ನವದೆಹಲಿ: ಹಿಂದಿನ ವರ್ಷಗಳಂತೆ ಈ ಬಾರಿಯೂ ವೆಸ್ಟರ್ನ್ ನಾವೆಲ್ ಕಮಾಂಡ್ ಅಂತಾರಾಷ್ಟ್ರೀಯ ಯೋಗ ದಿನವನ್ನು ಐಎನ್ಎಸ್ ವಿರಾಟ್ನಲ್ಲಿ ಆಚರಿಸಿಕೊಂಡಿದೆ. ನೌಕೆಯ ಹಲವಾರು ಸಿಬ್ಬಂದಿಗಳು ಆನ್ಬೋರ್ಡ್ ವಿರಾಟ್ನಲ್ಲಿ ಯೋಗವನ್ನು ಮಾಡಿದರು. ಒಂದು ಕಾಲದಲ್ಲಿ ಭಾರತೀಯ ನೌಕೆಯ ಮಹತ್ವದ ನೌಕೆಯಾಗಿದ್ದ ವಿರಾಟ್, ಈಗ ನಿವೃತ್ತಿಗೊಂಡಿದೆ.
ಐಎನ್ಎಸ್ ವಿರಾಟ್ ಮಾತ್ರವಲ್ಲದೇ, ಐಎನ್ಎಸ್ ಸಿಂಧುಧ್ವಜದಲ್ಲೂ ಯೋಗವನ್ನು ನೌಕಾ ಸಿಬ್ಬಂದಿ ಮಾಡಿದರು.
ವೆಸ್ಟರ್ನ್ ನಾವೆಲ್ ಕಮಾಂಡ್ ತನ್ನ ಅಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಕ್ರೀಡೆಯಲ್ಲಿ ಪಳಗುವಂತೆ, ಸಾಹಸಗಳಲ್ಲಿ ಭಾಗಿಯಾಗುವಂತೆ, ದೈಹಿಕ ಬಲಾಢ್ಯತೆ ಹೊಂದುವಂತೆ ಪ್ರೋತ್ಸಾಹ ನೀಡುತ್ತಲೇ ಬಂದಿದೆ. ಯೋಗ ಮಾಡುವುದನ್ನು ಅದು ಉತ್ತೇಜಿಸುತ್ತದೆ. 2015ರಿಂದಲೂ ವೆಸ್ಟರ್ನ್ ನಾವಲ್ ಕಮಾಂಡ್ ಪ್ರತಿವರ್ಷ ಆನ್ಬೋರ್ಡ್ ಐಎನ್ಎಸ್ಗಳಲ್ಲಿ ಯೋಗದಿನದಂದು ಯೋಗ ಮಾಡುತ್ತಾ ಬರುತ್ತಿದೆ.
ಆರೋಗ್ಯಕರ ಮತ್ತು ಸಂತೋಷದ ಜೀವನಕ್ಕಾಗಿ ಮನಸ್ಸು, ದೇಹ, ಭಾವನೆ ಮತ್ತು ಶಕ್ತಿಗಳ ಸಂಯೋಜನೆಯನ್ನು ಸಾಧಿಸಲು ವೆಸ್ಟರ್ನ್ ನಾವೆಲ್ ಕಮಾಂಡ್ ‘ಫಿಟ್ನೆಸ್ ಟು ವೆಲ್ನೆಸ್’ ಎಂಬ ಯೋಗ ತತ್ವವನ್ನುಅಳವಡಿಸಿಕೊಂಡಿದೆ.
ಅಂತರರಾಷ್ಟ್ರೀಯ ಯೋಗ ದಿನಾಚರಣೆಗೂ ಮುನ್ನ, ಭಾರತೀಯ ನೌಕಾಪಡೆಯ ವೆಸ್ಟರ್ನ್ ನಾವೆಲ್ ಕಮಾಂಡ್ ತನ್ನ ನೌಕಾ ಘಟಕಗಳಲ್ಲಿ ಮತ್ತು ವಸತಿ ಪ್ರದೇಶಗಳಲ್ಲಿ ಕಳೆದ ವಾರದಿಂದ ಹೆಚ್ಚುವರಿ ಯೋಗ ಶಿಬಿರಗಳನ್ನು ಆಯೋಜಿಸುತ್ತಾ ಬಂದಿದೆ.
ನ್ಯೂಸ್ 13 ಸಮಾಜದ ಧನಾತ್ಮಕ ಸುದ್ದಿಗಳನ್ನು ಹಾಗೂ ರಾಷ್ಟ್ರೀಯ ವಿಚಾರಗಳನ್ನು ನಿಮಗೆ ತಲುಪಿಸುವ ಪ್ರಯತ್ನ ಮಾಡುತ್ತದೆ. ಈ ರೀತಿ ಇನ್ನಷ್ಟು ಉತ್ತಮ ಸುದ್ದಿಗಳನ್ನು ತಲುಪಿಸಲು ನಿಮ್ಮ ಸಹಕಾರವನ್ನು ಅಪೇಕ್ಷಿಸುತ್ತಿದ್ದೇವೆ. ಈ ಕಾರ್ಯದಲ್ಲಿ ನೀವೂ ನಮ್ಮೊಂದಿಗೆ ಜೊತೆಯಾಗಿ.
News13 strives to publish and promote positive news/happenings and nationalistic thoughts. Join hands with us in this constructive cause. We hope and expect your co-operation in this objective of broadcasting news that shall keep up with quality journalism.