಗಳನ್ನು ಮಾತ್ರ ಹೊರತರಲು ಸಾಧ್ಯವಾಯಿತು. ಕಾರಣಾಂತರಗಳಿಂದ ಬಾಷನ್ ಮಿಷನ್ ಅವರ ಸಾಹಿತ್ಯ ಸೇವೆಗ್ಗಿಂತ ಅವರಿಗೆ ನೀಡಿದ ಕೆಲಸಕ್ಕೆ ಹೆಚ್ಚಿನ ಮಹತ್ವ ನೀಡಲು ಆದೇಶ ನೀಡಿತ್ತು ಆದುದರಿಂದ ಈ ಪತ್ರಿಕೆ ನಿಲ್ಲಲು ಕಾರಣವೆಂಬ ಮಾತುಗಳಿವೆ.
ಆದರೆ ಪತ್ರಿಕಾ ದಿನವು ಈಗ ನಿರ್ಲಕ್ಷಕ್ಕೆ ಒಳಗಾಗಿದೆ. ರಾಜ್ಯ ಸರಕಾರವಾಗಲಿ, ಕರ್ನಾಟಕ ಮಾಧ್ಯಮ ಅಕಾಡಮಿಯಾಗಲಿ ಅಥವಾ ಸಾಹಿತ್ಯ ಅಕಾಡಮಿಯಾಗಲಿ ಈ ದಿನವನ್ನು ಆಚರಿಸಲು ಮುಂದಾಗುತ್ತಿಲ್ಲ ಎಂಬುದೇ ಬೇಸರದ ಸಂಗತಿ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.