ನವದೆಹಲಿ: ಪ್ರತಿಯೊಬ್ಬರಿಗೂ ಸೇವೆ, ಸೌಲಭ್ಯಗಳು ಹೆಚ್ಚು ಸುಲಭವಾಗಿ ಲಭ್ಯವಾಗುವಂತೆ ಮಾಡಲು ಭಾರತೀಯ ರೈಲ್ವೆ ಸಾಕಷ್ಟು ಶ್ರಮಿಸುತ್ತಿದೆ. ರೈಲು ಮತ್ತು ರೈಲು ನಿಲ್ದಾಣಗಳ ನವೀಕರಣ ಮತ್ತು ಅಭಿವೃದ್ಧಿಗಾಗಿ ಭಾರತೀಯ ರೈಲ್ವೆ ಹೆಚ್ಚು ಪರಿಣಾಮಕಾರಿಯಾಗಿ ಕಾರ್ಯನಿರ್ವಹಿಸುತ್ತಿದೆ. ಇದೀಗ ಮತ್ತೊಂದು ಮೈಲಿಗಲ್ಲು ಸಾಧಿಸಲು ಮುಂದಾಗಿರುವ ಅದು, ಐಆರ್ಎಸ್ಡಿಸಿ (ಭಾರತೀಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ನಿಗಮ) 22 ರೈಲ್ವೆ ನಿಲ್ದಾಣಗಳನ್ನು ನವೀಕರಿಸಲು ಎರಡು ತಿಳುವಳಿಕೆಯ ಒಪ್ಪಂದ (Memorandum of Agreements)ಗೆ ಸಹಿ ಹಾಕಿದೆ.
ಐಆರ್ಎಸ್ಡಿಸಿ ಪತ್ರಿಕಾ ಪ್ರಕಟಣೆಯ ಪ್ರಕಾರ, “ಭಾರತೀಯ ರೈಲ್ವೆ ನಿಲ್ದಾಣಗಳ ಅಭಿವೃದ್ಧಿ ನಿಗಮ ಮತ್ತು ಮೆಕಾನ್ ಲಿಮಿಟೆಡ್, ಅಂಧೇರಿ ಸೇರಿದಂತೆ ಒಟ್ಟು 8 ರೈಲ್ವೆ ನಿಲ್ದಾಣಗಳಲ ಅಭಿವೃದ್ಧಿಗಾಗಿ 21.06.2019 ರಂದು“ ರೈಲ್ವೆ ನಿಲ್ದಾಣ ಪುನರಾಭಿವೃದ್ಧಿ ”ಕುರಿತ ಒಪ್ಪಂದಕ್ಕೆ (ಎಂಒಎ) ಸಹಿ ಹಾಕಿದೆ. ಅಲ್ಲದೇ, ಬಾಂದ್ರಾ ಟರ್ಮಿನಸ್, ರಾಂಚಿ, ಚೆನ್ನೈ ಎಗ್ಮೋರ್. ಕೋಲ್ಕತಾ ಟರ್ಮಿನಲ್, ಕಾನ್ಪುರ್ ಸೆಂಟ್ರಲ್, ಕಲ್ಯಾಣ್ ಜೆಎನ್, ಲುಧಿಯಾನ, ಹೈದರಾಬಾದ್, ಮತ್ತು ಉದಯಪುರ ನಗರ ಸೇರಿದಂತೆ ಒಟ್ಟು 14 ರೈಲ್ವೆ ನಿಲ್ದಾಣಗಳ ಪುನರಾಭಿವೃದ್ಧಿಗಾಗಿಯೂ ಇದೇ ರೀತಿಯ ಒಪ್ಪಂದಕ್ಕೆ ಸಾರ್ವಜನಿಕ ವಲಯದ ಎರಡು ಉದ್ಯಮ EPIL ಮತ್ತು Bridge & Roofನೊಂದಿಗೆ ಸಹಿ ಹಾಕಲಾಗಿದೆ.
ಕೇಂದ್ರ ಸರ್ಕಾರದ ರೈಲು ನಿಲ್ದಾಣಗಳ ಪುನರಾಭಿವೃದ್ಧಿಯ ಮಹತ್ವದ ಕಾರ್ಯದಲ್ಲಿ ಈ ಒಪ್ಪಂದವೂ ಒಂದು ದೊಡ್ಡ ಮೈಲಿಗಲ್ಲನ್ನು ಸಾಧಿಸಲಿದೆ. ಮೆಕಾನ್ ಲಿಮಿಟೆಡ್, EPIL ಮತ್ತು Bridge & Roofಗಳು ಈ 22 ನಿಲ್ದಾಣಗಳ ಅಭಿವೃದ್ಧಿ / ಪುನರಾಭಿವೃದ್ಧಿಗಾಗಿ ವಿವರವಾದ ಪ್ರಾಜೆಕ್ಟ್ ವರದಿಗಳನ್ನು ಸಿದ್ಧಪಡಿಸುತ್ತವೆ ಮತ್ತು ನಿಲ್ದಾಣದ ಪುನರಾಭಿವೃದ್ಧಿ ಕಾರ್ಯಕ್ರಮದ ಅನುಷ್ಠಾನಕ್ಕಾಗಿ ಐಆರ್ಎಸ್ಡಿಸಿಗೆ ಪ್ರಾಜೆಕ್ಟ್ ಮ್ಯಾನೇಜ್ಮೆಂಟ್ ಕನ್ಸಲ್ಟೆಂಟ್ ಆಗಿ ಕಾರ್ಯನಿರ್ವಹಿಸಲಿವೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.