ನೊಯ್ಡಾ: ಚೀನಾದ ಸೆಲ್ಫೋನ್ ತಯಾರಕ ಶಿಯೋಮಿಗೆ ಬಿಡಿ ಭಾಗಗಳನ್ನು ಸರಬರಾಜು ಮಾಡುವ ಹಾಲಿಟೆಕ್ ಟೆಕ್ನಾಲಜಿ ತನ್ನ ಮೊದಲ ಉತ್ಪಾದನಾ ಘಟಕ ಸೌಲಭ್ಯವನ್ನು ಉತ್ತರ ಪ್ರದೇಶದ ಗ್ರೇಟರ್ ನೋಯ್ಡಾದಲ್ಲಿ ಸ್ಥಾಪಿಸಿದೆ ಎಂದು ದಿ ಎಕನಾಮಿಕ್ ಟೈಮ್ಸ್ ವರದಿ ಮಾಡಿದೆ.
ಅಲ್ಲದೇ, ಭಾರತದಲ್ಲಿ ತನ್ನ ಅಸ್ತಿತ್ವವನ್ನು ವಿಸ್ತರಣೆ ಮಾಡುವ ಸಲುವಾಗಿ ಈ ಕಂಪನಿಯು ಮೂರು ವರ್ಷಗಳ ಅವಧಿಗೆ 200 ದಶಲಕ್ಷ ಡಾಲರ್ ಹೂಡಿಕೆ ಮಾಡುವುದಾಗಿಯೂ ಘೋಷಿಸಿದೆ.
ಹಾಲಿಟೆಕ್ ವಿಶ್ವದ ಕೆಲವು ದೊಡ್ಡ ಸೆಲ್ಫೋನ್ ಕಂಪನಿಗಳಿಗೆ ಭಾಗಗಳನ್ನು ಪೂರೈಕೆ ಮಾಡುತ್ತದೆ. ಈ ಹಿಂದೆ ತಿರುಪತಿಯಲ್ಲಿ ಘಟಕವನ್ನು ಸ್ಥಾಪಿಸಲು ಆಂಧ್ರಪ್ರದೇಶ ಸರ್ಕಾರದೊಂದಿಗೆ ಮಾತುಕತೆಯನ್ನು ಇದು ನಡೆಸಿತ್ತು, ಆದರೆ ಒಪ್ಪಂದಕ್ಕೆ ಬರಲು ಸಾಧ್ಯವಾಗಿರಲಿಲ್ಲ. ಆದರೆ ಉತ್ತರಪ್ರದೇಶ ಸರ್ಕಾರವು ತನ್ನ ರಾಜ್ಯದ ಎಲೆಕ್ಟ್ರಾನಿಕ್ಸ್ ಉತ್ಪಾದನಾ ನೀತಿಯಡಿಯಲ್ಲಿ ಘಟಕಗಳನ್ನು ಸ್ಥಾಪಿಸಲು ಹಲವಾರು ಪ್ರೋತ್ಸಾಹಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಅದರ ಫಲವಾಗಿ ಹಾಲಿಟೆಕ್ ನೊಯ್ಡಾದಲ್ಲಿ ಘಟಕವನ್ನು ಸ್ಥಾಪನೆ ಮಾಡಿದೆ.
ಈ ಹೊಸ ಘಟಕವು 2019 ರ ಮೂರನೇ ತ್ರೈಮಾಸಿಕದಲ್ಲಿ ಉತ್ಪಾದನೆಯನ್ನು ಪ್ರಾರಂಭಿಸಲಿದೆ ಎಂದು ಹೇಳಲಾಗಿದೆ. ಇದರಿಂದ ಮೂರು ವರ್ಷಗಳಲ್ಲಿ 6,000 ಉದ್ಯೋಗಗಳನ್ನು ಸೃಷ್ಟಿಯಾಗಲಿದೆ ಎಂದು ನಂಬಲಾಗಿದೆ. ಕಂಪನಿಯು 25,000 ಚದರ ಮೀಟರ್ನಲ್ಲಿ 4 ಕಾರ್ಖಾನೆಗಳನ್ನು ನಿರ್ಮಿಸಲಿದೆ ಮತ್ತು ಫ್ಲೆಕ್ಸಿಬಲ್ ಪ್ರಿಂಟೆಡ್ ಸರ್ಕ್ಯೂಟ್ಗಳನ್ನು, ಕೆಪ್ಯಾಸಿಟಿವ್ ಟಚ್ ಸ್ಕ್ರೀನ್ ಮಾಡ್ಯೂಲ್ಗಳನ್ನು, ತೆಳುವಾದ ಫಿಲ್ಮ್ ಟ್ರಾನ್ಸಿಸ್ಟರ್ಗಳನ್ನು ಮತ್ತು ಇತರ ಮೊಬೈಲ್ ಫೋನ್ ಭಾಗಗಳನ್ನು ಇಲ್ಲಿ ಉತ್ಪಾದನೆ ಮಾಡಲಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.