ನವದೆಹಲಿ: ಕೇಂದ್ರ ಸರ್ಕಾರದ ಮಹತ್ವಪೂರ್ಣ ಯೋಜನೆಗಳಲ್ಲಿ ಒಂದಾದ ಪ್ರಧಾನ ಮಂತ್ರಿ ಕಿಸಾನ್ ಸಮ್ಮನ್ ನಿಧಿ (ಪಿಎಂ ಕಿಸಾನ್) ಯೋಜನೆಯಡಿ ಇದುವರೆಗೆ 3.3 ಕೋಟಿ ರೈತರಿಗೆ ಮೊದಲ ಕಂತಿನ ಹಣ 2,000 ರೂಗಳನ್ನು ಹಂಚಲಾಗಿದೆ ಎಂದು ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್ ತೋಮರ್ ಅವರು ಶುಕ್ರವಾರ ಸಂಸತ್ತಿಗೆ ಮಾಹಿತಿಯನ್ನು ನೀಡಿದ್ದಾರೆ.
ಅಲ್ಲದೇ, 2ನೇ ಕಂತಿನ ಹಣವನ್ನು ಸ್ವೀಕರಿಸಿದ ರೈತರ ಸಂಖ್ಯೆಯ 2.86 ಕೋಟಿಯಾಗಿದೆ. ಎರಡೂ ಕಂತುಗಳಲ್ಲಿಯೂ ಉತ್ತರಪ್ರದೇಶದ ರೈತರು ಸಿಂಹಪಾಲನ್ನು ಪಡೆದುಕೊಂಡಿದ್ದಾರೆ ಎಂದು ತೋಮರ್ ಹೇಳಿದ್ದಾರೆ.
ಉತ್ತರ ಪ್ರದೇಶದ 1.12 ಕೋಟಿ ಫಲಾನುಭವಿ ರೈತರು ಮೊದಲ ಕಂತು ಪಡೆದಿದ್ದಾರೆ, 1.08 ಕೋಟಿ ರೈತರು 2ನೇ ಕಂತನ್ನು ಪಡೆದುಕೊಂಡಿದ್ದಾರೆ. ಎರಡನೇಯ ಅತ್ಯಧಿಕ ಪಾಲನ್ನು ಆಂಧ್ರಪ್ರದೇಶ ಪಡೆದುಕೊಂಡಿದ್ದು, ಆಂಧ್ರದ 34.43 ಲಕ್ಷ ರೈತರು ಮೊದಲ ಕಂತು ಪಡೆದರೆ, 31.27 ಲಕ್ಷ ರೈತರು ಎರಡನೇ ಕಂತು ಪಡೆದುಕೊಂಡಿದ್ದಾರೆ.
ಪ್ರಧಾನಿ ಆಗಿ ಎರಡನೇ ಅವಧಿಗೆ ಪ್ರಮಾಣ ವಚನ ಸ್ವೀಕರಿಸಿದ ಮೊದಲ ದಿನವೇ ನರೇಂದ್ರ ಮೋದಿಯವರು ಪಿಎಂ ಕಿಸಾನ್ ಸವಲತ್ತನ್ನು ಎಲ್ಲಾ ರೈತರಿಗೂ ಒದಗಿಸುವ ಸಲುವಾಗಿ, ಹಣ ಪಡೆಯಲು ರೈತರಿಗೆ ಇದ್ದ 2.5 ಎಕರೆ ಭೂ ಮಿತಿಯನ್ನು ತೆಗೆದುಹಾಕಲು ನಿರ್ಧರಿಸಿದರು. ಪ್ರಸ್ತುತ ಈ ಯೋಜನೆಯನ್ನು ದೇಶದ ಎಲ್ಲ ರೈತರಿಗೂ ವಿಸ್ತರಿಸಲಾಗಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.