ಡ್ರೈವಿಂಗ್ ಲೈಸೆನ್ಸ್ಗಾಗಿ ಅರ್ಜಿ ಸಲ್ಲಿಸುವಾಗ ಸಿಬ್ಬಂದಿಗಳು ದೀಪಾಳಿಗೆ ಉದ್ಯೋಗವನ್ನು ಉಲ್ಲೇಖಿಸುವಂತೆ ಸೂಚಿಸಿದರು. ಒಂದು ಕ್ಷಣ ಆಕೆ ಅವಕ್ಕಾದಳು, ತನ್ನ ಉದ್ಯೋಗವನ್ನು ಹೇಗೆ ವಿವರಿಸಲಿ ಎಂಬುದು ಆಕೆಯ ಗೊಂದಲವಾಗಿತ್ತು. ‘ನೀವು ಏನಾದರು ಕೆಲಸ ಮಾಡುತ್ತಿದ್ದೀರಾ ಅಥವಾ ..’ ಎಂದು ಸಿಬ್ಬಂದಿ ರಾಗ ತೆಗೆಯುವುದರೊಳಗೆ ಆಕೆ ‘ನಾನು ತಾಯಿ’ ಎಂದು ಹೇಳಿ ಬಿಟ್ಟಳು.
“ನಾವು ತಾಯಿಯನ್ನು ಉದ್ಯೋಗದ ಪಟ್ಟಿಗೆ ಸೇರಿಸುವುದಿಲ್ಲ.. ಅದು ‘ಹೌಸ್ವೈಫ್ ವ್ಯಾಪ್ತಿಗೆ ಬರುತ್ತದೆ” ಎಂದು ಸ್ಪಷ್ಟವಾಗಿ ಆತ ಹೇಳಿಬಿಟ್ಟ.
ಮತ್ತೊಂದು ದಿನ ಸಾರ್ವಜನಿಕ ಕಛೇರಿಯೊಂದಕ್ಕೆ ಹೋದಾಗಲೂ ದೀಪಾಳಿಗೆ ಇದೇ ತರನಾದ ಸನ್ನಿವೇಶ ಎದುರಾಯಿತು. ಅಲ್ಲಿನ ಸಿಬ್ಬಂದಿಯೂ ‘ನಿಮ್ಮ ಉದ್ಯೋಗವೇನು?’ ಎಂದು ಕೇಳಿದ.
“ನಾನು Research Associate in the field of Child Development and Human Relations ಆಗಿದ್ದೇನೆ’ ಎಂದು ದೀಪಾ ಆತ್ಮವಿಶ್ವಾಸದೊಂದಿಗೆ ನುಡಿದಳು. ಸಿಬ್ಬಂದಿ ಗೊಂದಲಕ್ಕೀಡಾದ, ಆತ ಬರೆಯುತ್ತಿರುವ ಪೆನ್ ಅರ್ಧದಲ್ಲೇ ನಿಂತಿತು. ತನಗೆ ಸರಿಯಾಗಿ ಕೇಳಿಸಲಿಲ್ಲ ಎನ್ನುವ ಭಾವದೊಂದಿಗೆ ಆತ ದೀಪಾಳ ಮುಖ ನೋಡಿದ. ಹೀಗಾಗಿ ಮತ್ತೊಮ್ಮೆ ದೀಪಾ, ಸ್ಪಷ್ಟವಾದ ಧ್ವನಿಯಲ್ಲಿ ತನ್ನ ಶೀರ್ಷಿಕೆಯನ್ನು ಪುನರುಚ್ಚರಿಸಿದಳು.
‘ನೀವು ಈ ಕ್ಷೇತ್ರದಲ್ಲಿ ಏನು ಮಾಡುತ್ತೀರಿ?’ ಎಂದು ಸಿಬ್ಬಂದಿ ಆಸಕ್ತಿಯಿಂದ ಕೇಳಿದ.
ಯಾವುದೇ ಆತಂಕವಿಲ್ಲದೆ ದೀಪಾ, “ಲ್ಯಾಬೋರೇಟರಿಯಲ್ಲಿ ಮತ್ತು ಫೀಲ್ಡ್ (ಒಳಾಂಗಣ ಮತ್ತು ಹೊರಾಂಗಣ)ಗಳಲ್ಲಿ ರಿಸರ್ಚ್ ಪ್ರೋಗ್ರಾಂ ಅನ್ನು ಮುಂದುವರೆಸುತ್ತಿದ್ದೇನೆ. ನಾನು ನನ್ನ ಮಾಸ್ಟರ್ (ಕುಟುಂಬ)ಗಳಿಗಾಗಿ ಕಾರ್ಯನಿರ್ವಹಿಸುತ್ತಿದ್ದೇನೆ ಮತ್ತು ಈಗಾಗಲೇ 3 ಯಶಸ್ಸು (ಒಂದು ಮಗ ಮತ್ತು ಒಂದು ಮಗಳು)ಗಳನ್ನು ಪಡೆದುಕೊಂಡಿದ್ದೇನೆ. ಮಾನವೀಯ ವಿಭಾಗದಲ್ಲಿ ಅತೀ ಹೆಚ್ಚು ಬೇಡಿಕೆಯ ಉದ್ಯೋಗವಿದು (ಯಾವುದೇ ತಾಯಿ ಕಾಳಜಿ ವಹಿಸಲು ನಿರಾಕರಿಸುತ್ತಾಳೆಯೇ?) ಮತ್ತು ನಾನು ದಿನಕ್ಕೆ 14 ಗಂಟೆಗಳ ಕಾಲ ದುಡಿಯುತ್ತೇನೆ. ಆದರೆ ಉದ್ಯೋಗ ಹಣಕ್ಕಿಂತಲೂ ಹೆಚ್ಚು ತೃಪ್ತಿ ನೀಡುವಂತಹುದು”.
