ಗೋದಾವರಿಯ ಪ್ರವಾಹದ ನೀರನ್ನು ಸದುಪಯೋಗಪಡಿಕೊಳ್ಳುವ ಸಲುವಾಗಿ ಆರಂಭಿಸಲಾದ ಕಾಲೇಶ್ವರಂ ಲಿಫ್ಟ್ ನೀರಾವರಿ ಯೋಜನೆಯು ತೆಲಂಗಾಣವನ್ನು ಬರ ಮುಕ್ತವಾಗಿಸುವ ಗುರಿಯನ್ನು ಹೊಂದಿದೆ. ಮುಖ್ಯಮಂತ್ರಿ ಕೆ ಚಂದ್ರಶೇಖರ್ ರಾವ್ ಅವರು ಉದ್ಘಾಟಿಸಲಿರುವ ಈ ಯೋಜನೆಯು 180 ಟಿಎಂಸಿ ಗೋದಾವರಿ ಪ್ರವಾಹದ ನೀರನ್ನು ಮೊದಲು ಶ್ರೀಪಾದ ಸಾಗರ್ ಯೆಲ್ಲಂಪಲ್ಲಿ ಬ್ಯಾರೇಜ್ಗೆ ಮತ್ತು ನಂತರ ಪ್ರಣಹಿತ ಸಂಗಮ ಸ್ಥಳದಿಂದ ಮಲ್ಲಣ್ಣ ಸಾಗರ್ಗೆ ತಿರುಗಿಸಲಿದೆ.
ರೂ.500 80,500-ಕೋಟಿ ವೆಚ್ಚದ ಈ ಎಂಜಿನಿಯರಿಂಗ್ ಅದ್ಭುತವು ವಿನ್ಯಾಸದ ವಿಷಯದಲ್ಲಿ ಮಾತ್ರವಲ್ಲ, ಗಾತ್ರ ಮತ್ತು ವ್ಯಾಪ್ತಿಯಲ್ಲಿಯೂ ವಿಶಿಷ್ಟವಾಗಿದೆ.
ಕೃಷಿಗೆ ಅನುಕೂಲ
ಗೋದಾವರಿಯ ನೀರನ್ನು ರಿವರ್ಸ್ ಪಂಪಿಂಗ್ ಮತ್ತು ಶೇಖರಣೆಯಿಂದ ಟ್ಯಾಪ್ ಮಾಡಲಾಗುವುದು, ಆ ಮೂಲಕ ಸುಮಾರು 18 ಲಕ್ಷ ಎಕರೆ ಪ್ರದೇಶದಲ್ಲಿನ ಕೃಷಿಗೆ ಅನುಕೂಲ ಮಾಡಿಕೊಡುವುದು, ಸುಮಾರು 18 ಲಕ್ಷ ಎಕರೆ ಹೊಸ ಅಯಾಕುಟ್ ರಚಿಸುವುದು ಮತ್ತು ಸಾವಿರಾರು ಟ್ಯಾಂಕ್ಗಳನ್ನು ಪುನಶ್ಚೇತನಗೊಳಿಸಲು ಸಹಾಯ ಮಾಡುವುದು, ಕೈಗಾರಿಕೆಗಳಿಗೆ ನೀರು ಒದಗಿಸುವುದು ಮತ್ತು ಸರಣಿ ಶೇಖರಣಾ ಟ್ಯಾಂಕ್ಗಳನ್ನು ಮತ್ತು ಪೈಪ್ಲೈನ್ಗಳ ಜಾಲವನ್ನು ರಚಿಸುವ ಮೂಲಕ ಹೈದರಾಬಾದ್, ಸಿಕಂದರಾಬಾದ್ ಸೇರಿದಂತೆ ಹಲವು ಕಡೆ ಕುಡಿಯುವ ನೀರು ಸರಬರಾಜು ಮಾಡುವುದು ಕೂಡ ಸೇರಿದೆ.
ಬ್ಯಾರೇಜ್ ಮತ್ತು ಜಲಾಶಯಗಳ ನಿರ್ಮಾಣದಿಂದ ಮತ್ತು ನಿರಂತರ ಪಂಪಿಂಗ್ ನಿಂದಾಗಿ ನೀರು ಗೋದಾವರಿಯಲ್ಲಿ ಸಂಗ್ರಹವಾಗಿದೆ. ಇದು ಭೂಸ್ವಾಧೀನ ಮತ್ತು ಜನರಿಗೆ ಪುನರ್ವಸತಿ ಕಲ್ಪಿಸುವ ತೊಂದರೆಗಳಿಂದ ಸರ್ಕಾರವನ್ನು ಮುಕ್ತಗೊಳಿಸಿದೆ.
ಮೆಡಿಗಡ್ಡ, ಅನ್ನಾರಾಮ್, ಮತ್ತು ಸುಂದಿಲ್ಲಾದಲ್ಲಿ ಬ್ಯಾರೇಜ್ಗಳನ್ನು ನಿರ್ಮಿಸಲಾಗಿದ್ದು, ಇಲ್ಲಿಂದ ಯೆಲ್ಲಂಪಲ್ಲಿ ಮತ್ತು ಶ್ರೀರಾಮ್ ಸಾಗರ್ ಯೋಜನೆಗಳಿಗೆ ನೀರು ಹರಿಸಲಾಗುತ್ತದೆ. ಇದರಿಂದಾಗಿ, ತೆಲಂಗಾಣದ 199 ಕಿ.ಮೀ ವಿಸ್ತಾರದಲ್ಲಿ ಗೋದಾವರಿ ಜೀವಂತವಾಗಲಿದೆ.
