ಶ್ರೀನಗರ: ಭಾರತೀಯ ಸೇನೆ ಗಡಿಗಳನ್ನು ಕಾಯುವುದು ಮಾತ್ರವಲ್ಲ, ಯಾವುದೇ ತರನಾದ ಆಪತ್ತು ಸಂಭವಿಸಿದಾಗಲೂ ಜನರ ರಕ್ಷಣೆಗೆ ಧಾವಿಸುತ್ತದೆ. ಜಮ್ಮು ಕಾಶ್ಮೀರದಲ್ಲಿ ಸೋಮವಾರ ಮನೆಯೊಂದರಲ್ಲಿ ಸಂಭವಿಸಿದ ಅಗ್ನಿ ಅವಘಢವನ್ನು ನಿವಾರಿಸಲು ಸೈನಿಕರು ಅಗ್ನಿ ಶಾಮಕ ದಳದವರೊಂದಿಗೆ ಕೈಜೋಡಿಸಿದ್ದಾರೆ.
ಬಾರಮುಲ್ಲಾದ ದದ್ಬಗ್ ಪ್ರದೇಶದ ನಿವಾಸಕ್ಕೆ ಹತ್ತಿದ್ದ ಬೆಂಕಿಯನ್ನು ಭಾರತೀಯ ಸೇನೆಯ ಹಲವಾರು ಸೈನಿಕರು, ಅಗ್ನಿಶಾಮಕ ದಳದವರು ನಂದಿಸಿದ್ದಾರೆ. ಅಲ್ಲದೇ, ಬೆಂಕಿ ಸುತ್ತಮುತ್ತಲಿನ ಮನೆಗಳಿಗೆ ಹತ್ತದಂತೆ ನೊಡಿಕೊಂಡಿದ್ದಾರೆ. ಸೈನಿಕರ ಒಂದು ತಂಡ ತಮ್ಮ ಸುರಕ್ಷತೆಯನ್ನು ಲೆಕ್ಕಿಸದೇ ಮನೆಯೊಳಗೆ ನುಗ್ಗಿ ಅಲ್ಲಿರುವ ಸಾಮಾಗ್ರಿಗಳನ್ನೆಲ್ಲಾ ಹೊರ ಹಾಕಿದೆ. ಉಳಿದ ತಂಡಗಳು ಬೆಂಕಿ ನಂದಿಸುವ ಕಾರ್ಯದಲ್ಲಿ ಮಗ್ನವಾಗಿದ್ದವು.
ಸೈನಿಕರು ಪರಿಹಾರ ಕಾರ್ಯಗಳಲ್ಲೂ ಕೈಜೋಡಿಸಿದರು ಮತ್ತು ಬೆಂಕಿಯಿಂದ ಹಾನಿಗೊಳಗಾದವರಿಗೆ ಅಗತ್ಯ ವಸ್ತುಗಳನ್ನು ಒದಗಿಸಿದರು. ಸೈನಿಕರು ಮತ್ತು ಅಗ್ನಿಶಾಮಕ ದಳದವರ ಕ್ಷಿಪ್ರ ಕಾರ್ಯಾಚರಣೆಯಿಂದಾಗಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ. ಇವರ ಕಾರ್ಯಕ್ಕೆ ಭಾರೀ ಮೆಚ್ಚುಗೆಗಳು ವ್ಯಕ್ತವಾಗಿದೆ.
ಭಾರತೀಯ ಸೇನೆಯ ಸಿಬ್ಬಂದಿ ತಮ್ಮ ಕಾರ್ಯ ಮಿತಿಯನ್ನು ಬಿಟ್ಟು ಸಹಾಯ ಮಾಡಿದ್ದು ಇದೇ ಮೊದಲಲ್ಲ. ಕಾಶ್ಮೀರದಾದ್ಯಂತ ಸೇನೆಯು ನಾಗರಿಕರಿಗೆ ಎಲ್ಲಾ ತರನಾದ ಸಹಾಯವನ್ನು ಮಾಡಿದೆ, ಜಾಗೃತಿ ಮೂಡಿಸುವ ಕಾರ್ಯವನ್ನು, ಕಾರ್ಯಾಗಾರಗಳನ್ನು ನಡೆಸುತ್ತದೆ ಮತ್ತು ಕ್ರೀಡಾಕೂಟಗಳನ್ನು ಆಯೋಜಿಸಿ ಸಮುದಾಯ ನಿರ್ಮಾಣದಲ್ಲಿ ದೊಡ್ಡ ಪಾತ್ರವನ್ನು ವಹಿಸುತ್ತದೆ. 2014 ರಲ್ಲಿ ಈ ರಾಜ್ಯದಲ್ಲಿ ಸಂಭವಿಸಿದ ಭೀಕರ ಪ್ರವಾಹದ ಸಂದರ್ಭದಲ್ಲಿ, ಭಾರತೀಯ ಸೇನೆಯು ಬೃಹತ್ ಕಾರ್ಯಾಚರಣೆಗಳನ್ನು ನಡೆಸಿ ಜನರ ರಕ್ಷಣಾ ಕಾರ್ಯವನ್ನು ನಡೆಸಿತ್ತು.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.