ದೀಪಾಳ ಮಾತು ಮುಗಿಯುತ್ತಿದ್ದಂತೆ ಸಿಬ್ಬಂದಿ ಆಕೆಯನ್ನು ಗೌರವಪೂರ್ವಕವಾಗಿ ನೋಡಿದ, ಅರ್ಜಿ ಭರ್ತಿ ಮಾಡಿ ಆಕೆಯನ್ನು ಬಾಗಿಲನವರೆಗೂ ಗೌರವಾದರದೊಂದಿಗೆ ಬಂದು ಬೀಳ್ಕೊಟ್ಟ.
ಆಕೆ ವಾಪಾಸ್ ಆದಳು, ಮನಮೋಹಕ ಹೊಸ ವೃತ್ತಿಯಿಂದ ಉತ್ತೇಜಿತಳಾದ ಆಕೆಯನ್ನು 8 ವರ್ಷ ಮತ್ತು 5 ವರ್ಷದ (ಆಕೆಯ ಮಕ್ಕಳು) ಲ್ಯಾಬ್ ಸಹಾಯಕರು ಪ್ರೀತಿಯ ಅಪ್ಪುಗೆಯೊಂದಿಗೆ ಸ್ವಾಗತಿಸಿದರು. ಮಹಡಿಯ ಮೇಲಿದ್ದ ತನ್ನ Child Development ಪ್ರೋಗ್ರಾಂನಲ್ಲಿ ತನ್ನ ಹೊಸ ಪ್ರಯೋಗಿಕ ಮಾದರಿ (2 ವರ್ಷದ ಮಗು)ಯು ನಾವೀನ್ಯ ಮಾತುಗಾರಿಕಾ ಶೈಲಿಯನ್ನು ಪರೀಕ್ಷೆಗೊಳಪಡಿಸುತ್ತಿದ್ದನ್ನು ಆಕೆ ಆಲಿಸಿದಳು. ವಿಜಯದ ಭಾವ ದೀಪಾಳಿಗೆ ಮೂಡಿತು. ‘ಕೇವಲ ತಾಯಯಾಗಿರುವುದಕ್ಕಿಂತಲೂ” ಮನುಕುಲಕ್ಕೆ ಹೆಚ್ಚು ವಿಶಿಷ್ಟ ಮತ್ತು ಅನಿವಾರ್ಯವಾಗಿರುವುದರ ಬಗ್ಗೆಯೂ ಆಕೆ ಅಧಿಕೃತ ದಾಖಲೆಗಳನ್ನು ಪರಿಶೀಲಿಸಿದಳು. ಅಜ್ಜಿ, ಚಿಕ್ಕಮ್ಮಂದಿರೂ ಈ ಸಾಲಲ್ಲಿ ಇದ್ದರು.
ಅಜ್ಜಿಯರನ್ನು ‘ಸೀನಿಯರ್ ರಿಸರ್ಚ್ ಅಸೋಸಿಯೇಟ್ ಇನ್ ದಿ ಫೀಲ್ಡ್ ಆಫ್ ಚೈಲ್ಡ್ ಡೆವಲಪ್ಮೆಂಟ್ ಆ್ಯಂಡ್ ಹ್ಯುಮನ್ ರಿಲೇಶನ್ಸ್’ ಎಂದು ಕರೆಯಬಹುದೇ? ಚಿಕ್ಕಮ್ಮನನ್ನು ‘ಅಸೋಸಿಯೇಟ್ ರಿಸರ್ಚ್ ಅಸೋಸಿಯೇಟ್ಸ್’ ಎನ್ನಬಹುದೇ?
ತಾಯ್ತನ..ಆಹಾ ಎಂತಹ ಅದ್ಭುತವಾದ ವೃತ್ತಿ!
ನಾವು ಏನು ಮಾಡುತ್ತೇವೆ ಎಂಬುದಲ್ಲ, ಆದರೆ ನಾವು ಮಾಡಿದ್ದನ್ನು ನಾವು ಹೇಗೆ ನೋಡುತ್ತೇವೆ ಎಂಬುದು ಬದಲಾವಣೆಯನ್ನು ತರುತ್ತದೆ.
ಮೂಲ ಲೇಖನ: ಡಾ|| ಮನಮೋಹನ್ ವೈದ್ಯ
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.