ಮೂರು ವರ್ಷಗಳಲ್ಲಿ, ಕಾಳೇಶ್ವರಂ ಯೋಜನೆಯ ಪ್ರಮುಖ ಅಂಶಗಳಾದ ಬ್ಯಾರೇಜ್ ಮತ್ತು ಪಂಪ್ ಹೌಸ್ಗಳ ನಿರ್ಮಾಣ ಪೂರ್ಣಗೊಂಡಿದೆ ಮತ್ತು ಜಲಾಶಯಗಳ ನಿರ್ಮಾಣವು ತ್ವರಿತಗತಿಯಲ್ಲಿ ಸಾಗುತ್ತಿದೆ. ವಿಶ್ವದ ಅತಿದೊಡ್ಡ ಪಂಪಿಂಗ್ ಸ್ಟೇಷನ್ ಅನ್ನು ಅಂಡರ್ ಗ್ರೌಂಡಿನಲ್ಲಿ ಸ್ಥಾಪಿಸಲಾಗಿದೆ ಮತ್ತು ಯೆಲ್ಲಂಪಲ್ಲಿ ಬ್ಯಾರೇಜ್ ಮತ್ತು ಮಲ್ಲಣ್ಣ ಸಾಗರ್ ಜಲಾಶಯದ ನಡುವೆ 81 ಕಿ.ಮೀ. ಸುರಂಗವನ್ನು ರಚನೆ ಮಾಡಲಾಗಿದೆ. ಇದು 2 ಟಿಎಂಸಿ ನೀರನ್ನು (22,000 ಕ್ಯೂಸೆಕ್) ನಿರಂತರವಾಗಿ ಸಾಗಿಸಬಲ್ಲದು.
ಪ್ಯಾಕೇಜ್ -8 ರಲ್ಲಿ ವಿಶ್ವದ ಅತಿದೊಡ್ಡ ಪಂಪ್ ಹೌಸ್ ನಿರ್ಮಾಣವಾಗಿದ್ದು, ಇದರಲ್ಲಿ ತಲಾ 139 ಮೆಗಾವ್ಯಾಟ್ನ ಏಳು ಪಂಪ್ಗಳನ್ನು ಅಂಡರ್ ಗ್ರೌಂಡ್ ಗಳಲ್ಲಿ ನಿಯೋಜಿಸಲಾಗಿದೆ. ಜೊತೆಗೆ 150 ಮೀಟರ್ ಅಂಡರ್ ಗ್ರೌಂಡಿನಲ್ಲಿ ಎಂಟು ಪಂಪಿಂಗ್ ಸ್ಟೇಷನ್ಗಳನ್ನು ಸ್ಥಾಪಿಸಲಾಗಿದೆ. ಈ ಪಂಪಿಂಗ್ ಕೇಂದ್ರವು ಐದು ಮಹಡಿಗಳನ್ನು ಹೊಂದಿದ್ದು, ಪ್ರತಿ ಮಹಡಿ ಹೌಸಿಂಗ್ ಲಿಫ್ಟಿಂಗ್ ಕಾರ್ಯಾಚರಣೆಯನ್ನು ಹೊಂದಿದೆ.
ಯೋಜನೆಯ ಮೆಗಾ ಪಂಪ್ಗಳು ಮತ್ತು ಮೋಟರ್ಗಳು 100-600 ಮೀಟರ್ ನೀರನ್ನು ಎತ್ತುತ್ತವೆ ಮತ್ತು ಮುಖ್ಯ ಕಾಲುವೆಯ ಮೂಲಕ 400 ಕಿ.ಮೀ. ನೀರನ್ನು ಸಾಗಿಸುತ್ತವೆ. ಪ್ರಾಜೆಕ್ಟ್ ಎಂಜಿನಿಯರ್ಗಳ ಪ್ರಕಾರ, 2005 ರಲ್ಲಿ ಈಜಿಪ್ಟ್ನಲ್ಲಿ ತೋಶ್ಕಾ ಯೋಜನೆಯ ಭಾಗವಾಗಿ ನಿರ್ಮಿಸಲಾದ ಮುಬಾರಕ್ ಪಂಪಿಂಗ್ ಸ್ಟೇಷನ್ ಎಂಜಿನಿಯರಿಂಗ್ ಅದ್ಭುತವಾಗಿತ್ತು. ಇದೀಗ ಈ ಸಾಲಿಗೆ ಕಾಳೇಶ್ವರಂ ನೀರಾವರಿ ಯೋಜನೆ ಸೇರಿದೆ.
ಅನೇಕ ಗ್ರಾಮಗಳಿಗೆ ಕುಡಿಯುವ ನೀರು ಒದಗಿಸಲು ಮತ್ತು ಟ್ಯಾಂಕ್ಗಳ ಸಾಮರ್ಥ್ಯವನ್ನು ಸುಧಾರಿಸಲು ಆರಂಭಿಸಲಾದ ಮಿಷನ್ ಕಾಕತೀಯ ಮತ್ತು ಮಿಷನ್ ಭಾಗೀರಥ ಯೋಜನೆಗಳಿಗೆ ಕಳೇಶ್ವರಂ ಯೋಜನೆಯು ಭಾರೀ ಬೆಂಬಲವನ್ನು ನೀಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.