ಲಂಡನ್ : ಪಾಕಿಸ್ಥಾನದಿಂದ ಬಲುಚಿಸ್ಥಾನವನ್ನು ಪ್ರತ್ಯೇಕಿಸಬೇಕು ಎಂಬ ಕೂಗು ಜೋರಾಗುತ್ತಿದೆ. ಕ್ರಿಕೆಟ್ ವಿಶ್ವಕಪ್ ಕ್ರೀಡಾಕೂಟದಲ್ಲೂ ಈ ಬೇಡಿಕೆ ಸುದ್ದಿ ಮಾಡಿದೆ. ಬಲೂಚ್ ಹೋರಾಟಗಾರರು ಇಂಗ್ಲೆಂಡ್ನಲ್ಲಿ ಪ್ರತ್ಯೇಕ ಬಲೂಚಿಸ್ಥಾನದ ಪರವಾಗಿ ಹಾಕಿದ್ದ ಬ್ಯಾನರ್ ಅನ್ನು ಪಾಕಿಸ್ಥಾನದ ಕ್ರಿಕೆಟ್ ಅಭಿಮಾನಿಗಳು ಹರಿದು ಹಾಕಿದ್ದಾರೆ.
ಭಾನುವಾರ ದಕ್ಷಿಣ ಆಫ್ರಿಕಾ ಮತ್ತು ಪಾಕಿಸ್ಥಾನದ ನಡುವೆ ಪಂದ್ಯ ಜರುಗಿತ್ತು. ಈ ವೇಳೆ ಲಾರ್ಡ್ಸ್ ಕ್ರಿಕೆಟ್ ಮೈದಾನದ ಹೊರಗಡೆ ಪ್ರತ್ಯೇಕ ಬಲೂಚ್ ಪರವಾದ, ಪಾಕಿಸ್ಥಾನ ಬಲೂಚಿಸ್ಥಾನಿಯರ ವಿರುದ್ಧ ನಡೆಸುತ್ತಿರುವ ದೌರ್ಜನ್ಯಗಳನ್ನು ಖಂಡಿಸಿ ಬ್ಯಾನರ್ಗಳನ್ನು ಹಾಕಲಾಗಿತ್ತು. ಈ ಬ್ಯಾನರ್ಗಳನ್ನು ಪಾಕಿಸ್ಥಾನದ ಅಭಿಮಾನಿಗಳು ಹರಿದು ಹಾಕಿದ್ದಾರೆ. ಈ ದುರ್ವತನೆಗೆ ಪಾಕಿಸ್ಥಾನಿಯರ ವಿರುದ್ಧ ವ್ಯಾಪಾಕ ಖಂಡನೆಗಳು ವ್ಯಕ್ತವಾಗಿದೆ.
ಪಾಕಿಸ್ಥಾನ ತಮ್ಮ ಮೇಲೆ ನಡೆಸುತ್ತಿರುವ ದೌರ್ಜನ್ಯಗಳನ್ನು ಜಗತ್ತಿನ ಮುಂದೆ ಬಹಿರಂಗಪಡಿಸಲು ಮುಂದಾಗುತ್ತಿರುವ ಬಲೂಚಿಸ್ತಾನಿಯರನ್ನು ಕಟ್ಟಿ ಹಾಕುವ ಪ್ರಯತ್ನವನ್ನು ನಿರಂತರವಾಗಿ ಮಾಡಲಾಗುತ್ತಿದೆ. ಈ ಬಾರಿ ಕ್ರಿಕೆಟ್ ಮೈದಾನದ ಹೊರಗಡೆಯ ಪ್ರದೇಶವನ್ನು ಬಾಡಿಗೆಗೆ ಪಡೆದುಕೊಂಡು ಬಲೂಸ್ಥಾನಿ ಹೋರಾಟಗಾರರು ಪಾಕ್ ವಿರುದ್ಧ ಬ್ಯಾನರ್ ಹಾಕಿದ್ದರು. ಅದನ್ನೂ ಹರಿದು ಹಾಕಲಾಗಿದೆ.
ಆದರೆ ಯಾವುದಕ್ಕೂ ಎದೆಗುಂದದ ಬಲೂಚ್ ಹೋರಾಟಗಾರರು ತಮ್ಮ ಹೋರಾಟವನ್ನು ಮತ್ತಷ್ಟು ತೀವ್ರಗೊಳಿಸಲು ನಿರ್ಧರಿಸಿದ್ದಾರೆ. ಹಿಂದಿನಿಂದಲೂ ಈ ಹೋರಾಟಗಾರರು ಭಾರತ ಸೇರಿದಂತೆ ಇತರ ದೇಶಗಳು ತಮ್ಮ ಪರವಾಗಿ ನಿಲ್ಲಬೇಕು ಎಂಬ ಆಶಾವಾದವನ್ನು ವ್ಯಕ್ತಪಡಿಸುತ್ತಲೇ ಬಂದಿದ್ದಾರೆ. ಇತರ ದೇಶಗಳ ಬೆಂಬಲ ಸಿಕ್ಕರೆ ಪಾಕ್ ವಿರುದ್ಧದ ಹೋರಾಟವನ್ನು ಇವರು ಇನ್ನಷ್ಟು ತೀಕ್ಷ್ಣಗೊಳಿಸಲಿದ್ದಾರೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.